Skip to main content
ವಿಡಿಯೋ
1/3
politics

ಮುಖೇಶ್ ಸಹ್ನಾ VIP ಪಕ್ಷ ಮಹಾಘಟಬಂಧನ್‌ನಿಂದ ಬಿಟ್ಟುಕೊಂಡರೆ..? NDA ಒಕ್ಕೂಟಕ್ಕೆ ದೊಡ್ಡ ಅವಕಾಶ..!

By Sushmitha R
ಮುಖೇಶ್ ಸಹ್ನಾ VIP ಪಕ್ಷ ಮಹಾಘಟಬಂಧನ್‌ನಿಂದ ಬಿಟ್ಟುಕೊಂಡರೆ..? NDA ಒಕ್ಕೂಟಕ್ಕೆ ದೊಡ್ಡ ಅವಕಾಶ..!

ಬಿಹಾರ ವಿಧಾನಸಭಾ ಚುನಾವಣೆ 2025 ರ ಚುನಾವಣಾ ಕಹಳೆ ಮೊಳಗಿದ್ದು, ಜೆಡಿಯು ನೇತೃತ್ವದ ಆಡಳಿತ ಕೂಟ (ಎನ್‌ಡಿಎ) ಘಟಕ ಪಕ್ಷಗಳ ಸೀಟು ಹಂಚಿಕೆಯನ್ನು ಘೋಷಿಸಿ, ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ.

ಬಿಹಾರ ವಿಧಾನಸಭಾ ಚುನಾವಣೆ 2025 ರ ಚುನಾವಣಾ ಕಹಳೆ ಮೊಳಗಿದ್ದು, ಜೆಡಿಯು ನೇತೃತ್ವದ ಆಡಳಿತ ಕೂಟ (ಎನ್‌ಡಿಎ) ಘಟಕ ಪಕ್ಷಗಳ ಸೀಟು ಹಂಚಿಕೆಯನ್ನು ಘೋಷಿಸಿ, ಅಖಾಡಕ್ಕೆ ಇಳಿಯಲು ಸಿದ್ಧವಾಗಿದೆ. ಬಿಜೆಪಿ ಮತ್ತು ಜೆಡಿಯುಗೆ ತಲಾ 101 ಸ್ಥಾನಗಳು, ಎಲ್‌ಜೆಪಿ (ರಾಮ್ ವಿಲಾಸ್)ಗೆ 29, ಹ್ಯಾಮ್ ಮತ್ತು ಆರ್‌ಎಲ್‌ಎಂಗೆ ತಲಾ 6 ಸ್ಥಾನಗಳು ಬಂದಿವೆ.

ಈ ಒಗ್ಗಟ್ಟು ಎನ್‌ಡಿಎಗೆ ಶಕ್ತಿ ನೀಡಿದ್ದು, ನಿತೀಶ್ ಕುಮಾರ್ ನಾಯಕತ್ವದಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಭರವಸೆ ನೀಡುತ್ತಿದೆ. ಅಮಿತ್ ಶಾ ಅವರ ಸರನ್ ರ್ಯಾಲಿ ಮತ್ತು ಪಟ್ನಾ ಬೌದ್ಧಿಕ ಸಭೆಗಳು ಚುನಾವಣಾ ಉತ್ಸಾಹವನ್ನು ಹೆಚ್ಚಿಸಿವೆ. ಎನ್‌ಡಿಎಯ ಈ ತಯಾರಿ, ವಿರೋಧಿಗಳ ದೌರ್ಬಲ್ಯವನ್ನು ಉಪಯೋಗಿಸಿಕೊಂಡು, 243 ಸ್ಥಾನಗಳಲ್ಲಿ ಬಹುಮತಿ ಗಳಿಸುವ ಗುರಿ ಹೊಂದಿದೆ.Two Moustaches Brass 8.5 Inches Dancing Ganesha Idol with Gemstone Work – Elegant Showpiece for Living Room, Office, and Home Temple Decoration, Housewarming Gifts, Diwali Decoration, Return Gifts

