Skip to main content
ವಿಡಿಯೋ
1/3
general

ಇಪಿಎಫ್ ಖಾತೆಯಿಂದ 100% ಮೊತ್ತ ಹಿಂಪಡೆಯಲು ಅವಕಾಶ: ಸಿಬಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ!

By Shravanthi R
ಇಪಿಎಫ್ ಖಾತೆಯಿಂದ 100% ಮೊತ್ತ ಹಿಂಪಡೆಯಲು ಅವಕಾಶ: ಸಿಬಿಟಿ ಸಭೆಯಲ್ಲಿ ಮಹತ್ವದ ನಿರ್ಧಾರ!

ಸಿಬಿಟಿ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಂಡಿರುವ ಇಪಿಎಫ್‌ಒ, ಇದೀಗ ಖಾತೆದಾರರಿಗೆ 100% ಮೊತ್ತವನ್ನು ಹಿಂಪಡೆಯುವ ಅವಕಾಶ ನೀಡಿದೆ. ಹಿಂದಿನ ನಿಯಮಗಳನ್ನು ಸಡಿಲಗೊಳಿಸಿ, ಹಿಂಪಡೆಯುವ ಪ್ರಕ್ರಿಯೆಯನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸುವುದರೊಂದಿಗೆ ದಾಖಲೆಗಳ ಅವಶ್ಯಕತೆಯನ್ನು ತೆಗೆದುಹಾಕಲಾಗಿದೆ. ಈ ನಿರ್ಧಾರದಿಂದ ನೌಕರರಿಗೆ ಶುಭ ಸಮಾಚಾರ ತಿಳಿಸಿದೆ.

ದೇಶದ ನೌಕರರಿಗೆ ಸರ್ಕಾರವು ಸಿಹಿಸುದ್ದಿ ನೀಡಿದೆ. ಈ ದೀಪಾವಳಿಗೂ ಮುನ್ನವೇ, ಇಪಿಎಫ್‌ಒ ವಿತ್‌ಡ್ರಾವಲ್‌ ರೂಲ್ಸ್‌ ಸಡಿಲಗೊಳಿಸಲಾಗಿದೆ. ಇನ್ನು ಮುಂದೆ,100% EPF ಖಾತೆಯಿಂದ ಮೊತ್ತವನ್ನು ಹಿಂಪಡೆಯಬಹುದಾಗಿದೆ ಎನ್ನಲಾಗಿದೆ. ಸೋಮವಾರ ನಡೆಸಿದ ಸಿಬಿಟಿ ಸಭೆಯಲ್ಲಿ, ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ 7 ಕೋಟಿ ಚಂದಾದಾರರಿಗೆ ಮಹತ್ವದ ಸೌಲಭ್ಯವನ್ನು ಘೋಷಿಸಿದೆ. 

ಹೊಸ ನಿಯಮಗಳ ಪ್ರಕಾರ, ಇಪಿಎಫ್ ಖಾತೆಯಿಂದ ಭಾಗಶಃ ಹಣವನ್ನು ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಿ, ನೌಕರರಿಗೆ ಮೊತ್ತವನ್ನು ಶೇ. 100 ರಷ್ಟು ಹಿಂಪಡೆಯಲು ಅನುವು ಮಾಡಿಕೊಡಲು ತೀರ್ಮಾನಿಸಲಾಗಿದೆ. ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳು ತೆಗೆದುಕೊಳ್ಳಲಾಗಿದ್ದು, ಇದು ನೌಕರರಿಗೆ ಹಣಕಾಸು ಉಳಿತಾಯ ಹಾಗೂ ನಿರ್ವಹಣೆಗೆ ಸಹಕಾರಿಯಾಗಿದೆ ಎನ್ನಲಾಗಿದೆ. 

ಪ್ರಮುಖಾಂಶಗಳು -

  • 100% ಹಿಂಪಡೆಯುವ ಸೌಲಭ್ಯ - ಈ ಹಿಂದೆ ಇದ್ದ ನಿಯಮಗಳನ್ನು ತೆಗೆದುಹಾಕಿ, ಈಗ ಕೇವಲ ಮೂರು ವಿಭಾಗಗಳಲ್ಲಿ ಭಾಗಶಃ ಹಿಂಪಡೆಯುವಿಕೆಯನ್ನು ಅನುಮತಿಸಲಾಗಿದೆ ಎನ್ನಲಾಗಿದೆ. ಅಗತ್ಯ ಅಗತ್ಯಗಳು (ಅನಾರೋಗ್ಯ, ಶಿಕ್ಷಣ, ಮದುವೆ), ವಸತಿ ಅಗತ್ಯಗಳು (ಮನೆ ಸಂಬಂಧಿತ ವೆಚ್ಚಗಳು) ಮತ್ತು ವಿಶೇಷ ಸಂದರ್ಭಗಳು. ಇವುಗಳಲ್ಲಿ ಚಂದಾದಾರರು ತಮ್ಮ ಇಪಿಎಫ್ ಖಾತೆಯ ಸಂಪೂರ್ಣ ಮೊತ್ತವನ್ನು (ಉದ್ಯೋಗಿ ಮತ್ತು ಉದ್ಯೋಗದಾತರ ಭಾಗ ಸೇರಿದಂತೆ) ಹಿಂಪಡೆಯಲು ಸಾಧ್ಯವಾಗುತ್ತದೆ. ಹಿಂದೆ ಶಿಕ್ಷಣ ಮತ್ತು ಮದುವೆಗೆ ಕೇವಲ ಮೂರು ಬಾರಿ ಮಾತ್ರ ಅವಕಾಶವಿತ್ತು, ಆದರೆ ಈಗ ಶಿಕ್ಷಣಕ್ಕೆ 10 ಬಾರಿ ಮತ್ತು ಮದುವೆಗೆ 5 ಬಾರಿ ಹಿಂಪಡೆಯಬಹುದು. ಕನಿಷ್ಠ ಸೇವಾ ಅವಧಿಯನ್ನು 12 ತಿಂಗಳುಗಳಿಗೆ ಇಳಿಸಲಾಗಿದೆ.

  • ಕಾರಣ ನೀಡದೆ ಹಿಂಪಡೆಯುವಿಕೆಗೆ ಸಾಧ್ಯ - ವಿಶೇಷ ಸಂದರ್ಭಗಳಲ್ಲಿ (ನೈಸರ್ಗಿಕ ವಿಕೋಪ, ನಿರುದ್ಯೋಗ ಅಥವಾ ಸಾಂಕ್ರಾಮಿಕ ರೋಗಗಳು) ಹಿಂದೆ ಕಾರಣ ನೀಡಬೇಕಿತ್ತು, ಇದು ಹಲವು ಹಕ್ಕುಗಳ ತಿರಸ್ಕಾರಕ್ಕೆ ಕಾರಣವಾಗುತ್ತಿತ್ತು. ಈ ತೊಡಕನ್ನು ಮೊಟಕುಗೊಳಿಸಿ, ಕಾರಣ ನೀಡದೆಯೇ ಹಣ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. Redmi 13 5G Prime Edition, Orchid Pink, 8GB+128GB | India Debut SD 4 Gen 2 AE | 108MP Pro Grade Camera | 6.79in Largest Display in Segment

  • ಕನಿಷ್ಠ ಬ್ಯಾಲೆನ್ಸ್ ನಿಯಮ - ಚಂದಾದಾರರು ತಮ್ಮ ಖಾತೆಯಲ್ಲಿ ಯಾವಾಗಲೂ 25% ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು. ಇದು 8.25% ಬಡ್ಡಿ ಮತ್ತು ಸಂಯುಕ್ತ ಬಡ್ಡಿಯ ಪ್ರಯೋಜನವನ್ನು ಉಳಿಸಿಕೊಂಡು ನಿವೃತ್ತಿ ನಿಧಿಯನ್ನು ಬೆಳೆಸಲು ಸಹಾಯ ಮಾಡುತ್ತದೆ.

  • ಸ್ವಯಂಚಾಲಿತ ಪ್ರಕ್ರಿಯೆ - ಹಿಂಪಡೆಯುವಿಕೆಗೆ ಯಾವುದೇ ದಾಖಲೆಗಳ ಅಗತ್ಯವಿಲ್ಲ. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸಲಾಗಿದ್ದು, ಇದು ಕ್ಲೈಮ್ ಸೆಟಲ್ಮೆಂಟ್ ಅನ್ನು ಸರಳೀಕರಣಗೊಳಿಸುತ್ತದೆ. ಅವಧಿಪೂರ್ವ ಅಂತಿಮ ಸೆಟಲ್ಮೆಂಟ್ ಅವಧಿಯನ್ನು 2 ತಿಂಗಳಿನಿಂದ 12 ತಿಂಗಳುಗಳಿಗೆ ಮತ್ತು ಪಿಂಚಣಿ ಹಿಂಪಡೆಯುವ ಅವಧಿಯನ್ನು 2 ತಿಂಗಳಿನಿಂದ 36 ತಿಂಗಳುಗಳಿಗೆ ವಿಸ್ತರಿಸಲಾಗಿದೆ.

ಈ ನಿಟ್ಟಿನಲ್ಲಿ ಜನರು ತಮ್ಮ ಆರ್ಥಿಕ ಹಾಗೂ ಹಣಕಾಸು ಸಬಲತೆಗೆ ಹೆಚ್ಚಿನ ಹಣಕಾಸಿನ ಸ್ವಾತಂತ್ರ್ಯವನ್ನು ನೀಡುತ್ತದೆ ಮತ್ತು ನಿವೃತ್ತಿ ಉಳಿತಾಯವನ್ನು ಸಮತೋಲನಗೊಳಿಸುತ್ತದೆ. ಇಪಿಎಫ್‌ಒ ಈ ಬದಲಾವಣೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲಿದೆ ಎಂದು ಮಾಹಿತಿ ತಿಳಿದುಬಂದಿದೆ. ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿ, ಕಸ ನೋಡಿ ಶಾಕ್‌ ಆದ ಚೀನಾ ಉದ್ಯಮಿ : ಸರ್ಕಾರಕ್ಕೆ ಈಗಲಾದರೂ ಬುದ್ದಿ ಬರುವುದೆ?