Skip to main content
ವಿಡಿಯೋ
1/3
politics

ದೀಪಾವಳಿಗೆ ಟ್ರಂಪ್‌ರಿಂದ ಶುಭಾಶಯ: ಕತ್ತಲೆಯ ಮೇಲೆ ಬೆಳಕಿನ ಜಯ ಎಂದ ಅಮೆರಿಕ ಅಧ್ಯಕ್ಷ

By Pavitra Ganapathi Baradavalli
ದೀಪಾವಳಿಗೆ ಟ್ರಂಪ್‌ರಿಂದ ಶುಭಾಶಯ: ಕತ್ತಲೆಯ ಮೇಲೆ ಬೆಳಕಿನ ಜಯ ಎಂದ ಅಮೆರಿಕ ಅಧ್ಯಕ್ಷ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದು, ಇದು ಕುಟುಂಬ ಮತ್ತು ಸ್ನೇಹಿತರನ್ನು ಒಗ್ಗೂಡಿಸುವ ಸಂತೋಷದ ಸಮಯ ಎಂದು ಹೇಳಿದ್ದಾರೆ. ದೀಪಾವಳಿಯನ್ನು ಆಚರಿಸುವ ಎಲ್ಲ ಅಮೆರಿಕನ್ನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು,ಎಂದು ಟ್ರಂಪ್ ತಿಳಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ್ದು, ಇದು ಕುಟುಂಬ ಮತ್ತು ಸ್ನೇಹಿತರನ್ನು ಒಗ್ಗೂಡಿಸುವ ಸಂತೋಷದ ಸಮಯ ಎಂದು ಹೇಳಿದ್ದಾರೆ. ದೀಪಾವಳಿಯನ್ನು ಆಚರಿಸುವ ಎಲ್ಲ ಅಮೆರಿಕನ್ನರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು,ಎಂದು ಟ್ರಂಪ್ ತಿಳಿಸಿದ್ದಾರೆ. ಭಾರತ-ಅಮೆರಿಕ ನಡುವಿನ ತೆರಿಗೆ ಜಟಾಪಟಿಯ ನಡುವೆಯೂ ಅವರು ಶುಭಾಶಯ ಕಳುಹಿಸಿದ್ದಾರೆ.ಇದನ್ನೂ ಓದಿ: ನಿಮ್ಮ ಉಳಿತಾಯ ಖಾತೆಯ ಮೇಲೆ ಐಟಿ ಇಲಾಖೆಯ ಕಣ್ಣು? ಈ ವಹಿವಾಟುಗಳನ್ನು ಮಾಡುವಾಗ ಜಾಗರೂಕರಾಗಿರಿ!


ದೀಪಾವಳಿಯು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ಹಬ್ಬವಾಗಿದೆ. ಕುಟುಂಬಗಳು, ಸ್ನೇಹಿತರು ಒಟ್ಟಿಗೆ ಸೇರಿ ಸಂತೋಷ, ಭರವಸೆ ಮತ್ತು ನವೀಕರಣದ ಮನೋಭಾವವನ್ನು ಆಚರಿಸುವ ಕಾಲ ಇದು, ಎಂದು ಟ್ರಂಪ್ ಹೇಳಿದ್ದಾರೆ. ಲಕ್ಷಾಂತರ ಜನರು ದೀಪಗಳು ಬೆಳಗಿಸುವಾಗ, ಒಳ್ಳೆಯದು ಯಾವಾಗಲೂ ಕೆಟ್ಟದ್ದರ ಮೇಲೆ ಜಯಗಳಿಸುತ್ತದೆ ಎಂಬ ಸತ್ಯವನ್ನು ನಾವು ಸಂಭ್ರಮಿಸುತ್ತೇವೆ. ಹಬ್ಬವು ಶಾಂತಿ, ಸಮೃದ್ಧಿ ಮತ್ತು ಭರವಸೆಯನ್ನು ತರಲಿ, ಎಂದು ಅವರು ಶುಭ ಕೋರಿದ್ದಾರೆ.ಅಮೆರಿಕದಲ್ಲಿ ದೀಪಾವಳಿ ಆಚರಣೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದೆ.ಇದನ್ನೂ ಓದಿ: ಹೆಣ್ಣೂರು ಬಡಾವಣೆಯಲ್ಲಿ ಪುಡಿ ರೌಡಿಗಳ ದಾಂಧಲೆ: ಸಾರ್ವಜನಿಕರ ಮೇಲೆ ಹಲ್ಲೆ..!!


ಪೆನ್ಸಿಲ್ವೇನಿಯಾ, ಕನೆಕ್ಟಿಕಟ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ರಾಜ್ಯ ರಜಾದಿನವಾಗಿ ಗುರುತಿಸಲಾಗಿದೆ. ಕ್ಯಾಲಿಫೋರ್ನಿಯಾದ ಅಸೆಂಬ್ಲಿ ಮಸೂದೆಯನ್ವಯ 2026 ರ ಜನವರಿಯಿಂದ ಶಾಲಾ ಮತ್ತು ಉದ್ಯೋಗಿಗಳಿಗೆ ರಜೆ ಜಾರಿಗೆ ಬರಲಿದೆ. ನ್ಯೂಯಾರ್ಕ್, ಎಡಿಸನ್, ಜೆರ್ಸಿ ಸಿಟಿ, ಡಲ್ಲಾಸ್ ಮತ್ತು ಹೂಸ್ಟನ್ ಕೆಲವು ಜಿಲ್ಲೆಗಳು ಶಾಲಾ ರಜೆಯೊಂದಿಗೆ ದೀಪಾವಳಿಯನ್ನು ಆಚರಿಸುತ್ತಿವೆ ಎಂದರು.SGF11- Women's Kanjivaram Woven Soft Silk Saree With Blouse Piece