ಚೀನಾದ ಸೆಲ್‌ಫೋನ್, ಸ್ಮಾರ್ಟ್‌ಫೋನ್ ಕಂಪನಿಗಳು ನಾವಿನ್ಯತೆ ವಿಷಯವಾಗಿ ಮುಂದಿದೆ. ಇದಕ್ಕೆ ಉದಾಹರಣೆಯೆಂಬಂತೆ, ಹಾನರ್ ವಿಶಿಷ್ಟ ಸ್ಮಾರ್ಟ್‌ಫೋನ್‌ನನ್ನು ಬಿಡುಗಡೆ ಮಾಡಲು ಮುಂದಾಗಿದೆ. ಮೊಬೈಲ್ ವರ್ಲ್ಡ್‌ನಲ್ಲಿ ಹೊಸ ಪರಿಕಲ್ಪನೆಯೆಂಬಂತೆ ಈ ಪ್ರಯತ್ನವು, ಹೊಸ ರೊಬೊಟ್ ಫೋನ್ ಪಾಪ್ ಅಪ್ ಕ್ಯಾಮೆರಾವಷ್ಟೇ ಅಲ್ಲದ, ರೋಬೋಟಿಕ್ ಆರ್ಮ್‌ನಿಂದ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.
ಇದನ್ನು ಸುಧಾರಿತ ರೋಬೋಟಿಕ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಿಂದ ಬೆಂಬಲಿತವಾಗಿದೆ ಎಂದು ತಿಳಿಸಿದೆ. ಸ್ವಯಂಚಾಲಿತ ಚಲಿಸುವ ಈ ಗಿಂಬಲ್ ಕ್ಯಾಮೆರಾದಂತಹ ಇದು ವಿಡಿಯೋ ಸೆರೆಹಿಡಿದ ನಂತರ, ರೋಬೋಟಿಕ್ ತೋಳು ಹಿಂಭಾಗದ ಫಲಕಕ್ಕೆ ಹಿಂದಿರುಗುತ್ತದೆ ಎನ್ನಲಾಗಿದೆ. ಸೆಟ್ಟಿಂಗ್‌ಗೆ ಹೊಂದಿಸಬಹುದಾದ ಸಾಮಾನ್ಯ ಕ್ಯಾಮರಾದಂತೆಯೇ ಬಳಸಲು ಅನುವು ಮಾಡಿಕೊಡುವುದೆಂದು ಹೇಳಲಾಗಿದೆ. iQOO Z10 5G (Stellar Black, 8GB RAM, 128GB Storage) | India's Biggest Ever 7300 mAh Battery | Snapdragon 7s Gen 3 Processor | Brightest Quad Curved AMOLED Display in The Segment
ಈ ಕುರಿತ ಟೀಸರ್ ಬಿಡುಗಡೆಯಾಗಿದ್ದು, ಇದನ್ನು ಭಾವನಾತ್ಮಕ ಕಂಪ್ಯಾನಿಯನ್ ಎಂದು ವಿಭಿನ್ನವಾಗಿ ಪರಿಚಯಿಸಲಾಗಿದೆ. ಸಾಮಾನ್ಯ ಫೋನ್‌ಗಳಿಗಿಂತ ಬೇರಾಗಿ ಇದನ್ನು ಪ್ರಾಯೋಜಿಸಲು ಹಾಗೂ AI ಅನ್ನೂ ಮೀರಿಸುವ ನೂತನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಹಂಬಲವನ್ನು ಸೂಚಿಸಿದೆ. ಮುಂದಿನ ಐದು ವರ್ಷಗಳಲ್ಲಿ AI ನಲ್ಲಿ ಭಾರಿ ಹೂಡಿಕೆ ಮಾಡಲು ಯೋಜಿಸಿರುವ ಹಾನರ್, ಎಐ ವೈಶಿಷ್ಟ್ಯಗಳ ಮೇಲೆಯೂ ಒತ್ತು ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: Instagram ಬಳಕೆಗೆ ಬಂತು ಹೊಸನಿಯಮ - PG-13! ಹಾಗಂದರೇನು?