ಭಾರತದ ಸ್ವದೇಶಿ ಲಘು ಯುದ್ಧ ವಿಮಾನ ತೇಜಸ್ ಎಂಕೆ1ಎ ಶುಕ್ರವಾರ ನಾಸಿಕ್‌ನಲ್ಲಿ ತನ್ನ ಮೊದಲ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಈ ಕುರಿತ ವಿಡಿಯೋವು ವೈರಲ್ ಆಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಿರ್ಮಿಸಿರುವ ತೇಜಸ್ ಎಂಕೆ 1ಎ ದೇಶೀಯ ಯುದ್ದ ವಿಮಾನವಾಗಿದೆ.
ತೇಜಸ್ ಎಂಕೆ1ಎ, ಭಾರತೀಯ ವಾಯುಪಡೆಯ ಹಳೆಯ ಮಿಗ್-21 ಯುದ್ಧ ವಿಮಾನಗಳನ್ನು ಬದಲಿಸಲಿರುವ ಅತ್ಯಾಧುನಿಕ, ಬಹುವಿಧ ಕಾರ್ಯಕ್ಷಮತೆಯ ವಿಮಾನವಾಗಿದೆ ಎನ್ನಲಾಗಿದೆ. ಇದರಲ್ಲಿ ಸ್ವದೇಶಿ "ಉತ್ತಮ್" ರಾಡಾರ್, ಜಿಇ ಏರೋಸ್ಪೇಸ್‌ನ ಎಫ್404 ಎಂಜಿನ್ ಉಪಯೋಗಿಸಿ ತಯಾರಿಸಲಾಗಿದೆ. ಸ್ವಯಂ ರಕ್ಷಣಾ ಕವಚ, ಮತ್ತು ಆಧುನಿಕ ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. Halonix Twinkle 32 Feet Multicolor 46 LED Decorative Light | Diwali Lights for Decoration for Home | Fairy Light | Festival Light | Curtain Light for Decoration | String Light for Diwali | Pack of 1
ಗಂಟೆಗೆ 2220 ಕಿಮೀ ವೇಗದಲ್ಲಿ ಸಂಚರಿಸಲಿರುವ ಇದು, ಇಂದು ಆಗಸದಲ್ಲಿ ಹಾರಾಟ ನಡೆಸಿತು. ಇದರ ವಿಶೇಷತೆಯ ಮೂಲಕ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಇದರಿಂದ ರಕ್ಷಣಾ ಕಾರ್ಯತಂತ್ರಗಳನ್ನು ಮತ್ತಷ್ಟು ಬಲಪಡಿಸಿದ್ದು, ಸ್ವದೇಶಿ ತಂತ್ರಜ್ಞಾನದಲ್ಲಿ ದೇಶದ ಸಾಧನೆಯನ್ನು ಎತ್ತಿ ತೋರಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಚಿನ್ನ, ಬೆಳ್ಳಿಯ ಲೇಟೆಸ್ಟ್ ರೇಟ್ - ಗಗನಕ್ಕೇರಿದ ಚಿನ್ನದ ಬೆಲೆ; ತಗ್ಗಿದ ಬೆಳ್ಳಿ ದರ!