Skip to main content
ವಿಡಿಯೋ
1/3
general

ಕೊಡಗಿನಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ…!!

By Pavitra Ganapathi Baradavalli
ಕೊಡಗಿನಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ…!!

ಕೊಡಗಿನಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯತ್ತ ಹರಿದು ಕೊಡಗಿನ ಜನ ಸಾಗರ ಹರಿದುಬರುತ್ತಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರೋ ಮಹಿಳೆಯರು ಮತ್ತು ಪುರುಷರು. ಹಾಡು ನೃತ್ಯದ ಮೂಲಕ ಕಾವೇರಿಯ ಸ್ವಾಗತಕ್ಕೆ ಸಂಪೂರ್ಣ ಸಜ್ಜುಗೊಂಡಿದ್ದಾರೆ.

ಕೊಡಗು: ಕೊಡಗಿನಲ್ಲಿ ತಲಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯತ್ತ ಹರಿದು ಕೊಡಗಿನ ಜನ ಸಾಗರ ಹರಿದುಬರುತ್ತಿದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರೋ ಮಹಿಳೆಯರು ಮತ್ತು ಪುರುಷರು. ಹಾಡು ನೃತ್ಯದ ಮೂಲಕ ಕಾವೇರಿಯ ಸ್ವಾಗತಕ್ಕೆ ಸಂಪೂರ್ಣ ಸಜ್ಜುಗೊಂಡಿದ್ದಾರೆ. ಕೊಡಗಿನ ಶೈಲಿಯ ಸೀರೆಯನ್ನು ಉಟ್ಟು ಕಾವೇರಿಯ ಸ್ವಾಗತಕ್ಕೆ ಸಂಪೂರ್ಣ ಸಜ್ಜುಗೊಂಡಿರೋ ಕೊಡಗಿನ ಜನರು.ಇದನ್ನೂ ಓದಿ: ಮಧ್ಯರಾತ್ರಿ ಶಾಕ್! ಬಿಗ್ ಬಾಸ್ ಕನ್ನಡ 12ರಲ್ಲಿ ಡಾಗ್ ಸತೀಶ್ ಎಲಿಮಿನೇಟ್ ಮನೆಯೊಳಗೆ ಅಚ್ಚರಿ ತಿರುವು..!


ಕೊಡವ ಸೀರೆಯುಟ್ಟು ಉಮ್ಮತ್ತಾಳ್‌ ಬೊಳಕಟ್‌ ನೃತ್ಯಕ್ಕೆ ತಯಾರಾಗಿರುವ ಮಹಿಳೆಯರು. ಮಧ್ಯಾಹ್ನ 1.44ಕ್ಕೆ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಕಾವೇರಿನ್ನು ಸ್ವಾಗತಿಸಲು ಸಂಪೂರ್ಣ ಸಜ್ಜುಗೊಂಡು ಸಂಭ್ರಮದಿಂದ ಕಾವೇರಿಯನ್ನು ಸ್ವಾಗತಿಸಲು ತಯಾರಾಗಿದ್ದಾರೆ.
ಇದನ್ನೂ ಓದಿ: ಬಾಲಿವುಡ್‌ಗೆ ಎಂಟ್ರಿ ಕೊಟ್ರಾ ಜೋಗಿ ಪ್ರೇಮ್..ಅಜಯ್‌ ದೇವಗನ್‌ ಜೊತೆ ನಡೆದ ಮಾತುಕತೆ ಏನು?


ಕೊಡಗಿನ ಮೂಲೆ ಮೂಲೆಗಳಿಂದ ಕೊಡವಕೂಟ ಹಾಗೆ ಉಮ್ಮಳ ಕೂಟ ಹಾಗೇ ಇತ್ಯಾದಿ ಸಮುದಾಯಕ್ಕೆ ಸೇರಿದವರು ನೂರಾರು ಜನೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಕಾವೇರಿ ಜಾತ್ರೆಗೆ ಸಂಪೂರ್ಣ ಸಂಭ್ರಮದಿಂದ ಆಗಮಿಸುತ್ತಿರುವ ಕೊಡಗಿನ ವಿವಿಧ ಸೊಗಡಿನ ಸಮುದಾಯದವರು. ಕಾವೇರಿ ಸಂಕ್ರಮಣದ ದಿನ ಕಾವೇರಿ ತಾಯಿ ಬರುವುದನ್ನು ನೋಡಲು ಕಣ್ತುಂಬಿಕೊಳ್ಳಲು ಸರತಿ ಸಾಲಿನಲ್ಲಿ ಕಾಯ್ದುಕೊಂಡಿರೋ ಜನ ಸಾಗರ.
SGF11 Women's Kanjivaram Patola Soft Pure Silk Sarees With Unstitched Blouse Piece