ಸೋಷಿಯಲ್ ಮೀಡಿಯಾದ ಪ್ರಮುಖ ಫ್ಲಾಟ್‌ಫಾರ್ಮ್ ಆಗಿರುವ ಮೆಟಾ ಸಂಸ್ಥೆಯ, ಇನ್‌ಸ್ಟಾಗ್ರಾಂ ಇನ್ನು ಮುಂದೆ ಟೀನೇಜರ್ಸ್‌ಗೆ ಕಡಿಮೆ ಆಕ್ಸೆಸ್ ಮಾಡಲಷ್ಟೇ ಲಭ್ಯ. ಇದು ಪ್ರಮುಖವಾಗಿ ಹದಿಹರೆಯದ ಮಕ್ಕಳಿಗೆ ಅನ್ವಯಿಸುವ ಮಹತ್ವದ ನಿಯಮವಾದ PG-13 ಜಾರಿಗೊಳಿಸಿದೆ.
ಬಳಕೆದಾರರ ಸುರಕ್ಷತೆಗಾಗಿ ಅದರಲ್ಲೂ ಪ್ರಮುಖವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅದನ್ನು ಬಳಸುವಾಗ ಪೂರ್ವ ನಿಯೋಜಿತವಾಗಿ (PG-13) ಪೋಷಕರ ಮಾರ್ಗದರ್ಶನ ಸೂಕ್ತ 13+ ವಯೋಮಿತಿಯ ವಿಷಯ ಮಾದರಿಯ ನಿಯಮಕ್ಕೆ ಮಾಹಿತಿ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅವರಷ್ಟೇ ನೋಡಬಹುದಾದ ಪರಿಮಿತ ಕಂಟೆಂಟ್ ಅಥವಾ ಸೂಕ್ತವಾದ ಕಂಟೆಂಟ್ ಪೂರೈಸುವುದು ಎನ್ನಲಾಗಿದೆ.
ಈ ಹೊಸ ನಿಯಮದ ಪ್ರಕಾರ, ಹದಿಹರೆಯದವರು ತಮ್ಮ ಖಾತೆಗಳಲ್ಲಿ ವಯಸ್ಸಿಗೆ ಮೀರಿದ ಅಥವಾ ಸೂಕ್ಷ್ಮ ವಿಚಾರಗಳಿಗೆ (ಪ್ರಚೋದನಕಾರಿ, ಅಪಾಯಕಾರಿ ಸಾಹಸಗಳು, ಹಾನಿಕಾರಕ, ಲೈಂಗಿಕ ಚಿತ್ರಿತ, ಮಾದಕವಸ್ತುಗಳಿಗೆ ಸಂಬಂಧಿಸಿದ ವಿಡಿಯೋ ಅಥವಾ ಪೋಸ್ಟ್‌ಗಳು) ಗಳನ್ನು ನೋಡುವುದಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹುಡುಕುವುದು ಅಥವಾ ಶಿಫಾರಸು ಮಾಡುವುದನ್ನು ನಿರ್ಬಂಧಿಸಲಾಗುತ್ತದೆ.
ಈ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ ಹೆಚ್ಚು ವಿಷಯಗಳನ್ನು ನೋಡಲು ಬಯಸಿದರೆ, ಕಡ್ಡಾಯವಾಗಿ ಪೋಷಕರು ಅಥವಾ ಕಾನೂನು ಪಾಲಕರ ಅನುಮತಿಯನ್ನು ಪಡೆಯಬೇಕಿರುತ್ತದೆ ಎಂದು ತಿಳಿಸಲಾಗಿದೆ. iQOO Z10 Lite 5G (Titanium Blue, 6GB RAM, 128GB Storage) | 6000 mAh Battery | Dimensity 6300 5G Processor with 433K+* AnTuTu Score | IP64 Rated & Military Grade Shock-Resistance*
ಸಾಮಾಜಿಕ ಜಾಲತಾಣಗಳು ಪ್ರಮುಖವಾಗಿ ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಯಿಂದುಂಟಾಗುವ ನಕಾರಾತ್ಮಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಕ್ಕಳು ತೊಂದರೆಗಳಿಗೆ ತುತ್ತಾಗದಂತೆ ಹಾಗೂ ಅವರ ಸುರಕ್ಷತೆಯ ಕಾರಣಕ್ಕೆ ವಯಸ್ಸಿಗೆ ಸೂಕ್ತವಾದ ಅನುಭವವನ್ನು ನೀಡಲು ಮೆಟಾ ಈ ಉದ್ದೇಶವನ್ನು ತಿಳಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಬಾಲಿವುಡ್‌ಗೆ ಎಂಟ್ರಿ ಕೊಟ್ರಾ ಜೋಗಿ ಪ್ರೇಮ್..ಅಜಯ್ ದೇವಗನ್ ಜೊತೆ ನಡೆದ ಮಾತುಕತೆ ಏನು?