ಆದರೆ, ಮಹಾಘಟಬಂಧನ್ (ಇಂಡಿಯಾ ಕೂಟ)ದಲ್ಲಿ ಸೀಟು ಹಂಚಿಕೆಯ ಗೊಂದಲ ಮೇಲುಗೈ ಸಾಧಿಸಿದೆ. ಮೊದಲ ಹಂತದ ನಾಮಪತ್ರ ಸಲ್ಲಿಕೆ ಗಡುವಿಗೆ ಕೆಲವೇ ಗಂಟೆಗಳು ಉಳಿದಿರುವಾಗ, ಆರ್‌ಜೆಡಿ, ಕಾಂಗ್ರೆಸ್, ವಿಐಪಿ, ಲೆಫ್ಟ್ ಪಕ್ಷಗಳ ನಡುವೆ ಜಗಳವಾಡುತ್ತಿದ್ದಾರೆ.

ಆರ್‌ಜೆಡಿ 135 ಸ್ಥಾನಗಳು, ಕಾಂಗ್ರೆಸ್ 60 ವಿಐಪಿ 15-20 ಲೆಫ್ಟ್ 10-12 ಸ್ಥಾನಗಳನ್ನು ಒತ್ತಾಯಿಸುತ್ತಿದ್ದು, ಒಪ್ಪಂದ ಇನ್ನೂ ಇಲ್ಲ. ವಿಐಪಿ ನಾಯಕ ಮುಖೇಶ್ ಸಹಾನಿ ಹೆಚ್ಚು ಸ್ಥಾನಗಳಿಗಾಗಿ ಹೋರಾಡುತ್ತಿದ್ದಾರೆ. ಇದನ್ನು ಓದಿ: ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳ ನಿರ್ಬಂಧ ಕುರಿತಂತೆ ಸರ್ಕಾರದ ಮುಂದಿನ ಪ್ಲ್ಯಾನ್‌ ಏನು..?

ಈ ಗೊಂದಲ ಒಕ್ಕೂಟವನ್ನು ಒಂದೇ ಘಟಕವಾಗಿ ಹೋರಾಡದಂತೆ ಮಾಡಬಹುದು ಪರಸ್ಪರ ಹಾನಿ ಮಾಡಿಕೊಂಡರೆ, ಎನ್‌ಡಿಎಗೆ ಮಾತ್ರ ಲಾಭ. ತೇಜಸ್ವಿ ಯಾದವ್ ನಾಯಕತ್ವದಲ್ಲಿ ಉದ್ಯೋಗ ಮತ್ತು ಅಭಿವೃದ್ಧಿ ಭರವಸೆ ನೀಡಿದರೂ, ಒಗ್ಗಟ್ಟಿನ ಕೊರತೆಯು ಮಹಾಘಟಬಂಧನ್‌ಗೆ ದೊಡ್ಡ ಸವಾಲು.

ನವೆಂಬರ್ 6 ಮತ್ತು 11ರ ಮತದಾನಕ್ಕೆ ತಯಾರಿ ತೀವ್ರಗೊಂಡಿದ್ದು, ಚುನಾವಣಾ ಆಯೋಗದ ಕಠಿಣ ನಿಯಂತ್ರಣದಡಿ ನಡೆಯಲಿದೆ. ಒಟ್ಟಾರೆ, ಬಿಹಾರದ ರಾಜಕೀಯ ಕಛೇರಿ ಉದ್ಘಾಟನೆಗೊಂಡಿದೆ.ಇದನ್ನು ಓದಿ: ಬಿಹಾರದಲ್ಲಿ NDA ಗೆದ್ದರೆ ಯಾರಾಗ್ತಾರೆ ಸಿಎಂ, ನಿತೀಶ್ ಕುಮಾರ್ ಅಥವಾ....? ಅಮಿತ್ ಶಾ ಹೇಳಿದ್ದೇನು..?