Skip to main content
ವಿಡಿಯೋ
1/3
general

ಚಿನ್ನ, ಬೆಳ್ಳಿಯ ಲೇಟೆಸ್ಟ್‌ ರೇಟ್‌ - ಗಗನಕ್ಕೇರಿದ ಚಿನ್ನದ ಬೆಲೆ; ತಗ್ಗಿದ ಬೆಳ್ಳಿ ದರ!

By Shravanthi R
ಚಿನ್ನ, ಬೆಳ್ಳಿಯ ಲೇಟೆಸ್ಟ್‌ ರೇಟ್‌  - ಗಗನಕ್ಕೇರಿದ ಚಿನ್ನದ ಬೆಲೆ; ತಗ್ಗಿದ ಬೆಳ್ಳಿ ದರ!

ಜಾಗತಿಕ ಮಟ್ಟದ ಅನಿಶ್ಚಿತತೆ ಹಾಗೂ ಅಮೆರಿಕಾ ಸುಂಕದ ಪರಿಣಾಮದಿಂದ, ಚಿನ್ನವು ಸುರಕ್ಷಿತ ಹೂಡಿಕೆಯಾಗಿ ತೀವ್ರ ಬೇಡಿಕೆ ಹೊಂದಿದೆ ಎನ್ನಲಾಗಿದೆ. ಬೆಳ್ಳಿ ಬೆಲೆಯು ಇಳಿಕೆ ಕಂಡಿದೆ.

ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮುಗಿಲುಮುಟ್ಟಿದೆ. ಸತತವಾಗಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಂಡಿದ್ದು, ಅದಕ್ಕೆ ವಿರುದ್ಧವಾಗಿ ಬೆಳ್ಳಿ ಬೆಲೆಯು ನಿರಂತರ ಇಳಿಕೆ ಕಂಡಿದೆ ಎನ್ನಲಾಗಿದೆ.


ರಾಕೆಟ್ ವೇಗದಲ್ಲಿ ಸಾಗುತ್ತಿರುವ ಚಿನ್ನದ ಬೆಲೆಯು ಭಾರಿ ಏರಿಕೆ ಕಂಡಿದೆ. ಹೀಗಿದ್ದರೂ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ಮಾತ್ರ ನಿಂತಿಲ್ಲ. ಅಮೆರಿಕಾ ಸುಂಕ ಏರಿಕೆ, ಪರಿಣಾಮದ ಜೊತೆಗೆ ಜಾಗತಿಕ ಮಟ್ಟದಲ್ಲಿ ಅನಿಶ್ಚಿತ ಉಂಟಾಗಿದೆ. ಇದರ ನಡುವೆ ಸುರಕ್ಷಿತ ಹೂಡಿಕೆಯಾದ ಚಿನ್ನದ ಬೆಲೆ ವೇಗವಾಗಿ ಏರಿಕೆಯಾಗುತ್ತಿದೆ ಎನ್ನಲಾಗಿದೆ. Havells 9W LED B22 Bulb |Cool Day Light|Upto 4KV Surge Protection |High Voltage Protection |Eco Friendly|Energy Efficient |Premium and Beautiful Lighting for Home and Office| Made in India|Pack of 10

ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು ಸೇರಿದಂತೆ ಇತರೆ ನಗರಗಳಲ್ಲಿ ಚಿನ್ನದ ಬೆಲೆಯು ಜಿಗಿತವಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹ 13,277; 22 ಕ್ಯಾರೆಟ್‌ ಚಿನ್ನದ ಬೆಲೆ ₹ 12,170 18 ಕ್ಯಾರೆಟ್ ಚಿನ್ನದ ಬೆಲೆ ₹ 9958 ಪ್ರತಿ ಗ್ರಾಂ ಗೆ ಆಗಿದೆ. ಅದೇ ರೀತಿ ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ ₹ 4,000 ಕಡಿಮೆಯಾಗಿದೆ. ನಗರದಲ್ಲಿ ಪ್ರತಿ ಗ್ರಾಂಗೆ ಬೆಳ್ಳಿ ಬೆಲೆ ₹ 193 ಕೆಜಿಗೆ ₹ 1,93,900 ಎಂದು ಮಾಹಿತಿ ತಿಳಿಸಿದೆ.  ಇದನ್ನೂ ಓದಿ: ಸುಧಾಮೂರ್ತಿಗೆ ಬಿ.ಕೆ ಹರಿಪ್ರಸಾದ್‌ ಪರೋಕ್ಷವಾಗಿ ತಿರುಗೇಟು..!!