ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಸಚಿವ ರಾಮಲಿಂಗಾ ರೆಡ್ಡಿ, ಬಿಜೆಪಿ ಪಕ್ಷವು ಭ್ರಷ್ಟಾಚಾರದ ಗಂಗೋತ್ರಿ ಎಂದು ಬಣ್ಣಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಗೆ ತಿಲಾಂಜಲಿ ಕೊಟ್ಟವರು ಈಗ ಹರಿಶ್ಚಂದ್ರರು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.ಇದನ್ನೂ ಓದಿ: ವೈದ್ಯ ಪತಿಯಿಂದ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣ: ಮಾರಾಟಕ್ಕಲ್ಲದ ಔಷಧಿಗಳ ಪತ್ತೆ, ಕೊಠಡಿ ಕ್ಲಿನಿಕ್‌ನಂತೇ ರೂಪಾಂತರಿಸಿದ್ದ ಪತಿರಾಯ..!!
ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆದಾಗ, ನಾಲ್ಕು ಬಿಜೆಪಿ ಮುಖ್ಯಮಂತ್ರಿಗಳು ಎಷ್ಟು ಹಣ ಕಳುಹಿಸಿದ್ದರು? ಗುತ್ತಿಗೆದಾರರ ಸಂಘವು 40% ಕಮಿಷನ್ ಆರೋಪ ಮಾಡಿದಾಗ, ಅದೇ ಕಪ್ಪು ಹಣವನ್ನು ಯಾರು ಯಾರಿಗೆ ಕಳುಹಿಸಿದ್ರಿ? ಬಿಜೆಪಿ ಈ ಪ್ರಶ್ನೆಗಳಿಗೆ ಉತ್ತರ ಕೊಡಲಿ, ಎಂದು ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ.ಇದನ್ನೂ ಓದಿ: ನಿತೀಶ್ ಸಿಎಂ ಆಗಲ್ಲ, ಆದರೆ ಸ್ವಾಗತವಿದೆ: ಪಪ್ಪು ಯಾದವ್ ಮಹತ್ವದ ಹೇಳಿಕೆ..!
ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿ, ಹಿರಿಯ ಬಿಜೆಪಿ ನಾಯಕರಾದ ಬಿ.ಎಸ್. ಯಡಿಯೂರಪ್ಪ ಮತ್ತು ದಿವಂಗತ ಅನಂತ್ ಕುಮಾರ್ ಅವರು ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡುವ ಬಗ್ಗೆ ಮಾತನಾಡಿಕೊಂಡಿರುವ ವಿಡಿಯೋ ಇದೆ ಎಂದು ಹೇಳಿದ್ದಾರೆ. 2008 ರಿಂದ ಬಿಜೆಪಿ ಏನೇನು ಲೂಟಿ ಮಾಡಿದೆಯೋ ಅದನ್ನೆಲ್ಲ ಕೇಂದ್ರಕ್ಕೆ ಹಾಗೂ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿತ್ತು. ಬಿಜೆಪಿಯವರಿಗೆ ಯಾವುದೇ ನೈತಿಕ ಶಕ್ತಿ ಇಲ್ಲ. ಮೊದಲು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ, ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದಾರೆ.SGF11- Women's Kanjivaram Woven Soft Silk Saree With Blouse Piece