Skip to main content
ವಿಡಿಯೋ
1/3
politics

ಸುಧಾಮೂರ್ತಿಗೆ ಬಿ.ಕೆ ಹರಿಪ್ರಸಾದ್‌ ಪರೋಕ್ಷವಾಗಿ ತಿರುಗೇಟು..!!

By Pavitra Ganapathi Baradavalli
ಸುಧಾಮೂರ್ತಿಗೆ ಬಿ.ಕೆ ಹರಿಪ್ರಸಾದ್‌ ಪರೋಕ್ಷವಾಗಿ ತಿರುಗೇಟು..!!

ಸುಧಾಮೂರ್ತಿಗೆ ಬಿ.ಕೆ ಹರಿಪ್ರಸಾದ್‌ ಪರೋಕ್ಷವಾಗಿ ತಿರುಗೇಟನ್ನು ನೀಡಿದ್ದಾರೆ. ಶ್ರೀಮಂತಿಕೆಯನ್ನು ಮುಚ್ಚಿಡುವ ಸಲುವಾಗಿ ಸರಳತೆಯನ್ನು ಬಳಸುವುದು ತಪ್ಪು ಎಂದಿದ್ಧಾರೆ. ಸಮೀಕ್ಷೆಯಿಂದ ಮಾಹಿತಿ ಮುಚ್ಚಿಡುವುದು ಸ್ವಾರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರು: ಸುಧಾಮೂರ್ತಿಗೆ ಬಿ.ಕೆ ಹರಿಪ್ರಸಾದ್‌ ಪರೋಕ್ಷವಾಗಿ ತಿರುಗೇಟನ್ನು ನೀಡಿದ್ದಾರೆ. ಶ್ರೀಮಂತಿಕೆಯನ್ನು ಮುಚ್ಚಿಡುವ ಸಲುವಾಗಿ ಸರಳತೆಯನ್ನು ಬಳಸುವುದು ತಪ್ಪು ಎಂದಿದ್ಧಾರೆ. ಸಮೀಕ್ಷೆಯಿಂದ ಮಾಹಿತಿ ಮುಚ್ಚಿಡುವುದು ಸ್ವಾರ್ಥವಾಗುತ್ತದೆ ಎಂದು ಹೇಳಿದ್ದಾರೆ. ಸ್ವಾರ್ಥ ಮನಸ್ಥಿತಿಯ ಮುಖವಾಡದ ಅನಾವರಣವಾಗಿದೆ ಅಂತ ಬಿ.ಕೆ ಹರಿಪ್ರಸಾದ್‌ ಕಿಡಿಕಾರಿದ್ದಾರೆ.ಇದನ್ನೂ ಓದಿ: ಮುಖೇಶ್ ಸಹ್ನಾ VIP ಪಕ್ಷ ಮಹಾಘಟಬಂಧನ್‌ನಿಂದ ಬಿಟ್ಟುಕೊಂಡರೆ..? NDA ಒಕ್ಕೂಟಕ್ಕೆ ದೊಡ್ಡ ಅವಕಾಶ..!

ದೀನ ದಲಿತರನ್ನು, ಬಡವರನ್ನು,ಹಿಂದುಳಿದವರನ್ನು ಆರ್ಥಿಕವಾಗಿ ಸಾಮಾಜಿಕ ನ್ಯಾಯ ಸಮೀಕ್ಷೆಯಿಂದ ಮಾತ್ರ ಅದನ್ನು ವಿಗಂಡಿಸೋದಕ್ಕೆ ಸಾಧ್ಯ ಎಂದು ಹೇಳಿದ್ದಾರೆ. ಪ್ರಚಾರದ ಮೋಹದಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ‌. ಶ್ರೀಮಂತಿಕೆ ಮತ್ತು ದೊಡ್ಡಸ್ಥಿಕೆಯ ಚಾದರ ಹೊದ್ದು ಮಲಗಿದವರು ಕ್ಷುಲ್ಲಕ ಕಾರಣ ನೀಡಿ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಅಂತ ಹೇಳಿ ಸುಧಾಮೂರ್ತಿಗೆ ಬಿ.ಕೆ ಹರಿಪ್ರಸಾದ್‌ ಪರೋಕ್ಷ ತಿರುಗೇಟನ್ನು ನೀಡಿದ್ದಾರೆ.ಇದನ್ನೂ ಓದಿ: ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗಳ ನಿರ್ಬಂಧ ಕುರಿತಂತೆ ಸರ್ಕಾರದ ಮುಂದಿನ ಪ್ಲ್ಯಾನ್‌ ಏನು..?


ಸಾಮಾಜಿಕ
ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲುಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ.ಇದನ್ನೂ ಓದಿ: ಅಸ್ಸಾಂನಲ್ಲಿ ಭಾರತೀಯ ಸೇನೆಯ ಶಿಬಿರದ ಮೇಲೆ ಗ್ರೆನೇಡ್‌ ದಾಳಿ - ಮೂವರು ಸೈನಿಕರ ಸ್ಥಿತಿ ಗಂಭೀರ!


ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರ್ಕಾರದಿಂದಲೇ ಭೂಮಿ,ನೀರು, ತೆರಿಗೆ, ವಿದ್ಯುತ್, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲೀಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತ್ಮಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ದಟತನದ ಪರಮಾವಧಿ. ಸರಳತೆ ಶ್ರೀಮಂತಿಕೆಯನ್ನ ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ...! ಎಂದು ಹೇಳಿ ಕಿಡಿಕಾರಿದ್ದಾರೆ.SGF11 Women's Kanjivaram Patola Soft Pure Silk Sarees With Unstitched Blouse Piece