Skip to main content
ವಿಡಿಯೋ
1/2
crime

ಮನೆಗೆ ನುಗ್ಗಿ ಅತ್ತೆ, ಸೊಸೆ ಮಾಂಗಲ್ಯ(110 ಗ್ರಾಂ ಚಿನ್ನ) ದೋಚಿದ ಪಕ್ಕದ ಮನೆ ನಿವಾಸಿಗಳು: ದುಶ್ಮನ್‌ ಪಕ್ಕದಲ್ಲೆ ಇರ್ತಾರೆ, ಎಚ್ಚರಿಕೆ!

By Gireesh Vasishta
ಮನೆಗೆ ನುಗ್ಗಿ ಅತ್ತೆ, ಸೊಸೆ ಮಾಂಗಲ್ಯ(110 ಗ್ರಾಂ ಚಿನ್ನ) ದೋಚಿದ ಪಕ್ಕದ ಮನೆ ನಿವಾಸಿಗಳು: ದುಶ್ಮನ್‌ ಪಕ್ಕದಲ್ಲೆ ಇರ್ತಾರೆ, ಎಚ್ಚರಿಕೆ!

ದುಶ್ಮನ್‌ ಕಿದರ್‌ ಹೈ ಅಂದರೆ ಬಗಲ್‌ ಮೇ ಹೈ ಎನ್ನುವ ಹಾಗೆ, ಈ ಕೇಸ್‌ನಲ್ಲಿ ಪಕ್ಕದ ಮನೆಯವರೆ ಕಳ್ಳರಾಗಿದ್ದಾರೆ. ಹೀಗಾಗಿ ಯಾರನ್ನ ನಂಬುವುದು, ಯಾರನ್ನ ಬಿಡುವುದು ಎನ್ನುವುದೆ ತಿಳಿಯುವುದಿಲ್ಲ..

ದಾವಣಗೆರೆ: ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಎಲ್ಲರಿಗೂ ಇಷ್ಟ ಆದರೆ ಅದನ್ನ ತಗೋಬೇಕು ಅಂದ್ರೆ ಸಾಕಷ್ಟು ಹಣ ಇರಬೇಕು. ಕೆಲವೊಮ್ಮೆ ಚಿನ್ನವನ್ನು ತೆಗೆದುಕೊಳ್ಳಕ್ಕೆ ಆಗದಿದ್ದರೆ ಅದನ್ನ ಸಂಪಾದಿಸುವ ಸುಲಭ ಮಾರ್ಗ ಅಂದ್ರೆ ಕಳ್ಳತನ. ಆದರೆ ಕಳ್ಳತನ ಬೇರೆಯವರಿಂದ ಆದರೆ ಏನಾದರೂ ಹೇಳಬಹುದು ಈ ಕೇಸ್ ನಲ್ಲಿ ಪಕ್ಕದ ಮನೆಯವರಿಂದಲೇ ಕಳ್ಳತನವಾಗಿದೆ..

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ಘಟನೆ ನಡೆದಿದೆ. ಆಗಸ್ಟ್ 14ರಂದು ಚಿರಡೋಣಿ ಕ್ಯಾಂಪ್‌ನಲ್ಲಿ ಮನೆಗೆ ನುಗ್ಗಿ ಅತ್ತೆ, ಸೊಸೆಯ ಮಾಂಗಲ್ಯ ಕಳ್ಳತನವನ್ನು ಮಾಡಿದ್ದಾರೆ. ಮನೆಗೆ 14 ಸಿಸಿ ಕ್ಯಾಮರಾ ಅಳವಡಿಸಿದ್ದರೂ ಪ್ಲ್ಯಾನ್ ಮಾಡಿ ಸ್ಕೆಚ್. ಮನೆಯಲ್ಲಿ ಯಾರೂ ಪುರುಷರು ಇಲ್ಲದ ವೇಳೆ ಎಂಟ್ರಿ ಕೊಟ್ಟಿದ್ದ ಖದೀಮರು.

ಅಡಿಕೆ ಸುಲಿಯುವ ಕತ್ತಿ, ಚಾಕು ಹಿಡಿದು ಮನೆ ನುಗ್ಗಿದ್ದ ಇಬ್ಬರು, ಮನೆಗೆ ಕಳ್ಳ ನುಗ್ಗಿದ್ದನ್ನು ಗಮನಿಸಿದ್ದ ಸೊಸೆ ಸುಮಲತಾ, ತಕ್ಷಣ ಕಿರುಚಾಡುವ ವೇಳೆ ಸೊಸೆಯ ಮೇಲೆ ಎಗರಿದ್ದ ಕಳ್ಳ, ಕಳ್ಳನಿಂದ ತಪ್ಪಿಸಿಕೊಳ್ಳುವ ವೇಳೆ ಸೊಸೆ ಕೈಗೆ ಗಾಯವಾಗಿತ್ತು, ಈ ವೇಳೆ ಸೊಸೆ ಸುಮಲತಾ ಮಾಂಗಲ್ಯ ಕಿತ್ತುಕೊಂಡಿದ್ದ ಒಬ್ಬ ಕಳ್ಳ, ನಂತರ ಬೆಡ್‌ರೂಮ್‌ಗೆ ತೆರಳಿ ಡೋರ್‌ ಲಾಕ್ ಮಾಡಿ ಗಂಡನಿಗೆ ಫೋನ್ ಮಾಡಿದ್ದ ಸುಮಲತಾ.ಇದನ್ನು ಓದಿ: ಸಿಗ್ನಲ್ ಕಾರಣ BMTC ಬಸ್ ನಿಲ್ಲಿಸಿದ್ದ ಚಾಲಕ: ಸೈಡ್‌ ಬಿಡಲಿಲ್ಲ ಎಂದು ಆಟೋ ಚಾಲಕನಿಂದ ಹಲ್ಲೆ

ಬಳಿಕ ಅತ್ತೆ ವೀರಯಮ್ಮ ಮಾಂಗಲ್ಯ ಸಹ ಕಿತ್ತುಕೊಂಡಿದ್ದಾರೆ. ಒಟ್ಟು 110 ಗ್ರಾಂ ತೂಕದ ಎರಡು ಚಿನ್ನದ ಮಾಂಗಲ್ಯ ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಬಸವಾಪಟ್ಟಣ ಪೊಲೀಸರು. ಕಳ್ಳತನದ ಸಮಯದಲ್ಲಿ ಮನೆಯಲ್ಲಿದ್ದ 14 ಸಿಸಿ ಕ್ಯಾಮರಾ ಪೈಕಿ ಮೂರು ಕ್ಯಾಮರಾಗೆ ಬಟ್ಟೆ ಸುತ್ತಿದ್ದ ಖದೀಮರು.

- ಇನ್ನುಳಿದ ಸಿಸಿ ಕ್ಯಾಮರಾದಲ್ಲಿ ಆರೋಪಿಗಳ ಚಲನವಲನ ಸೆರೆಯಾಗಿತ್ತು-

ಅದೇ ಗ್ರಾಮದ ಶಿವಮೂರ್ತಿ, ರಮೇಶ್, ರುದ್ರೇಶ ಬಂಧನ.

-ಕೃತ್ಯಕ್ಕೆ ಬಳಸಿದ್ದ ಒಂದು ಮಚ್ಚು, 12.28 ಲಕ್ಷ ಮೌಲ್ಯದ 2 ಮಾಂಗಲ್ಯ ಜಪ್ತಿ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಅರೆಸ್ಟ್.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

- ಏಪ್ರಿಲ್ 27ರಂದು ಚಿರಡೋಣಿ ಕ್ಯಾಂಪ್‌ನಲ್ಲೇ ಮನೆ ಬೀಗ ಒಡೆದು ಕಳ್ಳತನ ಮಾಡಿದ್ರು. ಹಂಸತಾರಕಂ ಎಂಬುವವರ ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ರು. ಹೀಗಾಗಿ ನಿಮ್ಮನ್ನೂ ಡೇಲಿ ಆಬ್ಸರ್ವ್ ಮಾಡುವವರೇ ಕಳ್ಳತನಕ್ಕೆ ಸ್ಕೆಚ್ ಹಾಕಬಹುದು ಎಚ್ಚರ..