ಬೆಂಗಳೂರು: ನಗರದ ಮೂಲಸೌಕರ್ಯದ ವಿಷಯವಾಗಿ ರಸ್ತೆ ದುರಸ್ಥಿ ಸಮಸ್ಯೆಗೆ ಸಂಬಂಧಿಸಿದಂತೆ ಟ್ವೀಟ್ ವಾರ್ ನಡೆದಿತ್ತು. ಇದೀಗ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಸ್ವತಃ ತಮ್ಮ ಖರ್ಚಿನಡಿ ದುರಸ್ಥಿ ನಡೆಸಿರುವ ವಿಚಾರವಾಗಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮಾಧ್ಯಮಗೊಳಿಟ್ಟಿಗೆ ಉತ್ತರಿಸುವಾಗ, "ನಾವೇ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇವೆ" ಎಂದು ಕಿರಣ್ ಮಜುಂದಾರ್ ಶಾ ಅವರು ಹೇಳಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ರಸ್ತೆಗಳನ್ನು ಸರಿಪಡಿಸಲು ಅವರೇ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ಎನ್ನಲಾಗಿದೆ.
"ನನಗೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅವರು ನಗರದ 10ಕ್ಕೂ ಹೆಚ್ಚು ರಸ್ತೆಗಳನ್ನು ದುರಸ್ತಿ ಮಾಡುವುದಾಗಿ ಹೇಳಿದ್ದರೆ, ನಾವು ಖಂಡಿತ ಅವರಿಗೆ ಅವಕಾಶ ನೀಡುತ್ತೇವೆ. ಅವರೇ ರಸ್ತೆಗಳನ್ನು ಸರಿಪಡಿಸಲಿ" ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. styledose Women Analogue Wrist Watches for Women's & Girls&Miss&Ladies Diamond Studded Dial Rosegold Colored Stylish Bracelet Strap
ಈ ಹೇಳಿಕೆಯು, ಬೆಂಗಳೂರಿನ ರಸ್ತೆ ಗುಂಡಿ ಹಾಗೂ ಕಳಪೆ ರಸ್ತೆಗಳ ಬಗ್ಗೆ ಸಾರ್ವಜನಿಕವಾಗಿ ಕೇಳಿಬಂದ ಟೀಕೆಗಳ ನಂತರ, ಕೈಗಾರಿಕಾ ವಲಯದ ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ಅಭಿವೃದ್ಧಿ ಕಾರ್ಯದಲ್ಲಿ ನೇರವಾಗಿ ಭಾಗವಹಿಸಲು ಇಚ್ಛೆ ವ್ಯಕ್ತಪಡಿಸಿದಕ್ಕೆ ಸರ್ಕಾರದ ಮಟ್ಟದಲ್ಲಿ ಸಮ್ಮತಿ ಸಿಕ್ಕಿದಂತಾಗಿದೆ ಎನ್ನಬಹುದಾಗಿದೆ. ಬೆಂಗಳೂರಿನ ರಸ್ತೆ ದುರಸ್ತಿ ಕಾರ್ಯಕ್ಕೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿ ಇನ್ನಷ್ಟು ಬಲಗೊಳ್ಳುವ ಸಾಧ್ಯತೆಯೇ ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಭಯೋತ್ಪಾದನೆ ಮುಕ್ತ ಹಾಗೂ ಆರ್ಥಿಕತೆಗೆ ಮುನ್ನೆಲೆ - ಇದು ನಿಲ್ಲಿಸಲಾಗದ ದೇಶವೆಂದ ಪ್ರಧಾನಿ ಮೋದಿ