Skip to main content
ವಿಡಿಯೋ
1/3
cinema

ಅಣ್ಣಾವ್ರ ಬಗ್ಗೆ ಅಮಿತಾಭ್‌ ಬಚ್ಚನ್‌ ಬಾಯಲ್ಲಿ ಕೇಳೋಕೆ ಎಷ್ಟು ಮುದ್ದಾಗಿದೆ ಗೊತ್ತಾ? ಅವರು ಕನ್ನಡಿಗರಿಗೆ ದೇವರೆಂದ ಬಿಗ್‌ಬಿ

By Ram Chethan
ಅಣ್ಣಾವ್ರ ಬಗ್ಗೆ ಅಮಿತಾಭ್‌ ಬಚ್ಚನ್‌ ಬಾಯಲ್ಲಿ ಕೇಳೋಕೆ ಎಷ್ಟು ಮುದ್ದಾಗಿದೆ ಗೊತ್ತಾ? ಅವರು ಕನ್ನಡಿಗರಿಗೆ ದೇವರೆಂದ ಬಿಗ್‌ಬಿ

‘ಕಾಂತಾರ 1’ ಯಶಸ್ಸಿನ ಮಧ್ಯೆ ರಿಷಬ್ ಶೆಟ್ಟಿ KBC ವೇದಿಕೆಯಲ್ಲಿ ಬಿಗ್ ಬಿಯನ್ನು ಭೇಟಿಯಾದರು. ಈ ಸಂದರ್ಭ ಅಮಿತಾಭ್ ಬಚ್ಚನ್ ಅವರು ಡಾ. ರಾಜ್‌ಕುಮಾರ್ ಅವರನ್ನು ಸ್ಮರಿಸಿ, ಅವರ ಸರಳತೆ ಮತ್ತು ಶ್ರೇಷ್ಠತೆಯನ್ನು ಹೊಗಳಿದರು.

ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಡಾ. ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡು ಮನಸಾರೆ ಹೊಗಳಿದ ಘಟನೆ ನಡೆದಿದೆ. "ಅಣ್ಣಾವ್ರು" ಎಂದು ಕರೆಯಲ್ಪಡುವ ಡಾ. ರಾಜ್‌ಕುಮಾರ್ ಅವರ ಶ್ರೇಷ್ಠತೆಯ ಕುರಿತು ಅಮಿತಾಭ್ ಮಾತನಾಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ 1' ಚಿತ್ರವು ಎಲ್ಲೆಡೆ ಅಬ್ಬರಿಸುತ್ತಿದೆ. ಚಿತ್ರ ಬಿಡುಗಡೆಯಾಗಿ ವಾರಗಳು ಕಳೆದರೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಾ ಯಶಸ್ವಿ ಪ್ರದರ್ಶನ ಮುಂದುವರೆಸಿದೆ.

ಈ ಯಶಸ್ಸಿನ ನಡುವೆ, ರಿಷಬ್ ಶೆಟ್ಟಿ ಅವರು 'ಕೌನ್ ಬನೇಗಾ ಕರೋಡ್‌ಪತಿ' (KBC) ಕಾರ್ಯಕ್ರಮದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರು ಡಾ. ರಾಜ್‌ಕುಮಾರ್ ಅವರನ್ನು ಕುರಿತು ಮಾತನಾಡಿದ್ದಾರೆ.Symbol Premium Mens Smart Casual Fully Lined Mild Winter Jacket (Regular Fit)

ಡಾ. ರಾಜ್‌ಕುಮಾರ್ ಅವರೊಂದಿಗಿನ ತಮ್ಮ ಭೇಟಿ, ಒಡನಾಟ ಮತ್ತು ಹಳೆಯ ದಿನಗಳನ್ನು ಅಮಿತಾಭ್ ಬಚ್ಚನ್ ಮೆಲುಕು ಹಾಕಿದ್ದಾರೆ. ರಾಜ್‌ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಅಮಿತಾಭ್ ಹೇಳಿದ ಮಾತುಗಳು ಎಲ್ಲರ ಗಮನ ಸೆಳೆದಿವೆ.

"ಅವರು ಕನ್ನಡಿಗರಿಗೆ ದೇವರು. ಅವರನ್ನು ಭೇಟಿಯಾದಾಗ, ಅವರು ಅತ್ಯಂತ ಸರಳ ವ್ಯಕ್ತಿಯಾಗಿ ಕಂಡರು. ಸದಾ ವಿನಮ್ರರಾಗಿದ್ದರು. ಸರಳವಾದ ಬಟ್ಟೆ ಧರಿಸಿ, ಸರಳವಾದ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ದೊಡ್ಡ ಕಲಾವಿದರು ಮತ್ತು ಜನರ ಮಧ್ಯೆ ಅಪಾರ ಹೆಸರು ಗಳಿಸಿದ್ದರು. ನಾವು ಹೋದಾಗಲೆಲ್ಲ ಅವರಿಗೆ ವಂದಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದೆವು" ಎಂದು ಅಮಿತಾಭ್ ಬಚ್ಚನ್ ಡಾ. ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ.ಇದನ್ನು ಓದಿ:ಬಿಗ್‌ಬಾಸ್‌ ಅಲ್ಲ..ಸೂರಜ್‌ ಸಿಂಗ್‌ಗೋಸ್ಕರ ಶುರುವಾಯ್ತು ಪೈಪೋಟಿ! ಒಬ್ಬನಿಗಾಗಿ ಇಬ್ಬರು, ಗೆಲ್ಲೋರ್ಯಾರು?

ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡ ಪೋಸ್ಟ್‌ನಲ್ಲಿ, ರಿಷಬ್ ಶೆಟ್ಟಿ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಜೊತೆ ಕಾಣಿಸಿಕೊಂಡಿದ್ದಾರೆ. ಇದು ಗಮನಾರ್ಹ ಬೆಳವಣಿಗೆಯಾಗಿದೆ.

ಇಂದು ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ 83ನೇ ಜನ್ಮದಿನ. ಈ ಶುಭ ದಿನದಂದು ಹೊಂಬಾಳೆ ಫಿಲ್ಮ್ಸ್, ಅಮಿತಾಭ್ ಬಚ್ಚನ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದೆ.

ಹೊಂಬಾಳೆ ಫಿಲ್ಮ್ಸ್ ಪೋಸ್ಟ್ ಮಾಡಿದ ಮಾಹಿತಿಯ ಪ್ರಕಾರ, ರಿಷಬ್ ಶೆಟ್ಟಿ 'ಕೌನ್ ಬನೇಗಾ ಕರೋಡ್‌ಪತಿ'ಯ ಸೀಸನ್ 17 ರಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಅಮಿತಾಭ್ ಬಚ್ಚನ್ ಅವರು ನಡೆಸಿಕೊಡುತ್ತಿದ್ದಾರೆ.

ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್‌ಪತಿ' ಸೀಸನ್ 17 ಕಳೆದ ತಿಂಗಳು, ಅಂದರೆ ಆಗಸ್ಟ್ 11 ರಿಂದ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಹಾಟ್ ಸೀಟ್‌ನಲ್ಲಿ ಕುಳಿತುಕೊಂಡಿದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ತಮ್ಮ ಪೋಸ್ಟ್ ಮೂಲಕ ಮಾಹಿತಿ ನೀಡಿತ್ತು.