ಸದ್ಯ ರಾಜ್ಯದಲ್ಲಿ ವೈದ್ಯೆ ಕೃತಿಕಾ ಕೊಲೆ ಕೃತ್ಯವು ಜನರನ್ನು ಬೆಚ್ಚಿಬೀಳಿಸಿದೆ. ಈ ಮಧ್ಯೆ, ಮತ್ತೊಂದು ಭೀಕರ ಕೊಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲೇ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಈ ಪಾಪಿ. ಸಂಸಾರದಲ್ಲಿ ನಿರಂತರ ಕಲಹವಿದ್ದ ಕಾರಣ, ಕ್ರೂರವಾಗಿ ಕುಕೃತ್ಯ ಕೈಗೊಂಡಿರುವುದು ಬೆಳಕಿಗೆ ಬಂದಿದೆ.
ತನು (25) ಚಿಕ್ಕಮಗಳೂರಿನ ಅಜ್ಜಂಪುರ ತಾಲ್ಲೂಕಿನ ಚಿಕ್ಕನಾವಂಗಲ ಗ್ರಾಮದ ನಿವಾಸಿ. ಆಕೆಯ ಪತಿ ರಮೇಶ್ ಎಂಬಾತ ಕುಡಿದ ಅಮಲಿನಲ್ಲಿ, ಮಾರಕಾಸ್ತ್ರದಿಂದ ಕೊಚ್ಚಿ ಕೊಂದಿದ್ದಾನೆ ಎನ್ನಲಾಗಿದೆ. ಏಳು ವರ್ಷದ ಸಾಂಸಾರಿಕ ಜೀವನ ನಡೆಸಿ, ಕೌಟುಂಬಿಕ ಕಾರಣದಿಂದ ಬಿರುಕುಂಟಾಗಿದೆ ಎನ್ನಲಾಗಿದೆ. ಈ ದಂಪತಿಗೆ 6 ವರ್ಷದ ಗಂಡು ಮಗುವೂ ಇದೆ ಎನ್ನಲಾಗಿದೆ. ಸ್ಥಳೀಯರಲ್ಲಿ ಈ ಘಟನೆಯು ಆತಂಕ ಮೂಡಿಸಿದ್ದು, ಅವರಿಬ್ಬರ ಸಂಸಾರದಲ್ಲಿ ಕಿತ್ತಾಟ ಹಾಗೂ ಕೊಲೆಗಡುಕನ ಕುಡಿತ ಚಟವು ಈ ಕೃತ್ಯಕ್ಕೆ ಕಾರಣವೆಂದು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. Lava Storm Lite 5G (Cosmic Titanium, 4+4*GB RAM, 128GB Storage) | India's First MTK Dimensity 6400 Processor | 50MP AI Camera | IP64 Rated | 120 Hz Display | 5000 mAh Battery | Supports All 5G Bands
ಕಳೆದ ಎರಡು ವರ್ಷಗಳಿಂದ ಬೇರ್ಪಟ್ಟು, ಗಂಡನಿಂದ ದೂರವಿದ್ದ ಮಹಿಳೆಯನ್ನು ಕುಡಿದು ಬಂದು, ಜಗಳ ಮಾಡಿ ಆಕೆಯನ್ನು ಕೊಲ್ಲಲ್ಪಟ್ಟಿದ್ದಾನೆ ಎಂದು ಮಾಹಿತಿ ತಿಳಿಸಲಾಗಿದೆ. ಈ ಕುರಿತು ಅಜ್ಜಂಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ವಿದ್ಯಾರ್ಥಿ ರಾಜಕೀಯ ಜೀವನದಿಂದ ಇದುವರೆಗೂ ಪಕ್ಷನಿಷ್ಠನಾಗಿದ್ದೇನೆ - ಡಿ.ಕೆ ಶಿವಕುಮಾರ್ ಹೇಳಿಕೆ