ಬೆಂಗಳೂರಿನ ಕ್ಲಾರೆನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆರ್ಯನ್ ಮೋಸೆಸ್ (17) ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರ್ಯನ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಿನ್ನೆ ಬೆಳಗ್ಗೆ 8:30ರ ಸುಮಾರಿಗೆ ಆರ್ಯನ್ ಕಾಲೇಜು ಕಟ್ಟಡದಿಂದ ಜಿಗಿದಿದ್ದು, ತಕ್ಷಣವೇ ಕಾಲೇಜು ಆಡಳಿತ ಮಂಡಳಿ ಆಸ್ಪತ್ರೆಗೆ ಸಾಗಿಸಿದೆ. ಆದರೆ, ಮಾರ್ಗಮಧ್ಯೆಯೇ ಆರ್ಯನ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. Bata Women’s Stylish Ballerina Flats – Trendy, Comfortable
ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಸದ್ಯ, ಪುಲಿಕೇಶಿನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅವರ ತಂದೆ ಜಿಬಿಎ ಅಧಿಕಾರಿ ಮೋಸೆಸ್ ಕೇತನ್ ವ್ಯಾಸ್ ಎನ್ನಲಾಗಿದೆ. ಆರ್ಯನ್ ಉತ್ತಮ ಈಜುಪಟುವಾಗಿದ್ದು, ಹಲವು ಪ್ರಶಸ್ತಿಗಳನ್ನು ಸಹ ಪಡೆದಿದ್ದರು. ಈಜಿಪ್ಟ್ ಶಾಂತಿ ಸಮ್ಮೇಳನದಲ್ಲಿ ಭಾರತವನ್ನು ಕೊಂಡಾಡಿ, ಪಾಕಿಸ್ತಾನದ ಕಾಲೆಳೆದ ಅಧ್ಯಕ್ಷ ಟ್ರಂಪ್
ಆದರೆ, ಇತ್ತೀಚೆಗೆ ಈಜು ಸ್ಪರ್ಧೆಗಳ ಬಗ್ಗೆ ಆರ್ಯನ್ ನಿರ್ಲಕ್ಷ್ಯ ತೋರುತ್ತಿದ್ದರು ಮತ್ತು ಕಾಲೇಜು ಪ್ರಾಜೆಕ್ಟ್ ಕೆಲಸವನ್ನೂ ಮಾಡಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ಬುದ್ಧಿವಾದ ಹೇಳಿದ್ದರಿಂದ ಮನನೊಂದು ಆರ್ಯನ್ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.