Skip to main content
ವಿಡಿಯೋ
1/3
general

ಕಾಡಸಿದ್ದೇಶ್ವರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ: ವಿಜಯಪುರ ಪ್ರವೇಶ ನಿಷೇಧದ ವಿರುದ್ಧ ಹೈಕೋರ್ಟ್ ಅರ್ಜಿ ವಜಾ!

By Shravanthi R
ಕಾಡಸಿದ್ದೇಶ್ವರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ: ವಿಜಯಪುರ ಪ್ರವೇಶ ನಿಷೇಧದ ವಿರುದ್ಧ ಹೈಕೋರ್ಟ್ ಅರ್ಜಿ ವಜಾ!

ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ನ್ಯಾಯಪೀಠವು, ಸ್ವಾಮೀಜಿಗಳ ಪದಪ್ರಯೋಗವನ್ನು ತೀಕ್ಷ್ಣವಾಗಿ ಪರಿಗಣಿಸಿ, ಸಾರ್ವಜನಿಕ ವ್ಯಕ್ತಿಯಿಂದ ಇಂತಹ ಭಾಷೆ ಅಸಂಗತ ಎಂದು ಅಭಿಪ್ರಾಯಪಟ್ಟಿದೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಹಿನ್ನಲೆಯಲ್ಲಿ, ವಿಜಯಪುರ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಆದೇಶವನ್ನು ಗುರುವಾರ ಅಲ್ಲಿನ ಜಿಲ್ಲಾಧಿಕಾರಿಗಳು ಹೊರಡಿಸಿದ್ದರು. ಈ ಬೆನ್ನಲ್ಲೇ ಸ್ವಾಮೀಜಿಗಳು, ಅವರ ಆದೇಶವನ್ನು ಪ್ರಶ್ನಿಸಿ, ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಇದೀಗ ಅವರಿಗೆ ಕಾನೂನು ಹಿನ್ನಡೆಯಾಗಿದ್ದು, ಅವರ ಭಾಷಾ ಪ್ರಯೋಗಕ್ಕೆ ಕರ್ನಾಟಕ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ ಎನ್ನಲಾಗಿದೆ. 

ಅವರ ಹೇಳಿಕೆಗಳು ಕಾನೂನು ಸುವ್ಯವಸ್ಥೆ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಕಾರಣ ಎನ್ನಲಾಗಿ, ಅವರಿಗೆ ಎರಡು ತಿಂಗಳುಗಳ ಕಾಲ ವಿಜಯಪುರ ಜಿಲ್ಲೆಗೆ ಭೇಟಿ ನೀಡುವುದನ್ನು ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಡಾ. ಆನಂದ್‌ ಅವರು ಆದೇಶವನ್ನು ಹೊರಡಿಸಿದ್ದರು. ಇದಕ್ಕೆ ಪ್ರತಿಯಾಗಿ ಸ್ವಾಮೀಜಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ, ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠವು ಬೇಸರ ವ್ಯಕ್ತಪಡಿಸಿತು ಎನ್ನಲಾಗಿದೆ.  iQOO Z10 5G (Stellar Black, 8GB RAM, 128GB Storage) | India's Biggest Ever 7300 mAh Battery | Snapdragon 7s Gen 3 Processor | Brightest Quad Curved AMOLED Display in The Segment

ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರಾಡಿರುವ ನುಡಿಗಳು ಅವರ ಸ್ಥಾನಕ್ಕೆ ಶೋಭೆ ತರುವಂಥದಲ್ಲ. ಸ್ವಾಮೀಜಿಗಳು ಸಾಮಾನ್ಯರಿಗಿಂತಲೂ ಕೆಳಹಂತದ ಭಾಷೆ ಬಳಕೆ ಮಾಡಿದ್ದಾರೆ ಎಂದು ಕೋರ್ಟ್‌ ವ್ಯಕ್ತಪಡಿಸಿತು. ಬಳಿಕ, ಅರ್ಜಿದಾರ ಪರ ವಕೀಲ ಪಿ. ಪ್ರಸನ್ನಕುಮಾರ್‌ ಹಾಗೂ ಸರ್ಕಾರಪರ ವಕೀಲ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ, ವಾದ ಹಾಗೂ ಪ್ರತಿವಾದವನ್ನು ಆಲಿಸಿದ ಕೋರ್ಟ್‌ ಇಂದು ಮಧ್ಯಂತರ ಆದೇಶ ಪ್ರಕಟಿಸುವುದಾಗಿ ತಿಳಿಸಿತ್ತು. ಆ ನಿಟ್ಟಿನಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಲಾಗಿದೆ.  ಇದನ್ನೂ ಓದಿ: ಕಾಡಸಿದ್ದೇಶ್ವರ ಸ್ವಾಮೀಜಿಗೆ ನಿಷೇಧ - ವಿಜಯಪುರ ಪ್ರವೇಶ ನಿರಾಕರಣೆ ಆದೇಶ!