Skip to main content
ವಿಡಿಯೋ
1/3
general

ದೀಪಾವಳಿ ಹಬ್ಬಕ್ಕೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಪಟಾಕಿಗಳ ಮಾರಾಟ, ಮಿತಬಳಕೆಗೆ ಸುಪ್ರೀಂ ಅಸ್ತು!

By Shravanthi R
ದೀಪಾವಳಿ ಹಬ್ಬಕ್ಕೆ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಸಿರು ಪಟಾಕಿಗಳ ಮಾರಾಟ, ಮಿತಬಳಕೆಗೆ ಸುಪ್ರೀಂ ಅಸ್ತು!

ದೆಹಲಿಯಲ್ಲಿ ಹೆಚ್ಚಾದ ಮಾಲಿನ್ಯ ಕಾರಣ, ದೀಪಾವಳಿಯಂದು ಪಟಾಕಿಗಳ ಸಿಡಿಸುವಿಕೆಗೆ ಸಂಬಂಧಿಸಿದಂತೆ ಸುಪ್ರೀಕೋರ್ಟ್‌ ಹಸಿರು ಪಟಾಕಿ ಮಾರಾಟ ಹಾಗೂ ಮಿತಬಳಕೆಗೆ ಅನುಮತಿ ನೀಡಿದೆ.

ದೇಶದ ರಾಜಧಾನಿ ದೆಹಲಿಯಲ್ಲಿ ಹೆಚ್ಚಿರುವ ಮಾಲಿನ್ಯ ಹಿನ್ನಲೆ, ದೀಪಾವಳಿಯಂದು ಪಟಾಕಿ ಸಿಡಿಸಬಹುದೇ ಎಂಬ ಪ್ರಶ್ನೆ ಮೂಡಿತ್ತು. ಈ ಕುರಿತಾಗಿ ಮಾಲಿನ್ಯ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಆರ್‌) ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು, ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೀಪಾವಳಿ ಹಬ್ಬ ಆಚರಣೆ ಸಂದರ್ಭಕ್ಕೆ ಪಟಾಕಿ ಸಿಡಿಸುವ ಬಗ್ಗೆ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ಅ. 18 ರಿಂದ ಅ. 21ರವರೆಗೆ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿಸಲಾಗಿದೆ. Redmi A4 5G (Sparkle Purple, 4GB RAM, 64GB Storage) | Segment Largest 6.88in 120Hz | 50MP Dual Camera | 18W Fast Charging | Charger in The Box

ಪಟಾಕಿ ನಿಷೇಧವನ್ನು ಸಡಿಲಗೊಳಿಸಿದ್ದು, ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ಜಂಟಿ ಕೋರಿಕೆಯನ್ನು ಪರಿಗಣಿಸಿತು. ಈ ಮೂಲಕ ಪಟಾಕಿಗಳಿಂದ ಹೆಚ್ಚಿನ ಹಾನಿಯಾಗದ ರೀತಿ, ಸಮತೋಲಿತ ವಿಧಾನ ಅನುಸರಿಸಬೇಕೆಂದು ಆದೇಶದ ಕಾರ್ಯಭಾರಿ ಭಾಗವನ್ನು ಓದುತ್ತಾ ತಿಳಿಸಿದ್ದಾರೆ. ಪರಿಸರದೊಂದಿಗೆ ರಾಜಿಮಾಡಿಕೊಳ್ಳದೆ ಮಿತವಾಗಿ ಪಟಾಕಿ ಸಿಡಿಸಲು ಅನುಮತಿ ನೀಡಿದೆ ಎನ್ನಲಾಗಿದೆ. 

ಇದರಲ್ಲಿ ಮುಖ್ಯವಾಗಿ ಪಟಾಕಿ ತಯಾರಕರ ಮೇಲೆ ಗಸ್ತು ತಂಡಗಳು ನಿಯಮಿತವಾಗಿ ಕಣ್ಣಿಡಲಿದೆ. ಪಟಾಕಿಗಳನ್ನು ದೆಹಲಿ ಹಾಗೂ ಎನ್‌ಸಿಆರ್‌ ಪ್ರದೇಶಗಳನ್ನು ಹೊರತುಪಡಿಸಿ, ಬೇರೆಡೆ ಮಾರಾಟ ಮಾಡಬಾರದು. ನಿಯಮ ಉಲ್ಲಂಘನೆಯಾದರೆ, ಮಾರಾಟಗಾರರ ಪರವಾನಗಿಗಳನ್ನು ರದ್ದುಗೊಳಿಸುವುದಾಗಿ ಸೂಚಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ಅನುಮಾನಾಸ್ಪದ ಘಟನೆ: ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಶವವಾಗಿ ಪತ್ತೆ!