‘ಬಿಗ್ ಬಾಸ್ ಕನ್ನಡ ಸೀಸನ್ 12' (BBK 12) ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಅವರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ‘ಒಂಟಿ-ಜಂಟಿ’ ಆಟವೇ ಇದಕ್ಕೆ ಕಾರಣವಾಗಿತ್ತು. ಕಾವ್ಯಾ ಮತ್ತು ಗಿಲ್ಲಿ ಜೋಡಿಯಾಗಿ ಆಡಿದ್ದರು.
ಈ ಆಟದ ಹಂತ ಮುಗಿದಿದ್ದು, ಈಗ ಪ್ರತಿಯೊಬ್ಬರೂ ವೈಯಕ್ತಿಕ ಆಟ ಪ್ರದರ್ಶಿಸುವ ಸಮಯ ಬಂದಿದೆ. ಆಟದ ಹಂತ ಮುಕ್ತಾಯವಾದಾಗ ಇಬ್ಬರೂ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದರು. ಕಾವ್ಯಾ ಈ ಸಂದರ್ಭದಲ್ಲಿ ಭಾವುಕರಾದರು.
ದೊಡ್ಮನೆಯಲ್ಲಿ ಕಾವ್ಯಾ ಮತ್ತು ಗಿಲ್ಲಿ ನಟ ಅತ್ಯುತ್ತಮ ಜೋಡಿಯಾಗಿ ಗುರುತಿಸಿಕೊಂಡಿದ್ದರು. ಎಲ್ಲರಿಗೂ ತಿರುಗೇಟು ನೀಡುತ್ತಾ, ನಗಿಸುತ್ತಾ ಇವರು ಮನೆಯ ವಾತಾವರಣವನ್ನು ಸಡಿಲಗೊಳಿಸುತ್ತಿದ್ದರು. ಇಂತಹ ಜೋಡಿ ಬೇರ್ಪಡಬೇಕಾದಾಗ ಬೇಸರವಾಗುವುದು ಸಹಜ. ಆದರೆ, ಈ ಬೇರ್ಪಡುವಿಕೆ ಅನಿವಾರ್ಯವಾಗಿತ್ತು.J-CD Smart Watch for Men, 1.28 inch HD Screen, Support Make&Receive Call/Bluetooth/Sleep Tracker/Sports Mode, Fitness Tracker Watch, Stainless Steel Band, Waterproof (Gold)
ಈ ಕುರಿತು ಮಾತನಾಡಿದ ಕಾವ್ಯಾ, "ಗಿಲ್ಲಿ ಅವರು ತುಂಬಾ ಹೈಪರ್‌ಆಕ್ಟಿವ್ ಆಗಿದ್ದರು. ಇದರಿಂದ ನನ್ನ ಆಟ ಹಿನ್ನಡೆ ಕಂಡಿರಬಹುದು" ಎಂದು ಅಭಿಪ್ರಾಯಪಟ್ಟರು. ನಂತರ ಗಿಲ್ಲಿ ಬಗ್ಗೆ ಸಕಾರಾತ್ಮಕ ಮಾತುಗಳನ್ನು ಆಡಿದರು.
"ಗಿಲ್ಲಿ ನಟ ಹೆಚ್ಚು ನಗಿಸುತ್ತಾನೆ. ಅವರು ನನ್ನ ಜೊತೆ ಇದ್ದಿದ್ದರಿಂದ ಮನೆಯ ನೆನಪು ಅಷ್ಟಾಗಿ ಕಾಡಲಿಲ್ಲ" ಎಂದು ಕಾವ್ಯಾ ವಿವರಿಸಿದರು. ಇದಾದ ನಂತರ ಗಿಲ್ಲಿ ನಟ ಕೂಡ ಕಾವ್ಯಾ ಅವರನ್ನು ಹೊಗಳಿದರು.ಬಿಗ್ ಬಾಸ್ ಕನ್ನಡ 12: ಎಲಿಮಿನೇಶನ್‌ಗೆ ಬದಲಾಗಿ ಅಚ್ಚರಿ ತಿರುವು.. ಮೊದಲ ಫೈನಲಿಸ್ಟ್‌ಗಳು ಪ್ರಕಟ!
ಕಾವ್ಯಾ ಯಾವಾಗಲೂ ತಮ್ಮ ಬೆಂಬಲಕ್ಕೆ ನಿಂತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಗಿಲ್ಲಿ ನಟ ಅವರು ಕಾವ್ಯಾ ಕಣ್ಣುಗಳ ಬಗ್ಗೆಯೂ ಮಾತನಾಡಿದರು. ಕಣ್ಣುಗಳು ಎಲ್ಲರನ್ನೂ ಸೆಳೆಯುವ ಅಂಗ. ಆದರೆ, ಗಿಲ್ಲಿಗೆ ಕಾವ್ಯಾ ಅವರ ಕಣ್ಣುಗಳು ಕಂಡರೆ ಭಯವಂತೆ.
"ನಾನು ಮಾತನಾಡಿದಾಗ ಕಾವ್ಯಾ ಯಾವಾಗಲೂ ಬೈಯ್ಯುತ್ತಲೇ ಇರುತ್ತಾಳೆ. ಅದಕ್ಕೆ ನಾನು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಅವಳು ಒಮ್ಮೆ ಕಣ್ಣಲ್ಲಿ ನೋಟ ಬೀರಿದರೆ ಸಾಕು, ನಾನು ಸುಮ್ಮನಾಗುತ್ತೇನೆ" ಎಂದು ಗಿಲ್ಲಿ ಹೇಳಿದರು.
ಅಕ್ಟೋಬರ್ 18 ಮತ್ತು 19ರಂದು ‘ಬಿಗ್ ಬಾಸ್ ಕನ್ನಡ 12'ರ ಮೊದಲ ಫಿನಾಲೆ ನಡೆಯಲಿದೆ. ಈ ವಾರ ಕೆಲವು ಸ್ಪರ್ಧಿಗಳು ದೊಡ್ಮನೆಯಿಂದ ಹೊರಹೋಗಲಿದ್ದಾರೆ. ಅದಕ್ಕೂ ಮೊದಲು ವೈಯಕ್ತಿಕ ಆಟ ಪ್ರದರ್ಶಿಸಲು ಸ್ಪರ್ಧಿಗಳಿಗೆ ಅವಕಾಶ ದೊರೆತಿದೆ.