Skip to main content
ವಿಡಿಯೋ
1/3
politics

ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳ ನಿರ್ಬಂಧ ಕುರಿತಂತೆ ಸರ್ಕಾರದ ಮುಂದಿನ ಪ್ಲ್ಯಾನ್‌ ಏನು..?

By Pavitra Ganapathi Baradavalli
ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳ ನಿರ್ಬಂಧ ಕುರಿತಂತೆ ಸರ್ಕಾರದ ಮುಂದಿನ ಪ್ಲ್ಯಾನ್‌ ಏನು..?

ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳ ನಿರ್ಬಂಧ ಕುರಿತಂತೆ ಸರ್ಕಾರದ ಮುಂದಿನ ಪ್ಲ್ಯಾನ್‌ ಏನು ಎಂಬುದರ ಕುರಿತು ಚರ್ಚೆಗಳು ಏಳುತ್ತಿವೆ. RSSಗೆ ನಿರ್ಬಂಧ ವಿಧಿಸೋ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಕ್ಕೆ ಪೊಲೀಸ್‌ ಮಹಾನಿರ್ದೇಶಕರು ಒಂದು ಪತ್ರವನ್ನು ಬರೆದಿದ್ದಾರೆ.

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳ ನಿರ್ಬಂಧ ಕುರಿತಂತೆ ಸರ್ಕಾರದ ಮುಂದಿನ ಪ್ಲ್ಯಾನ್‌ ಏನು ಎಂಬುದರ ಕುರಿತು ಚರ್ಚೆಗಳು ಏಳುತ್ತಿವೆ. RSSಗೆ ನಿರ್ಬಂಧ ವಿಧಿಸೋ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಕ್ಕೆ ಪೊಲೀಸ್‌ ಮಹಾನಿರ್ದೇಶಕರು ಒಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ RSSಗೆ ನಿರ್ಬಂಧ ಹೇರೋ ಬಗ್ಗೆ ಉಲ್ಲೇಖಿಸಲಾಗಿದೆ.ಇದನ್ನೂ ಓದಿ: ಕೊಡಗಿನಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ…!!


ಜೊತೆಗೆ ಸರ್ಕಾರಕ್ಕೆ ಆರಕ್ಷಕ ಮಹಾನಿರೀಕ್ಷಕರಿಂದಲೂ ಪತ್ರ ಬಂದಿದೆ ಎಂದು ತಿಳಿದುಬರುತ್ತಿದೆ. ಅಕ್ಟೋಬರ್‌ 15ರಂದು ರಾಜ್ಯ ಸರ್ಕಾರವನ್ನು ಉದ್ಧೇಶಿಸಿ ಪತ್ರವನ್ನು ಬರೆದಿದ್ದಾರೆ. RSS ಅನ್ನು ಸರ್ಕಾರಿ ಸ್ಥಳಗಳಲ್ಲಿ ನಿರ್ಬಂಧಿಸಬೇಕು ಎಂಬ ಪ್ರಸ್ತಾವನೆಗೆ ಈಗಾಗಲೇ ಅಸ್ತು ಎಂದಿರುವ ರಾಜ್ಯ ಸರ್ಕಾರ
.ಇದನ್ನೂ ಓದಿ: ಬಿಹಾರದಲ್ಲಿ NDA ಗೆದ್ದರೆ ಯಾರಾಗ್ತಾರೆ ಸಿಎಂ, ನಿತೀಶ್ ಕುಮಾರ್ ಅಥವಾ....? ಅಮಿತ್ ಶಾ ಹೇಳಿದ್ದೇನು..?


RSS ಚಟುವಟಿಕೆಗಳಿಂದ ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಆದ್ದರಿಂದ RSSನ ಎಲ್ಲಾ ಚಟುವಟಿಕೆಗಳನ್ನು ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸಬೇಕು ಎಂದು ಪತ್ರಗಳು ಬಂದಿದ್ದವು ಅದಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಸರ್ಕಾರ ಅದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಅನುಮೋದಿಸಿದೆ
.ಇದನ್ನೂ ಓದಿ: ಅಸ್ಸಾಂನಲ್ಲಿ ಭಾರತೀಯ ಸೇನೆಯ ಮೇಲೆ ಗ್ರೆನೇಡ್‌ ದಾಳಿ - ಮೂವರು ಸೈನಿಕರ ಸ್ಥಿತಿ ಗಂಭೀರ!

ಜೊತೆಗೆ RSS ಯಾವುದೇ ಚಟುವಟಿಕೆ ನಡೆಸುವಾಗ ಸರ್ಕಾರದ ಅನುಮತಿ ಪಡೆತುವುದು ಅತ್ಯಗತ್ಯ. ಇನ್ನು ಪತ್ರದಲ್ಲಿ ಉಲ್ಲೇಖಿಸಿದಂತೆ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಚಟುವಟಿಕೆ ಅಕ್ರಮ ಎನ್ನುವಂತ ಅಂಶ ಸಹ ಉಲ್ಲೇಖವಾಗಿದೆ. ಕಾನೂನು ಸುವ್ಯಸ್ಥೆ ಕಾಪಾಡೋದು ಮುಖ್ಯ ಹಾಗಾಗಿ ಸಾರ್ವಜನಿಕರ ಆಕ್ಷೇಪಣೆ ಮತ್ತು ಅಹವಾಲುಗಳನ್ನು ಬಗೆಹರಿಸುವುದು ನಮ್ಮ ಕರ್ತವ್ಯ
  ಆಗಿದೆ. ಅದಲ್ಲದೆ ಎಲ್ಲಾ ಸರ್ಕಾರಿ ಹಾಗೂ ಅನುದಾನಿ ಶೈಕ್ಷಣಿಕ ಸಂಸ್ಥೆಗಳಲ್ಲಿ RSS ಚಟುವಟಿಕೆಯನ್ನು ನಿಷೇಧಿಸಲಾಗಿದೆ.ಇದನ್ನೂ ಓದಿ: ಬಿಹಾರ ಚುನಾವಣೆ: ಅಮಿತ್ ಶಾ ಸರನ್‌ನಲ್ಲಿ ರ್ಯಾಲಿ, ಪಾಟ್ನಾದಲ್ಲಿ ಬುದ್ಧಿಜೀವಿಗಳ ಸಭೆಯಲ್ಲಿ ಸಾಧ್ಯತೆ..!


ಎಲ್ಲಾ ಸರ್ಕಾರಿ ಸ್ಥಳಗಳು ಶಾಲಾ ಆವರಣ ಮತ್ತು ಖಾಸಗಿ ಮತ್ತು ಸರ್ಕಾರಿ ಉದ್ಯಾನವನಗಳು ಮತ್ತು ಗ್ರಾಮ ಪಂಚಾಯ್ತಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗಳು ಮತ್ತು ಸಾರ್ವಜನಿಕ ರಸ್ತೆಗಳು ಮತ್ತು ಇತರೆ ಸರ್ಕಾರದ ಆಸ್ತಿ ಮತ್ತು ಸ್ಥಳಗಳಲ್ಲಿ RSS ಚಟುವಟಿಕೆಯನ್ನು ನಡೆಸಲು ಅನುಮತಿಯನ್ನು ಕಡ್ಡಾಯಗೊಳಿಸಿದೆ.
SGF11 Women's Kanjivaram Patola Soft Pure Silk Sarees With Unstitched Blouse Piece