ಕೊಪ್ಪಳದ ತುಂಗಭದ್ರೆ ತೀರದ ಸಮೀಪ ಅಕ್ರಮ ಮರಳು ಸಾಗಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ ಅವರು, ಪತ್ರ ಬರೆದಿದ್ದಾರೆ. ಈ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳೇ ದಂಧೆಕೋರರಿಗೆ ಸಾಥ್ ನೀಡಿದ್ದಾರೆ ಎಂದು ಟೀಕಿಸಿದ್ದಾರೆ. ಈ ಕುರಿತು, ಅಧಿಕಾರಿಗಳು 20 ಪ್ರಶ್ನೆಗಳ ಗಂಭೀರ ಪ್ರತ್ಯಾರೋಪಗಳು ಕೇಳಿಬಂದಿರುವುದಾಗಿ ಸುದ್ದಿ ವರದಿಯಾಗಿದೆ.
ಮರಳು ಮಾಫಿಯಾಗೆ ಸಂಬಂಧಪಟ್ಟಂತೆ ಯಲಬುರ್ಗಾ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರೆಡ್ಡಿ ಅವರು, ಅಧಿಕಾರಿಗಳನ್ನು ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿರುವ ಬೆನ್ನಲ್ಲೇ ಯಾರದೇ ಸಹಿ ಇರದ ಮತ್ತೊಂದು ಪತ್ರ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗೆ ಪ್ರತಿಪತ್ರವು ಅಧಿಕಾರಿಗಳ ವರ್ಗದಿಂದ ಬಂದಿದೆ ಎಂದು ವೈರಲ್ ಆಗಿದೆ ಎನ್ನಲಾಗಿದೆ.
ಅಕ್ರಮ ಮರಳುಗಾರಿಕೆಯನ್ನು ತಡೆಯಲು ನಿಯೋಜಿಸಿರುವ ಅಧಿಕಾರಿಗಳೇ ಇದರಲ್ಲಿ ಷಾಮೀಲಾಗಿರುವಂತೆ ಆರೋಪಿಸಿ, ಶೀಘ್ರವೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ತದ್ವಿರುದ್ದವಾಗಿ, 20 ಪ್ರಶ್ನೆಗಳ ಸಹಿತವಾದ ಮತ್ತೊಂದು ಪತ್ರದಲ್ಲಿ ಕೌಂಟರ್ ಅಟ್ಯಾಕ್ ಮಾಡಲಾಗಿ ತಿಳಿಸಿದೆ ಎನ್ನಲಾಗಿದೆ. styledose Women Analogue Wrist Watches for Women's & Girls&Miss&Ladies Diamond Studded Dial Rosegold Colored Stylish Bracelet Strap
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ -
ಎರಡು ದಿನಗಳ ಹಿಂದೆ ಬೆಳಕಿಗೆ ಬಂದಿರುವ ಈ ವಿಚಾರದ ಕುರಿತಯ ಪ್ರತಿಪಕ್ಷ ನಾಯಕ ಬಿ. ವೈ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರ ಬೇರೂರಿದೆ ಇದಕ್ಕಿಂತ ಪುರಾವೆ ಬೇಕೆ ಎಂದು ಅವರು ಟ್ವೀಟ್ ಮಾಡುವ ಮೂಲಕ ಹರಿಹಾಯ್ದರು ಎನ್ನಲಾಗಿದೆ. ಇದನ್ನೂ ಓದಿ: ಭಾರತವು ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುವುದು - ಮೋದಿ ಭರವಸೆ ಬಗ್ಗೆ ಟ್ರಂಪ್ ಹೇಳಿಕೆ!