ರಾಯಚೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನದಲ್ಲಿ ಭಾಗವಹಿಸಿ ಅಮಾನತುಗೊಂಡಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಪ್ರವೀಣ್ ಕುಮಾರ್ ಅವರಿಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಕರ್ತವ್ಯ ಲೋಪ ಹಾಗೂ ಹಣ ದುರ್ಬಳಕೆಯ ಆರೋಪಗಳು ಅವರ ಮೇಲೆ ಕೇಳಿಬಂದಿದ್ದು, ಪ್ರಕರಣ ಪರಿಶೀಲನಾ ಹಂತದಲ್ಲಿದೆ.ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಹೊಸ ನಿರ್ಧಾರದಿಂದ ಗುಡ್‌ನ್ಯೂಸ್...H-1B ಶುಲ್ಕ ವಿನಾಯಿತಿ ಘೋಷಣೆ!
ಲಿಂಗಸುಗೂರು ತಾಲ್ಲೂಕಿನ ರೋಡಲಬಂಡಾ ಗ್ರಾಮದ ಪಿಡಿಒ ಆಗಿ ಕೆಲಸ ಮಾಡುತ್ತಿದ್ದ ಪ್ರವೀಣ್, ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕರಾದ ನಂತರ 2023ರ ಜೂನ್ 15ರಂದು ಪಿಡಿಒ ಕರ್ತವ್ಯದಿಂದ ಜಿಲ್ಲಾಧಿಕಾರಿಗಳಿಂದ ಬಿಡುಗಡೆಗೊಂಡಿದ್ದರು. ಈ ಆದೇಶದನ್ವಯ ಜೂನ್ 30ರಂದು ಗ್ರಾಮ ಪಂಚಾಯತಿಗಳ ಕಾರ್ಯಭಾರ ಹಸ್ತಾಂತರವಾಗಿತ್ತು.ಇದನ್ನೂ ಓದಿ: ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಎಂಬ ಸಿಎಂ ಸಿದ್ದರಾಮಯ್ಯನವರ ಆರೋಪ ನಾಟಕವಷ್ಟೇ: ವಿಜಯೇಂದ್ರ ಆಕ್ರೋಶ
ಆದರೆ, ಜೂನ್ 25ರಿಂದ 30ರ ಅವಧಿಯಲ್ಲಿ ಎರಡು ಪಂಚಾಯಿತಿಗಳಿಂದ ₹14.38 ಲಕ್ಷ ಅನುದಾನವನ್ನು ಪ್ರವೀಣ್ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಣದಿನ್ನಿ ಪಂಚಾಯತಿಯಲ್ಲಿ ₹5.18 ಲಕ್ಷ ಮತ್ತು ಹಿರೇಹಣಗಿ ಪಂಚಾಯತ್‌ನಲ್ಲಿ ₹9.20 ಲಕ್ಷ ವ್ಯಯಿಸಲಾಗಿದೆ ಎಂದು ವರದಿಯಾಗಿದೆ.ಇದನ್ನೂ ಓದಿ: ಶ್ವೇತಭವನದಲ್ಲಿ ಭಾರತೀಯರಿಗೆ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ ಅಧ್ಯಕ್ಷ ಟ್ರಂಪ್
ಬೇರೆಡೆ ನಿಯೋಜನೆಗೊಂಡಿದ್ದರೂ, ಪಿಡಿಒ ಸ್ಥಾನದಲ್ಲಿಯೇ ಮುಂದುವರಿದು 15ನೇ ಹಣಕಾಸು ಯೋಜನೆಯಡಿ ಬೀದಿ ದೀಪ, ಸ್ಯಾನಿಟರಿ ಸಾಮಗ್ರಿ ಹಾಗೂ ಪಂಪ್‌ಗಳ ಖರೀದಿಗೆ ಅನುದಾನ ದುರ್ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಆರೋಪಗಳ ಕುರಿತು ಸಿರವಾರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ವರದಿ ಸಲ್ಲಿಕೆಯಾಗಿದ್ದು, ಅದು ಪರಿಶೀಲನೆಯಲ್ಲಿದೆ.ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿಗೆ ಎರಡು ಸಮನ್ವಯ ಸಮಿತಿಗಳ ರಚನೆ
ಕಳೆದ ಅಕ್ಟೋಬರ್ 12ರಂದು ಲಿಂಗಸುಗೂರಿನಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಪಥಸಂಚಲನ ಕಾರ್ಯಕ್ರಮ ನಡೆದಿತ್ತು. ಈ ಪಥಸಂಚಲನದಲ್ಲಿ ದೊಣ್ಣೆ ಹಿಡಿದು, ಗಣವೇಷ ಧರಿಸಿ ಪ್ರವೀಣ್ ಭಾಗವಹಿಸಿದ್ದರು.SGF11 Women's Kanjivaram Pure Soft Silk Saree For Women Pure Golden Zari With Blouse Piece