ಬಿಹಾರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆ ಖಚಿತಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ (ಇಸಿ) ಇಂದು ಬೆಳಿಗ್ಗೆ ಉನ್ನತ ಮಟ್ಟದ ಸಭೆ ನಡೆಸುತ್ತಿದೆ.
ಈ ಸಭೆಯಲ್ಲಿ ಸಿಬಿಡಿಟಿ (CBDT), ಜಾರಿ ನಿರ್ದೇಶನಾಲಯ (ED), ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB), ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF) ಸೇರಿದಂತೆ ಪ್ರಮುಖ ಜಾರಿ ಸಂಸ್ಥೆಗಳು ಭಾಗವಹಿಸಲಿವೆ. REOTEL Back Door Panel Back Glass Panel for Vivo V23 -Blue (with Camera Lens)
ಅಕ್ರಮ ನಗದು ಹರಿವು, ಮದ್ಯ ವಿತರಣೆ, ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ನಕಲಿ ನೋಟುಗಳ ಹಾವಳಿಯನ್ನು ತಡೆಯುವುದು ಮುಖ್ಯ ಉದ್ದೇಶವಾಗಿದೆ. ಬಿಹಾರದ ರಾಜ್ಯ ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ ಕಣ್ಗಾವಲು ಬಿಗಿಗೊಳಿಸುವ ಕುರಿತು ಸಮನ್ವಯ ಚರ್ಚೆ ನಡೆಯಲಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಮುಖ್ಯ ಚುನಾವಣಾ ಅಧಿಕಾರಿ (CEO) ವರ್ಚುವಲ್ ಮೂಲಕ ಸೇರ್ಪಡೆಗೊಳ್ಳಲಿದ್ದಾರೆ. ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ನೇತೃತ್ವದಲ್ಲಿ ನಡೆಯುವ ಈ ಸಭೆಯು ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ.ಇದನ್ನು ಓದಿ: ಗುಜರಾತ್‌ನಲ್ಲಿ ನೂತನ ಸಚಿವ ಸಂಪುಟ ರಚನೆ - 22 ಸಚಿವರ ಪ್ರಮಾಣವಚನ ಸ್ವೀಕಾರ
ಹಿಂದಿನ ಚುನಾವಣೆಗಳಲ್ಲಿ ಕಂಡುಬಂದ ಅಕ್ರಮಗಳನ್ನು ತಪ್ಪಿಸಲು ತಾಂತ್ರಿಕ ಮತ್ತು ಭದ್ರತಾ ಕ್ರಮಗಳನ್ನು ಬಲಪಡಿಸುವ ಯೋಜನೆಗಳು ಚರ್ಚೆಯಲ್ಲಿವೆ. ಇದರಿಂದ ಬಿಹಾರದ ಚುನಾವಣಾ ವಾತಾವರಣ ಸ್ವಚ್ಛವಾಗಿ ಉಳಿಯಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಿದೆ.ಇದನ್ನು ಓದಿ: ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆಯ ಬಿರುಕು..!