ವಿಶ್ವದಲ್ಲಿ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ದೇಶಗಳು ಸಂಘರ್ಷ ಹಾಗೂ ಯುದ್ದದ ಸುಳಿವಲ್ಲಿ ಮರುಗಿತ್ತು. ಈ ಎಲ್ಲದರ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಭಾರತದ ಭವಿಷ್ಯತ್ ಚಿಂತನೆ ನಡೆಸಿದೆ. ಅಮೆರಿಕಾದ ಡಾಲರ್ ಅಧಿಪತ್ಯಕ್ಕೆ ಸವಾಲೆಸಗಿರುವಂತೆ ತನ್ನ ಬೃಹತ್ ಆಪರೇಷನ್ ಗೋಲ್ಡ್ ಎನ್ನುವ ಹಾಗೆ ತನ್ನ ಬೊಕ್ಕಸಕ್ಕೆ ಚಿನ್ನವನ್ನು ತುಂಬಿಸಿದೆ ಎನ್ನಲಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ, ಭಾರತದ ಚಿನ್ನದ ಮೀಸಲು ನಿಧಿ ಸಂಗ್ರಹಣೆಯು, $100 ಬಿಲಿಯನ್ ದಾಟಿದೆ ಎನ್ನಲಾಗಿದೆ. ಚಿನ್ನದ ಹೂಡಿಕೆ ಸುರಕ್ಷಿತ ಮಾರ್ಗವಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ, ಕಳೆದ 10 ವರ್ಷಗಳಲ್ಲಿ ಭಾರತವು ಚಿನ್ನ ಸಂಗ್ರಹಣೆಯಲ್ಲಿ ನಿರ್ಣಾಯಕ ಬೆಳವಣಿಗೆ ತೋರಿದೆ ಎನ್ನಬಹುದಾಗಿದೆ. Acnos® Premium Luxury Analogue Girl's Stainless Steel Watch(Multicolour Dial 1-Multicolour Colored Strap)
ಚಿನ್ನ ಮೀಸಲು ನಿಧಿ ಪ್ರಮುಖವಾಗಿದೆ -
ವಿಶ್ವಮಟ್ಟದಲ್ಲಿ ವ್ಯಾಪಾರ ವಿನಿಮಯ ಹಾಗೂ ಸ್ಥಾನಮಾನ ಗಳಿಸಿಕೊಳ್ಳುವ ಮಾರ್ಗೋಪಾಯವಾಗಿ ಇದು ಪ್ರಮುಖವಾಗಿದೆ ಎನ್ನಲಾಗುವುದು. ಇದು ಭವಿಷ್ಯದಲ್ಲಿ ಉಂಟಾಗುವ ಆರ್ಥಿಕ ತುರ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಅನುಕೂಲ ಮಾಡಿಕೊಡಲಿದೆ. ಅಮೆರಿಕಾದ ಡಾಲರ್ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಅದು ಸಹಕಾರಿಯಾಗಲಿದೆ. ಚಿನ್ನವನ್ನು ಹೊಂದುವುದರಿಂದ ಕರೆನ್ಸಿ ಮೌಲ್ಯ ಕುಸಿದರೂ, ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮವನ್ನು ಅದು ತಗ್ಗಿಸುವುದು ಹಾಗೂ ಮುಂಬರಲಿರುವ ರಿಸ್ಕ್‌ನ್ನು ಇದು ಕಡಿಮೆಗೊಳಿಸುವುದು ಎನ್ನಲಾಗಿದೆ. ಇದನ್ನೂ ಓದಿ: ಧನ್ತೆರಸ್ 2025: ದೀಪಾವಳಿ ಹಬ್ಬದಾಚರಣೆಗೂ ಮೊದಲಿನ ಶುಭದಿನ - ಚಿನ್ನ ಖರೀದಿಗೆ ಪ್ರಾಶಸ್ತ್ಯ ನೀಡುವುದೇಕೆ ಗೊತ್ತಾ?