Skip to main content
ವಿಡಿಯೋ
1/3
general

ಭಯೋತ್ಪಾದನೆ ಮುಕ್ತ ಹಾಗೂ ಆರ್ಥಿಕತೆಗೆ ಮುನ್ನೆಲೆ - ಇದು ನಿಲ್ಲಿಸಲಾಗದ ದೇಶವೆಂದ ಪ್ರಧಾನಿ ಮೋದಿ

By Shravanthi R
ಭಯೋತ್ಪಾದನೆ ಮುಕ್ತ ಹಾಗೂ ಆರ್ಥಿಕತೆಗೆ ಮುನ್ನೆಲೆ - ಇದು ನಿಲ್ಲಿಸಲಾಗದ ದೇಶವೆಂದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ, ಭಾರತ್ ಮಂಟಪದಲ್ಲಿ ನಡೆದ ಎನ್‌ಡಿಟಿವಿ ವಿಶ್ವ ಶೃಂಗಸಭೆಯಲ್ಲಿ ʻಸ್ವಾವಲಂಬಿ ಭಾರತವು ಮೌನವಾಗಿರುವುದಿಲ್ಲʼ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, 2014ರಲ್ಲಿ ಅಧಿಕಾರಕ್ಕೆ ಬಂದ ತಮ್ಮ ಸರ್ಕಾರವು, ಆ ಮೊದಲು ಭಯೋತ್ಪಾದನೆ, ಮಹಿಳಾ ಸುರಕ್ಷತೆ ಹಾಗೂ ಮುಂತಾದ ಹಲವಾರು ಸಮಸ್ಯೆಗಳನ್ನ ಭಾರತವು ಹೇಗೆ ನಿವಾರಿಸುತ್ತದೆ ಎಂಬ ಬಗ್ಗೆ ತೀವ್ರ ಅನುಮಾನಗಳಿದ್ದವು. ಆದರೆ ಕಳೆದ 11 ವರ್ಷಗಳಲ್ಲಿ ಭಾರತವು ಈ ಪ್ರತಿಯೊಂದು ಸವಾಲನ್ನು ಜಯಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. 

ನಕ್ಸಲಿಸಂ ʻಕೆಂಪು ಭಯೋತ್ಪಾದನೆʼ ಎಂದು ಕರೆದ ಅವರು, ಮಾವೋವಾದಿ ಉಗ್ರವಾದವು ಯುವಕರಿಗೆ ಮಾಡಿದ ಅನ್ಯಾಯವಾಗಿದ್ದು, ಇದನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣ ನಾಶ ಮಾಡುತ್ತೇವೆ ಎಂದು ಅವರು, ಭಯೋತ್ಪಾದನೆಯ ವಿರುದ್ಧ ಭಾರತವು ಬಲವಾದ ನಿಲುವನ್ನು ತೆಗೆದುಕೊಂಡಿದೆ ಎಂದು ಆಪರೇಷನ್ ಸಿಂಧೂರವನ್ನು ನೆನೆದು ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಿದರು. styledose Women Analogue Wrist Watches for Women's & Girls&Miss&Ladies Diamond Studded Dial Rosegold Colored Stylish Bracelet Strap

ಈಗಾಗಲೇ 75 ಗಂಟೆಗಳಲ್ಲಿ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸರ್ಕಾರ ನೀಡಿದ ಅಂತಿಮ ಸೂಚನೆಯ ನಂತರ 308 ಕ್ಕೂ ಹೆಚ್ಚು ಕಟ್ಟಾ ಮಾವೋವಾದಿ ಕಾರ್ಯಕರ್ತರು ಶರಣಾಗತರಾಗಿದ್ದಾರೆ. ಇನ್ನು ದೇಶದಲ್ಲಿರುವ ಅನೇಕ ಜಿಲ್ಲೆಗಳು ಮಾವೋವಾದಿ ಪೀಡಿತದಿಂದ ಮುಕ್ತವಾಗುತ್ತಿದೆ.

ಕೋವಿಡ್‌ ಸಂದರ್ಭದಲ್ಲಿ ದೇಶವು ಎದುರಿಸಿದ ಸವಾಲನ್ನು ಹಿಮ್ಮೆಟ್ಟಿ ದೇಶದ ಆರ್ಥಿಕತೆಯನ್ನು ವೇಗದಲ್ಲಿ ಬೆಳೆಸಿರುವೆಡೆ ಸಾಗುತ್ತದೇವೆ ಎಂದು ಅವರು ತಿಳಿಸಿದರು. ನಿಲ್ಲಿಸಲಾಗದ ಭಾರತವೆಂದ ಮೋದಿಯವರು, LPG ಗ್ಯಾಸ್ ಬಳಕೆ ಈಗ ಸರ್ವೇ ಸಾಮಾನ್ಯ, ವಿಶ್ವದ ಆರ್ಥಿಕ ಪ್ರಗತಿ ಪಟ್ಟಿಯಲ್ಲಿ ಭಾರತಕ್ಕೂ ಸ್ಥಾನ ಎಂದು ಪ್ರಗತಿಪರ ವಿಷಯಗಳ ಕುರಿತಾಗಿ ತಿಳಿಸಿದರು. ಇದನ್ನೂ ಓದಿ: $100 ಬಿಲಿಯನ್‌ ದಾಟಿದ ಭಾರತದ ಚಿನ್ನ ಸಂಗ್ರಹ - ಜಾಗತೀಕ ಅನಿಶ್ಚಿತತೆ ನಡುವೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ʻಆಪರೇಷನ್‌ ಗೋಲ್ಡ್‌ʼ!?