Skip to main content
ವಿಡಿಯೋ
1/3
sports

ಮಹಿಳಾ ವಿಶ್ವಕಪ್ 2025: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ 6 ವಿಕೆಟ್‌ಗಳ ಜಯ

By Gireesh Vasishta
ಮಹಿಳಾ ವಿಶ್ವಕಪ್ 2025: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ 6 ವಿಕೆಟ್‌ಗಳ ಜಯ

ಇಂಗ್ಲೆಂಡ್ ಇನ್ನಿಂಗ್ಸ್: ಸಾಮಾನ್ಯ ಮೊತ್ತ - ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾದ ಬಿಗಿ ದಾಳಿಯ ಮುಂದೆ ಇಂಗ್ಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 244 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಅತಿ ಹೆಚ್ಚು 78 ರನ್ (105 ಎಸೆತ) ಗಳಿಸಿದರು. ಆಸ್ಟ್ರೇಲಿಯಾ ಪರ ಮಿಂಚಿದ ಆಲ್‌ರೌಂಡರ್ ಅನ್ನಾಬೆಲ್ Sutherland 3/60 ವಿಕೆಟ್ ಕಬಳಿಸಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಆಶ್ಲೀ ಗಾರ್ಡ್ನರ್ 2ವಿಕೆಟ್ ಪಡೆದರು.

ಇಂದೋರ್, ಅಕ್ಟೋಬರ್ 22, 2025: ಐಸಿಸಿ ಮಹಿಳಾ ವಿಶ್ವಕಪ್ 23ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಭರ್ಜರಿ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಆಶ್ಲೀ ಗಾರ್ಡ್ನರ್ ಅವರ ಅಬ್ಬರದ ಶತಕ ಮತ್ತು ಅನ್ನಾಬೆಲ್ಸ ಸುತರ್‌ಲ್ಯಾಂಡ್‌ ರವರ ಆಲ್ರೌಂಡ್ ಪ್ರದರ್ಶನ ಆಸ್ಟ್ರೇಲಿಯಾ ಗೆಲುವಿಗೆ ಕಾರಣವಾಯಿತು.TRASE Block Heels Sandals For Women, Dusky Stylish & Comfortable Footwear

ಇಂಗ್ಲೆಂಡ್ ಇನ್ನಿಂಗ್ಸ್: ಸಾಮಾನ್ಯ ಮೊತ್ತ-
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾದ ಬಿಗಿ ದಾಳಿಯ ಮುಂದೆ ಇಂಗ್ಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 244 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಅತಿ ಹೆಚ್ಚು 78 ರನ್ (105 ಎಸೆತ) ಗಳಿಸಿದರು. ಆಸ್ಟ್ರೇಲಿಯಾ ಪರ ಮಿಂಚಿದ ಆಲ್‌ರೌಂಡರ್ ಅನ್ನಾಬೆಲ್ Sutherland 3/60 ವಿಕೆಟ್ ಕಬಳಿಸಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಆಶ್ಲೀ ಗಾರ್ಡ್ನರ್ 2ವಿಕೆಟ್ ಪಡೆದರು.ಇದನ್ನು ಓದಿ: ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಪುತ್ರಿ ದುವಾ; ಮೊದಲ ಬಾರಿಯ ಫೋಟೊ ಇಲ್ಲಿದೆ

ಆಸ್ಟ್ರೇಲಿಯಾ ಇನ್ನಿಂಗ್ಸ್: ಗಾರ್ಡ್ನರ್ - ಸುತರ್‌ಲ್ಯಾಂಡ್‌ ಜೊತೆಯಾಟ- 245 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭಿಕ ಆಘಾತ ಎದುರಾಯಿತು. ಪ್ರಮುಖ ಬ್ಯಾಟರ್‌ಗಳು ಬೇಗನೆ ಪೆವಿಲಿಯನ್ ಸೇರಿ, ತಂಡ 16 ಓವರ್‌ಗಳಲ್ಲಿ ಕೇವಲ 68 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಈ ಹಂತದಲ್ಲಿ ಜೊತೆಗೂಡಿದ ಆಶ್ಲೀ ಗಾರ್ಡ್ನರ್ ಮತ್ತು ಅನ್ನಾಬೆಲ್ Sutherland ಇಂಗ್ಲೆಂಡ್‌ಗೆ ತಿರುಗೇಟು ನೀಡಿದರು. ಇವರಿಬ್ಬರು ಮುರಿಯದ 180 ರನ್‌ಗಳ ಅದ್ಭುತ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

- ಆಶ್ಲೀ ಗಾರ್ಡ್ನರ್ ಕೇವಲ 73ಎಸೆತಗಳಲ್ಲಿ ಅಜೇಯ 104 ರನ್ (16 ಬೌಂಡರಿ) ಗಳಿಸಿ ಸಿಡಿಲಬ್ಬರದ ಶತಕ ಬಾರಿಸಿದರು.

- ಅನ್ನಾಬೆಲ್ ಸುತರ್‌ಲ್ಯಾಂಡ್‌ ಕೂಡ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿ ಅಜೇಯ 98 ರನ್ (112 ಎಸೆತ) ಗಳಿಸುವ ಮೂಲಕ ಶತಕ ವಂಚಿತರಾದರು. ಈ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಕೇವಲ 40.3 ಓವರ್‌ಗಳಲ್ಲಿ 4 ವಿಕೆಟ್‌ಗೆ 248 ರನ್ ಗಳಿಸಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರ್:- ಇಂಗ್ಲೆಂಡ್ ಮಹಿಳಾ 244/950 ಓವರ್)

ಆಸ್ಟ್ರೇಲಿಯಾ ಮಹಿಳಾ- 248/4(40.3 ಓವರ್)

ಫಲಿತಾಂಶ: ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯ ಪುರುಷೋತ್ತಮ: ಅನ್ನಾಬೆಲ್  ಸುತರ್‌ಲ್ಯಾಂಡ್‌ (ಆಸ್ಟ್ರೇಲಿಯಾ) ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.