ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ PDO ಪ್ರವೀಣ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಡೆಯನ್ನು ಖಂಡಿಸಿ, ಬಸವನ್ ಗೌಡ ಪಾಟೀಲ್ ಯತ್ನಾಳ್ ಅವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ, ಸರ್ಕಾರದ ಅಮಾನತ್ತು ತಪ್ಪಾಗಿದೆ ಎಂದು ಆರೋಪ ಮಾಡಿದ್ದಾರೆ.ಇದನ್ನೂ ಓದಿ: ಕನ್ನೇರಿ ಶ್ರೀಗಳಿಗೆ ಡಬಲ್ ಶಾಕ್: ವಿಜಯಪುರ ಬಳಿಕ ಬಾಗಲಕೋಟೆಗೂ ಪ್ರವೇಶ ನಿಷೇಧ...!!
ಆರ್ಎಸ್ಎಸ್ ದೇಶದ ಅಭ್ಯುದಯಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾಗಿದ್ದು, ದೇಶವಿರೋಧಿ ಸಂಘಟನೆಯಲ್ಲ ಎಂದು ಯತ್ನಾಳ್ ಅವರು ಸ್ಪಷ್ಟಪಡಿಸಿದ್ದಾರೆ. 100 ವರ್ಷಗಳ ಇತಿಹಾಸದಲ್ಲಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಈ ಸಂಘಟನೆ ಸಂಸ್ಕೃತಿ, ಸದಾಚಾರ, ದೇಶಭಕ್ತಿ ಮತ್ತು ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ. ಆದರೂ, ಇದರ ವಿರುದ್ಧ ಸರ್ಕಾರದ ಸೆಲೆಕ್ಟಿವ್ ಅಮ್ನೇಷಿಯಾ ಏಕೆ ಎಂದು ಸರ್ಕಾರ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಬೆಲ್ಜಿಯಂ ನ್ಯಾಯಾಲಯದ ಆದೇಶ: ದೇಶಭ್ರಷ್ಟರಲ್ಲಿ ಒಬ್ಬರಾದ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ
ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಖಂಡರನ್ನು ಬೆಂಬಲಿಸಿದ ಅಧಿಕಾರಿಗಳನ್ನು ಸಹ ಸರ್ಕಾರ ಅಮಾನತುಗೊಳಿಸಿ, ಕಾನೂನಿನ ಮುಂದೆ ಎಲ್ಲರೂ ಸಮಾನರೆಂದು ಸಾಬೀತುಪಡಿಸಲಿ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಟ್ವೀಟ್ ವಿವಾದ: ಪೇಮೆಂಟ್ ಸರ್ಟಿಫಿಕೇಟ್ ಡಿಲೀಟ್, ಸಿದ್ದರಾಮಯ್ಯ ಹೇಳಿಕೆಗೆ ಟೀಕೆ..!!
ಇಲ್ಲದಿದ್ದರೆ, ಕೂಡಲೇ ಪ್ರವೀಣ್ ಕುಮಾರ್ ಅವರ ಅಮಾನತನ್ನು ಹಿಂಪಡೆಯಲಿ ಎಂದು ಒತ್ತಾಯಿಸಿದ್ದಾರೆ.ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಕಾರ್ಯಕರ್ತರು ಸರ್ಕಾರದ ಈ ನಡೆಯನ್ನು ಧರ್ಮಾಂಧತೆಯ ಆರೋಪ ಮಾಡುತ್ತಿದ್ದಾರೆ. ಆರ್ಎಸ್ಎಸ್ನಂತಹ ದೇಶಭಕ್ತ ಸಂಸ್ಥೆಯ ವಿರುದ್ಧ ಈ ರೀತಿಯ ಕ್ರಮಗಳು ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.SWORNOF Women's Kanjivaram Soft Silk Banarasi Sarees With Unstiched Blouse Piece