ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಕಾಕೋಪಥರ್‌ನಲ್ಲಿರುವ ಸೇನಾ ಶಿಬಿರದ ಮೇಲೆ ಗ್ರೆನೇಡ್ ತಡರಾತ್ರಿ ದಾಳಿ ನಡೆಸಲಾಗಿದೆ. ಇದರಿಂದಾಗಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುರವಾರ ಶಂಕಿತ ವಾಹನಗಳಲ್ಲಿ ಆಗಮಿಸಿ, ಸಂಭವಿಸಿದ ದಾಳಿಯು ಸೇನಾ ಶಿಬಿರದ ಬಳಿಯಲ್ಲಿ ಘೋರತೆ ಕಂಡಿತು.
ರಾತ್ರಿ ಸುಮಾರು 12.30 ಕ್ಕೆ ಚಲಿಸುವ ವಾಹನದಲ್ಲಿ ಬಂದು ಗುಂಡು ಹಾರಿಸಿದ, ಗ್ರೆನೇಡ್ ಸ್ಪೋಟಗಳ ಶಬ್ದ ಕೇಳಿ ಬಂದಿತ್ತು. ಅಲ್ಲಿನ ಸ್ಥಳಿಯ ನಿವಾಸಿಗಳಲ್ಲಿ ಭೀತಿ ಮೂಡಿಸಿದ ಹಿನ್ನೆಲೆಯಲ್ಲಿ, ಸುಮಾರು ಒಂದು ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಭಾರತೀಯ ಸೇನೆಯ 19 ಗ್ರನೆಡೆಯರ್ಸ್ ಘಟಕದ ಶಿಬಿರವನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿ ನಡೆಸಲಾಗಿದೆ. ಇದರಲ್ಲಿ ಮೂವರು ಸೇನಾ ಸೈನಿಕರು ಗಾಯಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. Kapa Textured Grip Hinge Protection Back Cover for Moto Razr 60/50 | with [Inbuilt Glass] Full Body Shockproof Hard Back Case (Orange)
ಘಟನೆಯ ನಂತರ, ಸೇನೆ ಮತ್ತು ಪೊಲೀಸರು ಸುತ್ತಲಿನ ಪ್ರದೇಶವನ್ನು ಆಕ್ರಮಿಸಿದ್ದು, ನಾಗರೀಕರ ಸಂಚಾರವನ್ನು ನಿರ್ಬಂಧಿಸಲಾಗಿದೆ. ದುಷ್ಕರ್ಮಿಗಳನ್ನ ಕಂಡುಹಿಡಿಯುವಲ್ಲಿ, ಪ್ರಸ್ತುತವಾಗಿ ಶೋಧಕಾರ್ಯಚರಣೆ ಮುಂದುವರೆದಿದ್ದು, ಇದರಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA) ದ ಕೈವಾಡವಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಸ್ಮಾರ್ಟ್‌ಫೋನ್ ಲೋಕಕ್ಕೆ ಲಗ್ಗೆಯಿಟ್ಟ Honor Robot Phone - ಹೊಸ ಲುಕ್ ವೈರಲ್!