ಭಾರತೀಯ ಧಾರಾವಾಹಿಗಳಲ್ಲಿ ಅಸಾಧ್ಯವೆಂಬುದು ಯಾವುದೂ ಇಲ್ಲ. ಹಾವುಗಳಿಗೆ ಮರುಜೀವ ನೀಡುವುದು, ಮನುಷ್ಯರು ಹಕ್ಕಿಗಳಂತೆ ಹಾರಾಡುವುದು, ಸ್ಕೂಟರ್‌ನಲ್ಲಿ ಅಂತರಿಕ್ಷಕ್ಕೆ ಹೋಗಿಬರುವುದು ಹೀಗೆ ಹಲವು ಅಚ್ಚರಿಯ ಸಂಗತಿಗಳು ಇಲ್ಲಿ ಸಾಮಾನ್ಯ. ಹತ್ತನೇ ತರಗತಿ ಫೇಲ್ ಆದ ಸೊಸೆ, ಗಂಡನ ಜೀವ ಉಳಿಸಲು ಆಪರೇಷನ್ ಮಾಡುವುದು, ಮೂರನೇ ಮಹಡಿಯಿಂದ ಹಾರಿದವರು ಮೂರು ಎಪಿಸೋಡ್ ನಂತರ ಭೂಮಿಗೆ ಇಳಿಯುವುದು - ಇಂತಹ ಹಲವು ಅದ್ಭುತಗಳನ್ನು ಹಿಂದಿ ಧಾರಾವಾಹಿಗಳು ಈಗಾಗಲೇ ತೋರಿಸಿವೆ.
ಈಗ ಹಿಂದಿ ಧಾರಾವಾಹಿಯೊಂದು ನಿಜಕ್ಕೂ ವಿಭಿನ್ನವಾದ ಪ್ರಯತ್ನಕ್ಕೆ ಕೈಹಾಕಿದೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರುವ, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಜನಪ್ರಿಯ ಹಿಂದಿ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಲವು ಪುಸ್ತಕಗಳು, ಡಾಕ್ಯುಮೆಂಟರಿಗಳು ಮತ್ತು ಸಿನಿಮಾಗಳಿಗೆ ವಸ್ತುವಾಗಿದ್ದ ಬಿಲ್ ಗೇಟ್ಸ್, ಇದೀಗ ಹಿಂದಿ ಧಾರಾವಾಹಿಯೊಂದರಲ್ಲಿ ನಟಿಸಲು ಸಿದ್ಧರಾಗಿದ್ದಾರೆ.Venzina® Men's Modular Tech Wear Jacket-Hooded Abrasion Resistant Waterproof Windproof Shell with Zippered Pockets for Urban Outdoor Street Style
ಅತ್ಯಂತ ಜನಪ್ರಿಯ ಹಿಂದಿ ಧಾರಾವಾಹಿ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ' ಯ ಎರಡನೇ ಸರಣಿ ಆರಂಭವಾಗಿದ್ದು, ಇದರಲ್ಲಿ ಬಿಲ್ ಗೇಟ್ಸ್ ಒಂದು ವಿಶೇಷ ಎಪಿಸೋಡ್‌ನಲ್ಲಿ ನಟಿಸಲಿದ್ದಾರೆ. ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ 'ಕ್ಯೂಂಕಿ ಸಾಸ್ ಭಿ ಕಬಿ ಬಹು ಥೀ 2' ಧಾರಾವಾಹಿಯ ಮೂಲಕ ಟಿವಿ ಲೋಕಕ್ಕೆ ಮರಳಿದ್ದು, ಈ ಧಾರಾವಾಹಿಯನ್ನು ಅದ್ದೂರಿಯಾಗಿ ನಿರ್ಮಿಸಲಾಗುತ್ತಿದೆ.
ಇದೇ ಧಾರಾವಾಹಿಯಲ್ಲಿ ಬಿಲ್ ಗೇಟ್ಸ್ ನಟಿಸಲಿದ್ದು, ಸ್ಮೃತಿ ಇರಾನಿ ಅವರಿಗೆ ವಿಡಿಯೋ ಕರೆ ಮಾಡಲಿದ್ದಾರೆ. ಸ್ಮೃತಿ ಅವರ ಪಾತ್ರವು ಧಾರಾವಾಹಿಯಲ್ಲಿ ಆರಂಭಿಸಲು ಮುಂದಾಗಿರುವ ಉದ್ಯಮಕ್ಕೆ ಸಂಬಂಧಿಸಿದಂತೆ ಬಿಲ್ ಗೇಟ್ಸ್ ಅವರಿಂದ ಸಲಹೆ ಪಡೆಯಲಿದೆ ಹಾಗೂ ಅವರು ಹೂಡಿಕೆ ಕೂಡ ಮಾಡಲಿದ್ದಾರೆ. ಸ್ಮೃತಿ ಇರಾನಿ ಅವರು ಬಿಲ್ ಗೇಟ್ಸ್ ಅವರಿಗೆ ಮಾಡುವ ವಿಡಿಯೋ ಕರೆಯನ್ನು ರೆಕಾರ್ಡ್ ಮಾಡಿ ಧಾರಾವಾಹಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದರ ಮೂಲಕ ಬಿಲ್ ಗೇಟ್ಸ್ ಭಾರತೀಯ ಟಿವಿ ಲೋಕಕ್ಕೆ ಅಧಿಕೃತವಾಗಿ ಪ್ರವೇಶ ಪಡೆಯಲಿದ್ದಾರೆ.ಅಣ್ಣಾವ್ರ ಬಗ್ಗೆ ಅಮಿತಾಭ್ ಬಚ್ಚನ್ ಬಾಯಲ್ಲಿ ಕೇಳೋಕೆ ಎಷ್ಟು ಮುದ್ದಾಗಿದೆ ಗೊತ್ತಾ? ಅವರು ಕನ್ನಡಿಗರಿಗೆ ದೇವರೆಂದ ಬಿಗ್‌ಬಿ
ಕೆಲವು ದಿನಗಳ ಹಿಂದೆಯಷ್ಟೇ, ನಟಿ ಸಾಕ್ಷಿ ತನ್ವರ್ ಮತ್ತು ಕಿರಣ್ ಕರ್ಮಕಾರ್ ಅವರು ಇದೇ ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇವರಿಬ್ಬರೂ ಟಿವಿ ಲೋಕದ ಜನಪ್ರಿಯ ತಾರೆಯರು. ಈಗ ಏಕಾಏಕಿ ಬಿಲ್ ಗೇಟ್ಸ್ ಅವರನ್ನೇ ಅತಿಥಿ ಪಾತ್ರಕ್ಕೆ ಕರೆತರಲಾಗಿದೆ. ಬಿಲ್ ಗೇಟ್ಸ್ ಅವರಿಗೆ ಟಿವಿ ಮತ್ತು ಸಿನಿಮಾ ಲೋಕ ಹೊಸದೇನಲ್ಲ.
ಅವರು ಈ ಹಿಂದೆ ಏಳು ಡಾಕ್ಯುಮೆಂಟರಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವುಗಳಲ್ಲಿ ಕೆಲವು ಡಾಕ್ಯುಮೆಂಟರಿಗಳು ಬಿಲ್ ಗೇಟ್ಸ್ ಅವರ ಕುರಿತಾಗಿಯೇ ಇವೆ. ಕೆಲವು ಸಿನಿಮಾಗಳಲ್ಲಿ ಬಿಲ್ ಗೇಟ್ಸ್ ಅವರ ಪಾತ್ರವನ್ನು ಬಳಸಿಕೊಳ್ಳಲಾಗಿದ್ದು, ಮತ್ತೆ ಕೆಲವು ಸಿನಿಮಾಗಳಲ್ಲಿ ಸ್ವತಃ ಅವರೇ ಕಾಣಿಸಿಕೊಂಡಿದ್ದಾರೆ. ಖ್ಯಾತ ಟಿವಿ ಶೋ 'ಬಿಗ್ ಬ್ಯಾಂಗ್ ಥಿಯರಿ'ಯ ಒಂದು ಎಪಿಸೋಡ್‌ನಲ್ಲಿ ಸ್ವತಃ ಬಿಲ್ ಗೇಟ್ಸ್ ನಟಿಸಿದ್ದು, ಈ ಶೋನಲ್ಲಿ ಎಲಾನ್ ಮಸ್ಕ್ ಕೂಡ ಕಾಣಿಸಿಕೊಂಡಿದ್ದಾರೆ.