ಬೆಂಗಳೂರು: ವೈದ್ಯೆ ಡಾ. ಕೃತಿಕಾ ರೆಡ್ಡಿ ಅವರ ಕೊಲೆ ಪ್ರಕರಣದಲ್ಲಿ ಪತಿ, ವೈದ್ಯ ಡಾ. ಮಹೇಂದ್ರ ರೆಡ್ಡಿ ವಿರುದ್ಧ ಹೊಸ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಮಾರಾಟಕ್ಕಲ್ಲ ಎಂದು ನಮೂದಿಸಲಾದ ಔಷಧಗಳನ್ನು ಮಹೇಂದ್ರ ರೆಡ್ಡಿ ಮನೆಗೆ ತಂದಿದ್ದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಯಿಂದ ತರಲಾಗಿರುವ ಸಾಧ್ಯತೆ ಇದೆ.ಇದನ್ನೂ ಓದಿ: ನಿತೀಶ್ ಸಿಎಂ ಆಗಲ್ಲ, ಆದರೆ ಸ್ವಾಗತವಿದೆ: ಪಪ್ಪು ಯಾದವ್ ಮಹತ್ವದ ಹೇಳಿಕೆ..!
ಕೃತಿಕಾ ರೆಡ್ಡಿ ಇದ್ದ ಕೋಣೆಯಲ್ಲಿ ಗ್ಯಾಸ್ಟ್ರಿಕ್ ಔಷಧ, ಗ್ಲೂಕೋಸ್ ಬಾಟಲ್ಗಳು ಸೇರಿದಂತೆ ರಾಶಿ ರಾಶಿ ಔಷಧಗಳು ಪತ್ತೆಯಾಗಿವೆ. ಮಹೇಂದ್ರ ರೆಡ್ಡಿ ಆ ಕೋಣೆಯನ್ನು ಕ್ಲಿನಿಕ್ನಂತೆಯೇ ಬದಲಾಯಿಸಿದ್ದರು ಎನ್ನಲಾಗಿದೆ. ಋತುಚಕ್ರದ ಸಮಯದಲ್ಲೂ ಡ್ರಿಪ್ ಅಂದರೆ ಸಲೈನ್ ಹಾಕಿಕೊಳ್ಳಲು ಮಹೇಂದ್ರ ಒತ್ತಾಯಿಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.ಇದನ್ನೂ ಓದಿ: ಗಲಭೆಕೋರರ ಕೇಸು ಹಿಂಪಡೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ಮೇಲೆ ಜೆಡಿಎಸ್ ಆಕ್ರೋಶ..!!
ಅಲ್ಲದೆ, ಕ್ಯಾನುಲಾ ಚುಚ್ಚಿ ಕೃತಿಕಾ ಅವರ ಕೈತುಂಬಾ ಸೂಜಿಯ ಗಾಯಗಳನ್ನು ಮಾಡಿದ್ದ ಬಗ್ಗೆಯೂ ತನಿಖೆಯಿಂದ ತಿಳಿದುಬಂದಿದೆ. ಈ ಎಲ್ಲಾ ಅಂಶಗಳು ಕೊಲೆಯ ಹಿಂದೆ ಪತಿ ಮಹೇಂದ್ರ ರೆಡ್ಡಿಯ ಕೈವಾಡವಿರುವುದು ಸ್ಪಷ್ಟವಾಗಿ ತಿಳಿದುಬರುತ್ತದೆ.SGF11- Women's Kanjivaram Woven Soft Silk Saree With Blouse Piece