ಬೆಂಗಳೂರು: ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಹೆಣ್ಣೂರು ಬಡಾವಣೆಯಲ್ಲಿ ತಡರಾತ್ರಿ ಐದು ಮಂದಿ ಪುಂಡ ರೌಡಿಗಳು ಲಾಂಗು ಮಚ್ಚುಗಳಿಂದ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಸರ್ವಜ್ಞನಗರ ನಿವಾಸಿಗಳೆಂದು ಕರೆಯಲ್ಪಡುವ ಈ ಕಿಡಿಗೇಡಿಗಳು ಮಧ್ಯರಾತ್ರಿಯಲ್ಲಿ ಗಲಾಟೆ ಮಾಡಿ, ಸಾರ್ವಜನಿಕರನ್ನು ಬೆದರಿಸಿದ್ದಾರೆ.ಇದನ್ನೂ ಓದಿ: ಕೊಪ್ಪಳ: ಗೋವು ಸಾಗಾಟದ ಕಂಟೇನರ್ ಮಗುಚಿ 8 ಗೋವುಗಳ ದುರಂತ ಸಾ*ವು!
ಸ್ಥಳೀಯರು ಈ ಕೃತ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು, ಐದು ಆರೋಪಿಗಳಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಇನ್ಸ್ಪೆಕ್ಟರ್ ಎಸ್. ರಾಮಚಂದ್ರ ತಿಳಿಸಿದ್ದಾರೆ. ಸ್ಥಳೀಯರು ರಾತ್ರಿ ಪ್ಯಾಟ್ರೋಲಿಂಗ್ ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಬಬಲ್ ಝೋನ್‌ನಲ್ಲಿ ಚಿನ್ನ; ಗ್ರಾಮ್‌ಗೆ 1,200 ರೂ. ಬೆಲೆ ಇಳಿಕೆಯ ಸಾಧ್ಯತೆ
ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದೀಗ ಮೂವರನ್ನು ಅರೆಸ್ಟ್ ಮಾಡಿರುವ ಪೊಲೀಸರು. ಅಮೀನ್ ಷರೀಫ್, ಸೈಯದ್ ಅರ್ಬಾಸ್, ಶೀದ್ ಖಾದರ್ ಮೂವರು ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕಿರಣ್ ಮಜುಂದಾರ್ ಶಾ ಅವರ ಟೀಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್ ವಿರುದ್ಧ ಉದ್ಯಮಿ ಗೋಯೆಂಕಾ ಆಕ್ರೋಶ
ಇನ್ನುಳಿದ ಇಬ್ಬರಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ತನಿಖೆ ವೇಳೆ ಆರೋಪಿಗಳು ಏರಿಯಾದಲ್ಲಿ ಹವಾ ಮೇಂಟೇನ್ ಮಾಡಲು ಕೃತ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಿರಣ್ ಎಂಬುವವರು ನೀಡಿದ ದೂರಿ ಅಡಿಯಲ್ಲಿ ಎಫ್.ಐ.ಆರ್ ಸಹ ದಾಖಲಾಗಿದೆ.SGF11- Women's Kanjivaram Woven Soft Silk Saree With Blouse Piece
ಪಟಾಕಿ ಹೊಡೆಯುವ ವಿಚಾರಕ್ಕೆ ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ. ಷರೀಫ್ ನಿನ್ನೆ ರಾತ್ರಿ 10 ಘಂಟೆಯ ಸುಮಾರಿಗೆ ಬೈಕ್ನಲ್ಲಿ ತೆರಳುತ್ತಿದ್ದ. ಆಗ ದೊಡ್ಡರಾಮಣ್ಣ ಬಡಾವಣೆ ಬಳಿಯಲ್ಲಿ ಪಟಾಕಿ ಹೊಡೆಯುತ್ತಿದ್ದ ಸ್ಥಳಿಯರು. ಈ ಸಮಯದಲ್ಲಿ ಸಣ್ಣ ಕಿಡಿಯೊಂದು ಷರೀಫ್ ಗೆ ಹಾರಿದೆ. ಆಗ ಅದೇ ಸ್ಥಳದಲ್ಲಿ ಗಲಾಟೆ ಶುರುವಾಗಿದೆ. ಗಲಾಟೆಯ ಕೆಲ ನಿಮಿಷದ ನಂತರ ತನ್ನ ಸಹಚಚರನ್ನು ಮತ್ತು ಸಂಭಂದಿಕರನ್ನು ಕರೆತಂದಿದ್ದ ಷರೀಫ್.ಇದನ್ನೂ ಓದಿ: ಸೇನೆ ಮತ್ತು ಪೋಲೀಸರು ರಾಷ್ಟ್ರದ ಭದ್ರತೆಯ ಸ್ಥಂಭಗಳು – ಪೊಲೀಸ್ ಸಂಸ್ಮರಣಾ ದಿನದಂದು ರಾಜನಾಥ್ ಸಿಂಗ್ ಹೆಮ್ಮೆ
ಮಾರಕಾಸ್ತ್ರಗಳ ಜೊತೆ ಬಂದಿದ್ದ ಷರೀಫ್ ಮತ್ತು ಸಹಚರರು. ಕೆಲವರಿಗೆ ಹೆದರಿಸಿ ಬೆದರಿಸಿದಲ್ಲದೇ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳೀಯ ಕೆಲ ಯುವಕರು ಒಂದಾಗಿ ಆರೋಪಿಗಳನ್ನ ಹಿಡಿದಿದ್ದಾರೆ. ಹಿಡಿದು ಆರೋಪಿಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಎಲ್ಲವನ್ನೂ ಸ್ಥಳಿಯರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ..ಇದನ್ನೂ ಓದಿ: ಮಹಾಘಟಬಂಧನ್ 'ಸಂಪೂರ್ಣ ಅವ್ಯವಸ್ಥೆ': ಬಿಹಾರ ಸಚಿವ ಸಂತೋಷ್ ಕುಮಾರ್ ಸುಮನ್ ತೀವ್ರ ಟೀಕೆ..!