ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಮ್ಮಿಶ್ರ ಸರ್ಕಾರ ಪತನವಾದಾಗ ನಾನು ಪಕ್ಷದ ನಿಷ್ಠಾವಂತನಾಗಿ ಜೈಲಿನಲ್ಲಿಯೇ ಇರಲು ಆಯ್ಕೆ ಮಾಡಿಕೊಂಡೆ ಎಂದು ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ. ನಗರದ ಎಫ್‌ಕೆಸಿಸಿ ಸಭಾಂಗಣದಲ್ಲಿ ಕೆ.ಎಂ.ರಘು ಅವರು ಬರೆದಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಹತ್ತು ಶಾಸಕರು ರಾಜೀನಾಮೆ ನೀಡುವ ಹಂತದಲ್ಲಿದ್ದರೂ ನಾನು ಕನಕಪುರದಿಂದ ಬೆಂಗಳೂರಿಗೆ ಬಂದು ಐದಾರು ಜನರನ್ನು ಕರೆತಂದೆ ಎಂದಿದ್ದಾರೆ.
ಸಮ್ಮಶ್ರ ಸರ್ಕಾರ ಬಿದ್ದುಹೋಗುವ ವೇಳೆ, ನನಗೆ ಎರಡು ಆಯ್ಕೆ ನೀಡಲಾಗಿತ್ತು. ಡಿ.ಕೆ ಸುರೇಶ್ ಕೂಡ ನನ್ನೊಂದಿಗೆ ಇದ್ದರು. ಫೋನ್ ಕರೆಯೊಂದರಲ್ಲಿ ನೀವು ಡಿಸಿಎಂ ಆಗುತ್ತೀರಾ ಅಥವಾ ಜೈಲಿಗೆ ಹೋಗುತ್ತೀರಾ ಅಂತ ಕೇಳಿದ್ರು. ಎಲ್ಲಾ ಶಾಸಕರನ್ನ ಮರಳಿ ಕರೆದಿರುವ ಆಯ್ಕೆಯನ್ನು ಅವರು ನನಗೆ ನೀಡಿದರು. ಆ ಸಂದರ್ಭದಲ್ಲಿ ನನಗೆ ಹಲವು ಸ್ಥಾನಗಳನ್ನು ನೀಡಿದ ಪಕ್ಷವನ್ನು ನಾನು ಬಿಡುವುದಿಲ್ಲ.
ಜೈಲಿಗೆ ಬೇಕಾದರೂ ಹೋಗುತ್ತೇನೆ ಎಂದು ನಾನು ಹೇಳಿದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ನನಗೆ ಟಿಕೆಟ್ ನೀಡಿದ್ದರು. ನನ್ನನ್ನ ಸಚಿವರನ್ನಾಗಿ ಮಾಡಿದ್ರು. ನಾನು ವಿದ್ಯಾರ್ಥಿಯಾದಾಗಿಂದ ರಾಜಕೀಯ ನಾಯಕನಾಗಬೇಕೆಂಬ ಆಸೆ ಹೊಂದಿರುವ ವ್ಯಕ್ತಿ ಎಂದಿದ್ದಾರೆ. Redmi A4 5G (Sparkle Purple, 4GB RAM, 64GB Storage) | Segment Largest 6.88in 120Hz | 50MP Dual Camera | 18W Fast Charging | Charger in The Box
ಶಾಲಾ ಚುನಾವಣೆಗಳ ಸಂದರ್ಭದಲ್ಲಿಯೇ ನನಗೆ ಒತ್ತಡಗಳಿದ್ದವು ಎಂದಿರುವ ಅವರು, ನಾನು ಜಾತ್ಯಾತೀತ ತತ್ವದಲ್ಲಿ ಬೆಳೆದವನು, ಸದನದಲ್ಲಿ ಆರ್‌ಎಸ್‌ಎಸ್ ಬಗ್ಗೆ ತಿಳಿದಿದೆ ಎಂಬುದನ್ನು ದೊಡ್ಡದಾಗಿ ಬಿಂಬಿಸಲಾಯಿತು, ನಾನು ಪುಸ್ತಕ ಓದುವವನಲ್ಲ, ಶಾಲಾಕಾಲೇಜುಗಳಿಂದಲೂ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವವನು, ರಾಜೀವ್ ಗಾಂಧಿಯವರ ಮಾತಿನ ಮೇಲೆ ನಂಬಿಕೆಯಿಟ್ಟವನು, ಹಿಂಬಾಲಕರನ್ನಲ್ಲ, ನಾಯಕರನ್ನು ಸೃಷ್ಟಿಸಿ ಎನ್ನುವ ಅವರ ಮಾರ್ಗದರ್ಶನವನ್ನು ನಂಬುವವನು ಎಂದಿದ್ದಾರೆ.
ಈ ಪುಸ್ತಕದಲ್ಲಿ 99% ರಷ್ಟು ಸತ್ಯಸಂಗತಿಗಳು ಕಾಣುತ್ತವೆ. ಲೇಖಕ ರಘು ಅವರು ನನ್ನ ಅನುಮತಿ ಪಡೆದಿಲ್ಲ. ಪರಿಚಿತರೂ ಅಲ್ಲ. ಸಂಶೋಧನೆ ಮಾಡಿ, ನನ್ನ ಭಾಷಣ ಸೇರಿ ಇತರ ಮಾತುಗಳನ್ನು ಕೇಳಿ ಪುಸ್ತಕ ಬರೆದಿದ್ದಾರೆ. ನನ್ನ ಶ್ರಮಫಲವನ್ನು ಈ ಪುಸ್ತಕದ ಮೂಲಕ ತಿಳಿದುಕೊಳ್ಳಬಹುದು.
ಸುಧಾಮೂರ್ತಿ ಜಾತಿಸಮೀಕ್ಷೆ ಮಾಹಿತಿ ನಿರಾಕರಣೆ ಬಗ್ಗೆ -
ಸಮಾರಂಭದ ನಂತರ ಈ ಬಗ್ಗೆ ಮಾತನಾಡಿದ ಅವರು, ಯಾರನ್ನೂ ಮಾಹಿತಿ ನೀಡಿ ಎಂದು ಒತ್ತಾಯಿಸಲಾಗುವುದಿಲ್ಲ. ಇದು ಅವರ ಇಚ್ಛೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಜಾತಿ ಸಮೀಕ್ಷೆಯಲ್ಲಿ ಮಾಹಿತಿ ನೀಡಲು ನಿರಾಕರಿಸಿದ ಇನ್‌ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ! ಕಾರಣವೇನು?