ಬೆಂಗಳೂರು: ಬೆಂಗಳೂರಿನಲ್ಲಿ ಈ ಹಿಂದೆ ಟ್ರಾಫಿಕ್ ಪೊಲೀಸರು ಹಗಲು ಮತ್ತು ರಾತ್ರಿ ಕೆಲವೊಂದು ಕಡೆ ಕಾರ್ಯ ನಿರ್ವಹಿಸಿ ಹೆಲ್ಮೆಟ್ ಹಾಕದೆ ವಾಹನ ಸವಾರಿ ಮಾಡುತ್ತಿದ್ದ ಸವಾರರ ಹೆಡೆಮುರಿ ಕಟ್ಟುತ್ತಿದ್ದರು. ಹಾಗೆ ಅವರ ವಾಹನವನ್ನು ಸೀನ್ ಮಾಡಿ ಕೋರ್ಟಿಗೆ ಪ್ರೊಡ್ಯೂಸ್ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಅದು ಕಡಿಮೆಯಾಗಿದೆ ಏಕೆಂದರೆ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ಆ ರೀತಿಯ ಬಲವಂತದ ಕ್ರಮಗಳನ್ನು ನಿಲ್ಲಿಸಿದೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+
ಅದನ್ನೇ ಕೆಲವರು ದುರುಪಯೋಗಪಡಿಸಿಕೊಂಡು ಹೆಲ್ಮೆಟ್ ಹಾಕದೆ ಬೇರೆ ವಾಹನ ಸವಾರರಿಗೆ ತೊಂದರೆ ಕೊಡುತ್ತಾ ರಾಂಗ್ ರೂಟ್ನಲ್ಲಿ ತಿರುಗಾಡುತ್ತಿರುತ್ತಾರೆ. ಇಲ್ಲಿಯೂ ಸಹ ಅದೇ ರೀತಿಯ ಕಥೆಯಾಗಿದೆ.
-ಹೆಲ್ಮೆಟ್ ಧರಿಸದೇ ಓವರ್ ಸ್ಪೀಡ್ ನಲ್ಲಿ ಬಂದ ಬುಲೆಟ್ ಸವಾರ.
-ತನ್ನದೇ ತಪ್ಪಿದ್ರು ಅಮಾಯಕನಿಗೆ ನಿಂದಿಸಿದ ಆರೋಪ. ಕುರುಬರಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ.ಇದನ್ನು ಓದಿ: ಮನೆಗೆ ನುಗ್ಗಿ ಅತ್ತೆ, ಸೊಸೆ ಮಾಂಗಲ್ಯ(110 ಗ್ರಾಂ ಚಿನ್ನ) ದೋಚಿದ ಪಕ್ಕದ ಮನೆ ನಿವಾಸಿಗಳು: ದುಶ್ಮನ್ ಪಕ್ಕದಲ್ಲೆ ಇರ್ತಾರೆ, ಎಚ್ಚರಿಕೆ!
ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವಾಹನ ಸವಾರನಿಗೆ ರಾಂಗ್ ರೂಟ್ ನಲ್ಲಿ ಬಂದ ಬುಲೆಟ್ ದ್ವಿಚಕ್ರ ವಾಹನ ಸವಾರ ಬಾಯಿಗೆ ಬಂದಂತೆ ಬೈದು ನಿಂದಿಸಿದ್ದಾನೆ. ಈ ಘಟನೆ ಕುರುಬರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದ್ದು ಆತನ ಕೈಲಿ ನಿಂದಿಸಿಕೊಂಡ ಮತ್ತೊಬ್ಬ ದ್ವಿಚಕ್ರ ವಾಹನ ಸವಾರನ ಹೆಲ್ಮೆಟ್‌ನ ಕ್ಯಾಮೆರಾದಲ್ಲಿ ಈ ಕೃತ್ಯ ಸೆರೆಯಾಗಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಬೆಂಗಳೂರು ಸಿಟಿ ಪೊಲೀಸರಿಗೆ ದ್ವಿಚಕ್ರ ವಾಹನ ಸವಾರ ದೂರು ನೀಡಿದ್ದಾರೆ.