ಬೆಂಗಳೂರು: ದೊಡ್ಡ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಯೂಸೂಫ್ ಅವರಿಗೆ ಈಗ ಪತ್ನಿಯ ಕ್ರೂರ ಹಿಂಸೆಯ ತುದಿಯಲ್ಲೇ ಕಂಡುಬಂದಿದೆ. ಮೈ ಲೇಝರ್ ಕ್ಲಬ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯೂಸೂಫ್ ಅವರು ಎನ್ಆರ್ಸಿ ವಿರೋಧಿ ಉಗ್ರ ಹೋರಾಟ ನಡೆಸಿ ಟೌನ್ ಹಾಲ್ನಲ್ಲಿ ಧರಣಿ ಮಾಡಿದ್ದರು.ಇದನ್ನೂ ಓದಿ: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆ; ಪೌರಾಣಿಕ ಹಿನ್ನೆಲೆ ಮತ್ತು ಪ್ರಯೋಜನಗಳು ಹೀಗಿವೆ
ರಾಜಕೀಯ ನಾಯಕರೊಂದಿಗೆ ಒಡನಾಟವೂ ಇಟ್ಟುಕೊಂಡಿದ್ದ ಅವರಿಗೆ ಕುಟುಂಬ ಕಲಹದಿಂದ ನೊಂದು ಕಚೇರಿಯಲ್ಲಿ ಮಲಗಿದ್ದರು. ಪತ್ನಿ ಆಯೇಷಾ ಅವರು ಮನೆಗೆ ಬರದಿದ್ದರಿಂದ ಹತ್ತಾರು ಬಾರಿ ಕರೆ ಮಾಡಿದರೂ ಯೂಸೂಫ್ ಅವರು ಮೊಬೈಲ್ ಸೈಲೆಂಟ್ ಮಾಡಿ ನಿದ್ರಿಸಿದ್ದರು. ಬೆಳಗ್ಗೆ 3.30 ರಿಂದ 4 ಗಂಟೆಯವರೆಗೆ ಕಚೇರಿಗೆ ಬಂದ ಆಯೇಷಾ, ತನ್ನ ಸಾಕುತಾಯಿ ನಗೀನಾ ಮತ್ತು ನಾಲ್ವರು ಅಪರಿಚಿತರೊಂದಿಗೆ ಯೂಸೂಫ್ ಅವರ ಮೇಲೆ ಕೋಲು, ಕತ್ತಿಯಿಂದ ಹಲ್ಲೆ ನಡೆಸಿದರು.ಇದನ್ನೂ ಓದಿ: ಅಯೋಧ್ಯೆಯ ರಾಮನಗರಿಯಲ್ಲಿ ವಿಶ್ವದಾಖಲೆಯ ದೀಪೋತ್ಸವ
ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಯೂಸೂಫ್ ಅವರನ್ನು ಅಟ್ಟಾಡಿಸಿ ಹೊಡೆದರು. ಗಂಭೀರವಾಗಿ ಗಾಯಗೊಂಡ ಅವರು ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪತ್ನಿ ಟಾರ್ಚರ್ ಕೊಡುತ್ತಿದ್ದಳು. ರೌಡಿಗಳನ್ನು ಕರೆತಂದು ಹೊಡೆಸಿದಳು ಎಂದು ಯೂಸೂಫ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಆಯೇಷಾ ಮತ್ತು ನಗೀನಾಳ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.SGF11- Women's Kanjivaram Woven Soft Silk Saree With Blouse Piece