Skip to main content
ವಿಡಿಯೋ
1/3
general

ಕೋಲಾರದಲ್ಲಿ ಅನುಮಾನಾಸ್ಪದ ಘಟನೆ: ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಶವವಾಗಿ ಪತ್ತೆ!

By Shravanthi R
ಕೋಲಾರದಲ್ಲಿ ಅನುಮಾನಾಸ್ಪದ ಘಟನೆ: ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಶವವಾಗಿ ಪತ್ತೆ!

ಸಮೀಕ್ಷೆ ಹಿನ್ನಲೆಯಲ್ಲಿ ನರಸಾಪುರಕ್ಕೆ ತೆರಳಿದ್ದ ಶಾಲಾಶಿಕ್ಷಕಿ ನಾಪತ್ತೆಯಾಗಿದ್ದರು. ಒತ್ತಡದಿಂದ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದ್ದ ಅವರು, ಕೆಜಿಎಫ್‌ನಲ್ಲಿ ಕೆರೆಯೊಂದರ ಬಳಿ ಮೃತದೇಹವಾಗಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ತಿಳಿಸಿದೆ.

ಕೋಲಾರ: ಸಮೀಕ್ಷಾ ಕಾರ್ಯಕ್ಕೆ ತೆರಳಿದ್ದ ಕೋಲಾರದ ಶಾಲಾ ಶಿಕ್ಷಕಿಯೊಬ್ಬರು ನಾಪತ್ತೆಯಾಗಿದ್ದು, ಎರಡು ದಿನಗಳ ನಂತರ ಕೆಜಿಎಫ್ ತಾಲೂಕಿನ ಐಪಲ್ಲಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ವರದಿಯಾಗಿದ್ದ ಬೆನ್ನಲ್ಲೇ ಅವರು ಕುಟುಂಬವು ಆಘಾತ ವ್ಯಕ್ತಪಡಿಸಿದೆ ಎನ್ನಲಾಗಿದೆ.

ಕೋಲಾರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಯಾದ 53 ವರ್ಷದ ಅಖ್ತರ್‌ ಬೇಗಂ, ಕೆ.ಬಿ ಹೊಸಹಳ್ಳಿ ಶಾಲಾಶಿಕ್ಷಕಿ ಎನ್ನಲಾಗಿದೆ. ನರಸಾಪುರದಲ್ಲಿ ಸಮೀಕ್ಷಾ ಕಾರ್ಯ ಮುಗಿಸಿ ನಾಪತ್ತೆಯಾಗಿದ್ದರು. ಅವರು ಕೆಜಿಎಫ್‌ ಬಳಿ ಐಪಲ್ಲಿ ಕೆರೆಯಲ್ಲಿ ಶವವಾಗಿ ಕಾಣಿಸಿಕೊಂಡಿದ್ದು, ಸಮೀಪದಲ್ಲಿ ಅವರ ಬ್ಯಾಗ್‌ ಹಾಗೂ ಇನ್ನಿತರೆ ದಾಖಲೆಗಳು ಸಿಕ್ಕಿವೆ. ಸೋಮವಾರ ಕೋಲಾರದಿಂದ ಬೇತಮಂಗಲಕ್ಕೆ ಮತ್ತು ಅಲ್ಲಿಂದ ಚಿಗರಾಪುರ ಗೇಟ್‌ಗೆ ಬಂದಿದ್ದ ಬಸ್ ಟಿಕೆಟ್‌ಗಳು ಕೆರೆ ದಡದಲ್ಲಿ ಪತ್ತೆಯಾಗಿದೆ. realme C71 4G Smartphone 6GB+128GB Sea Blue, 6.745 inch Screen, 90Hz Eye Comfort Display, 6300mAh Battery, 37MP Cameras, Unisoc T7250 Chip, IP54

ಸಮೀಕ್ಷೆಗೆ ಸಂಬಂಧಿಸಿದ ಐಡಿ ಮತ್ತು ಇತರ ದಾಖಲೆಗಳು ಪರಿಶೀಲನೆ ವೇಳೆ ಲಭ್ಯವಾಗಿವೆ ಎಂದು ಮಾಹಿತಿ ತಿಳಿದುಬಂದಿದೆ. ಸಮೀಕ್ಷೆ ಕಾರ್ಯದ ಒತ್ತಡ ಅಥವಾ ಖಿನ್ನತೆಯ ಕಾರಣದಿಂದಾಗಿ ಅವರು ಕೆಟ್ಟ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಶಂಕೆಯಿದ್ದರೂ ಅವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆಕೆ ತಮ್ಮ ಮೊಬೈಲ್ ಫೋನ್ ಅನ್ನು ಸಹ ಬಿಟ್ಟು ಹೋಗಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಕೇಳೋದ್ರಲ್ಲಿ ತಪ್ಪಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ!