Skip to main content
ವಿಡಿಯೋ
1/3
cinema

ಮಧ್ಯರಾತ್ರಿ ಶಾಕ್! ಬಿಗ್ ಬಾಸ್ ಕನ್ನಡ 12ರಲ್ಲಿ ಡಾಗ್ ಸತೀಶ್ ಎಲಿಮಿನೇಟ್ ಮನೆಯೊಳಗೆ ಅಚ್ಚರಿ ತಿರುವು..!

By Ram Chethan
ಮಧ್ಯರಾತ್ರಿ ಶಾಕ್! ಬಿಗ್ ಬಾಸ್ ಕನ್ನಡ 12ರಲ್ಲಿ ಡಾಗ್ ಸತೀಶ್ ಎಲಿಮಿನೇಟ್ ಮನೆಯೊಳಗೆ ಅಚ್ಚರಿ ತಿರುವು..!

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮೊದಲ ಫಿನಾಲೆಯ ಮೊದಲು ನಡೆದ ಮಿಡ್-ವೀಕ್ ಎಲಿಮಿನೇಷನ್ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದೆ. ಮಧ್ಯರಾತ್ರಿ 2 ಗಂಟೆಗೆ ಸೈರನ್ ಮೊಳಗುತ್ತಿದ್ದಂತೆ ಡಾಗ್ ಸತೀಶ್ ಹೊರಬೀಳುವ ತಿರುವು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಕನ್ನಡದ ಬಿಗ್ ಬಾಸ್ ಕಾರ್ಯಕ್ರಮವು ಈವರೆಗೆ 11 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಪ್ರಸ್ತುತ 12ನೇ ಸೀಸನ್ ಪ್ರಸಾರವಾಗುತ್ತಿದ್ದು, ಹಿಂದಿನ ಸೀಸನ್‌ಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಈ ಸೀಸನ್‌ನಲ್ಲಿ ಅನೇಕ ಹೊಸ ಟ್ವಿಸ್ಟ್‌ಗಳನ್ನು ಪರಿಚಯಿಸಲಾಗಿದೆ. ಮೊದಲ ಬಾರಿಗೆ ಒಂದೇ ಸೀಸನ್‌ನಲ್ಲಿ ಎರಡು ಫಿನಾಲೆಗಳು ನಡೆಯುತ್ತಿವೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಮೂರನೇ ವಾರದಲ್ಲೇ ಒಂದು ಫಿನಾಲೆ ಇರುತ್ತದೆ ಎಂದು ಮೊದಲೇ ಘೋಷಿಸಲಾಗಿತ್ತು. ಈ ಫಿನಾಲೆಗೂ ಮುನ್ನ ಅನಿರೀಕ್ಷಿತವಾಗಿ ಮಿಡ್-ವೀಕ್ ಎಲಿಮಿನೇಷನ್ ನಡೆದಿದೆ. ಈ ಎಲಿಮಿನೇಷನ್‌ನಲ್ಲಿ ಡಾಗ್ ಸತೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.Titan Classique Analog Silver Dial Men's Watch 90102SL01/NN90102SL01/NP90102SL01

ಮಧ್ಯರಾತ್ರಿ 2 ಗಂಟೆಗೆ ಈ ಅಚ್ಚರಿಯ ಬೆಳವಣಿಗೆ ಸಂಭವಿಸಿತು. ಇದ್ದಕ್ಕಿದ್ದಂತೆ ಸೈರನ್ ಮೊಳಗಿದಾಗ, ಮನೆಯ ಸದಸ್ಯರೆಲ್ಲರೂ ಆತಂಕಗೊಂಡರು. ತಕ್ಷಣವೇ ಎಲ್ಲರನ್ನು ಗಾರ್ಡನ್ ಏರಿಯಾಗೆ ಕರೆಯಲಾಯಿತು. ಆರಾಮವಾಗಿ ನಿದ್ರೆಗೆ ಜಾರಿದ್ದ ಸ್ಪರ್ಧಿಗಳಿಗೆ ಇದು ನಿಜಕ್ಕೂ ದೊಡ್ಡ ಆಘಾತವಾಗಿತ್ತು.

ಯಾರು ಎಲಿಮಿನೇಟ್ ಆಗಬೇಕು ಎಂಬುದನ್ನು ಮನೆಯೊಳಗಿನ ಸ್ಪರ್ಧಿಗಳ ಅಭಿಪ್ರಾಯದ ಆಧಾರದ ಮೇಲೆ ನಿರ್ಧರಿಸಲಾಯಿತು. ಬಹುತೇಕ ಸ್ಪರ್ಧಿಗಳು ಸತೀಶ್ ಅವರ ಹೆಸರನ್ನು ಸೂಚಿಸಿದ್ದರಿಂದ ಅವರು ಹೊರನಡೆದರು. ಕಾವ್ಯ ಶೈವ, ಅಭಿಷೇಕ್, ಮಂಜು ಭಾಷಿಣಿ, ಅಶ್ವಿನಿ ಎಸ್.ಎನ್., ಚಂದ್ರಪ್ರಭ, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಧ್ರವಂತ್, ಸ್ಪಂದನಾ, ಧನುಶ್, ಮತ್ತು ಮಲ್ಲಮ ಸೇರಿದಂತೆ ಅನೇಕರು ಸತೀಶ್ ಹೆಸರನ್ನು ಸೂಚಿಸಿದರು.ತಮಿಳುನಾಡಲ್ಲಿ ಹಿಂದಿ ಸಿನಿಮಾ ಮತ್ತು ಹಿಂದಿ ಹಾಡು ನಿಷೇಧ...ಸ್ಟಾಲಿನ್‌ ಪ್ಲಾನ್‌ ಏನು?

ಸತೀಶ್‌ರಲ್ಲಿ ಆಟದ ಹುಮ್ಮಸ್ಸು ಇಲ್ಲ ಎಂಬ ಕಾರಣವನ್ನು ನೀಡಿ, ಬಹುತೇಕ ಸ್ಪರ್ಧಿಗಳು ಅವರ ಹೆಸರನ್ನು ಸೂಚಿಸಿದ್ದರು. ಕಾಕ್ರೋಜ್ ಸುಧಿ, ಅಶ್ವಿನಿ ಗೌಡ, ಮಾಳು ನಿಪನಾಳ, ಮತ್ತು ರಾಶಿಕಾ ಶೆಟ್ಟಿ ಅವರು ಮೊದಲ ಫಿನಾಲೆಯ ಫೈನಲಿಸ್ಟ್‌ಗಳಾಗಿದ್ದಾರೆ. ಉಳಿದ ಸ್ಪರ್ಧಿಗಳು ಡೇಂಜರ್ ಝೋನ್‌ನಲ್ಲಿದ್ದಾರೆ.