ಎಲ್ಲರಿಗೂ ಪರಿಚಿತವಿರುವ ಒಆರ್‌ಎಸ್ ಎನರ್ಜಿ ಡ್ರಿಂಕ್, ಗ್ಲೂಕೋಸ್ ಕಾರ್ಯನಿರ್ವಹಿತ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ. ಈ ಹೆಸರಿನ ಇತರೆ ಎನರ್ಜಿ ಡ್ರಿಂಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು, ನಕಲಿ ಒಆರ್‌ಎಸ್ ಸ್ವರೂಪ ಪಡೆದಿದ್ದವು ಎನ್ನಲಾಗಿದೆ.
ಈ ವಿರುದ್ದ ಹೈದರಾಬಾದ್ ಮೂಲದ ಶಿವರಂಜನಿ ಸಂತೋಷ್ ಎಂಬ ಮಕ್ಕಳ ವೈದ್ಯರು, ಕಳೆದ ಎಂಟು ವರ್ಷಗಳಿಂದ ಸತತ ಕಾನೂನು ಹೋರಾಟ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಆಹಾರ ಉತ್ಪನ್ನಗಳಲ್ಲಿ ಮುಖ್ಯವೆನಿಸಿರುವ ಹಣ್ಣಿನ ಪಾನೀಯದ ಮೇಲೆ ಒಆರ್‌ಎಸ್ ಎಂದು ಲೇಬಲ್ ಬಳಕೆ ಮಾಡುವುದನ್ನು FSSAI ನಿಷೇಧಿಸಿ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.
2022 ರಲ್ಲಿ ಹೈದರಾಬಾದ್ ಕೋರ್ಟ್‌ನಲ್ಲಿ, ಅವರು ನಕಲಿ ಒಆರ್‌ಎಸ್ ಹಣ್ಣಿನ ಪಾನೀಯ ಸೇರಿದಂತೆ ಇತರ ಪಾನೀಯಗಳ ಮೇಲೆ ಒಆರ್‌ಎಸ್ ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ ಪಿಐಎಲ್ ಪ್ರಕರಣವನ್ನು ಮುನ್ನಡೆಸಿದ ಇವರು ಜನರನ್ನು ದಿಕ್ಕು ತಪ್ಪಿಸುವ ವಿರುದ್ಧ ನಡೆಸಿದ ಹೋರಾಟಕ್ಕೆ ಕಡೆಗೂ ಅವರಿಗೆ ಜಯ ಸಿಕ್ಕಂತಾಗಿದೆ. ಮತ್ತೊಂದೆಡೆ ನಕಲಿ ಒಆರ್‌ಎಸ್ ಮಾರಾಟಗಾರರಿಗೆ ಹೊಡೆತ ಬಿದ್ದಂತಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಸ್ವಂತ ಖರ್ಚಿನಲ್ಲಿ ಬೆಂಗಳೂರು ರಸ್ತೆಗಳ ದುರಸ್ತಿಗೆ ಮುಂದಾದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಂಜುದಾರ್ ಶಾ..!!
ಭಾರತದಲ್ಲಿ ಇತರೆ ಆಹಾರ ಉತ್ಪನ್ನ ಪಾನೀಯಗಳ ಮೇಲೆ ಒಆರ್‌ಎಸ್ ಲೇಬಲ್ ಮುದ್ರಿಸಿ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಹಾಗೂ ಮಾರಾಟಕ್ಕೆ ಅವಕಾಶ ಮಾಡಿಕೊಡದಂತೆ ಅವರು ಕೋರ್ಟ್ ಮೆಟ್ಟಿಲೇರಿದ್ದರು. ನಕಲಿ ಒಆರ್‌ಎಸ್ ಹೆಸರಿನ ಪಾನೀಯಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದ ಅವರಿಗೆ, ಸಾಕಷ್ಟು ಬಾರಿ ಅವರ ನಡೆಯನ್ನು ಅಲಕ್ಷಿಸಿ, ಕಡೆಗಣಿಸಲಾಗಿತ್ತು ಎಂದು ತಿಳಿದುಬಂದಿದೆ. Fastrack Stunners Analog Silver Dial Pink Leather Strap Watch for Girls - NS6152SL08
ಇದರಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ಸೂತ್ರದ ಪ್ರಕಾರ ಪಾನೀಯದಲ್ಲಿರಬೇಕಾದ ಸೂತ್ರಗಳು ಹಾಗೂ ಅಂಶಗಳನ್ನು ಆಧರಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಈ ಬಗ್ಗೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ಅಕ್ಟೋಬರ್ 14 ರಂದು FSSAI ಆದೇಶ ನೀಡಿದೆ ಎಂದು ಸೂಚಿಸಲಾಗಿದೆ.
ಓರಲ್ ಡಿಹೈಡ್ರೇಶನ್ ಸೊಲ್ಯೂಷನ್ (ಒಆರ್‌ಎಸ್) ಎಂಬುದು ಕಾರ್ಬೊನೇಟ್ ಸೇರಿದಂತೆ ನಿರ್ದಿಷ್ಟ ಸೂತ್ರಗಳನ್ನು ಒಳಗೊಂಡ ಪಾನೀಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಸೂತ್ರಾಂಶಗಳನ್ನೊಳಗೊಂಡ ಪಾನೀಯ ಮಾತ್ರ ಒಆರ್‌ಎಸ್ ಎಂದು ಬಳಸಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಇನ್ನುಳಿದಂತೆ ಬೇರೆ ಪಾನೀಯಗಳು ಒಆರ್‌ಎಸ್ ಅಲ್ಲವೆಂದು ಅವರು ಸಾಬೀತುಪಡಿಸಲಾಗಿ FSSAI ತಿಳಿಸಿದೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು ರಸ್ತೆ ಸರಿಪಡಿಸುವಿಕೆ: ಕಿರಣ್ ಮಜುಂದಾರ್ ಷಾ ಅವರ ನಡೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಂತಸ!?