Skip to main content
ವಿಡಿಯೋ
1/3
politics

ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಫಿಕ್ಸ್..! ಸಂಪುಟ ಅಷ್ಟೇ ಅಲ್ಲದೆ ಸಿಎಂ ಬದಲಾಗೋದು ಪಕ್ಕಾನಾ..?

By Gireesh Vasishta
ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಫಿಕ್ಸ್..! ಸಂಪುಟ ಅಷ್ಟೇ ಅಲ್ಲದೆ ಸಿಎಂ ಬದಲಾಗೋದು ಪಕ್ಕಾನಾ..?

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ತನಗೆ ಸಿಗಲಿ ಎಂದು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಅನುಮಾನವೂ ಕೂಡ ಹುಟ್ಟಿಕೊಂಡಿದೆ.

ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಸಿಎಂ ಪವರ್ ಚೇಂಜ್ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಿದೆ. ಆದರೆ ನವಂಬರ್ ಕ್ರಾಂತಿ ವಿಚಾರ ಪ್ರಚಲಿತದಲ್ಲಿದೆ. ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನು ಸಿಎಂ ಸೀಟ್‌ನಿಂದ ಕೆಳಗಿಳಿಸಿ ಶಿವಕುಮಾರ್ ಅವರನ್ನು ಕೂರಿಸಬೇಕು ಎಂದು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.TIMEX Classics Analog Watch for Men with Round Dial & Water Resistant Man's Wrist Watches

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯವೈಚಾರಿಕವಾಗಿ ಪ್ರಗತಿಪರ ತತ್ವ ಸಿದ್ಧಾಂತ ಇರುವ ನಾಯಕರು ಪಕ್ಷಕ್ಕೆ ಬೇಕು ಇದರ ಜೊತೆಗೆ ಸತೀಶ್ ಜಾರಕಿಹೊಳಿಯವರು ಜವಾಬ್ದಾರಿ ನಿಭಾಯಿಸುತ್ತಾರೆ. ಜಾರಕಿಹೊಳಿ ಅವರು ಮಾದರಿಯಾಗಿ ನಮ್ಮನ್ನು ಮುನ್ನಡೆಸುತ್ತಾರೆ” ಎಂದು ಹೇಳಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸಮುದಾಯದ ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಸುಳಿವು ನೀಡಿದಂತೆ ಕಾಣುತ್ತಿದೆ.ಇದನ್ನು ಓದಿ: ಮಹಿಳಾ ವಿಶ್ವಕಪ್ 2025: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ 6 ವಿಕೆಟ್‌ಗಳ ಜಯ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹಲವಾರು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ತನಗೆ ಸಿಗಲಿ ಎಂದು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಅನುಮಾನವೂ ಕೂಡ ಹುಟ್ಟಿಕೊಂಡಿದೆ.

ನವೆಂಬರ್ ಕ್ರಾಂತಿ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಸ್ಥಾನದಲ್ಲಿ ಬದಲಾವಣೆ, ಪ್ರಸ್ತುತ ಸಚಿವ ಸಂಪುಟದಲ್ಲಿ ಬದಲಾವಣೆ ಆಗಬಹುದು, ಅಥವಾ ಹೊಸ ಶಾಸಕರಿಗೆ ಅವಕಾಶ ನೀಡಬಹುದು ಎಂಬ ಚರ್ಚೆಗಳು ತಲೆ ಎತ್ತುತ್ತಿದೆ. ಯತೀಂದ್ರ ಅವರ ಹೇಳಿಕೆಯು ಕಾಂಗ್ರೆಸ್ ಪಕ್ಷದ ಒಳಗೆ ನಾಯಕತ್ವದ ಭವಿಷ್ಯವನ್ನು ಕುರಿತು ನಡೆಯುತ್ತಿರುವ ಚರ್ಚೆಗೆ ಒಂದು ಹೊಸ ಆಯಾಮವನ್ನು ಸೃಷ್ಠಿಸಿದೆ. ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ನೇರ ಪೈಪೋಟಿ ಇದೆಯೇ ಅಥವಾ ಇದು ಪಕ್ಷದ ಒಳಗಿನ ವಿವಿಧ ಗುಂಪುಗಳ ಕುತಂತ್ರವೇ ಎಂಬುದನ್ನ ಕಾದು ನೋಡಬೇಕಿದೆ ಅಷ್ಟೆ.