Skip to main content
ವಿಡಿಯೋ
1/3
general

Bangalore Business Corridor: ಭೂಮಿ ಕಳೆದುಕೊಂಡ ರೈತರಿಗೆ ಮೂರು ಪಟ್ಟು ಪರಿಹಾರ - ರಾಜ್ಯ ಸರ್ಕಾರ ಘೋಷಣೆ

By Shravanthi R
Bangalore Business Corridor: ಭೂಮಿ ಕಳೆದುಕೊಂಡ ರೈತರಿಗೆ ಮೂರು ಪಟ್ಟು ಪರಿಹಾರ - ರಾಜ್ಯ ಸರ್ಕಾರ ಘೋಷಣೆ

ರಾಜ್ಯ ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ 117 ಕಿ.ಮೀ ಉದ್ದದ ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ ನಿರ್ಮಿಸಲು ತೀರ್ಮಾನಿಸಿದೆ. ಇದರಿಂದ ಭೂಮಿ ಕಳೆದುಕೊಂಡ ರೈತರಿಗೆ ಮೂರು ಪಟ್ಟು ಹೆಚ್ಚು ಪರಿಹಾರ ನೀಡುವುದಾಗಿ ತಿಳಿಸಿದೆ.

ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಈ ಹಿಂದೆ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿದ್ದ ʻಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ʼ ನಿಂದ ರೈತರಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದ್ದು, ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲಾಗುವುದಿಲ್ಲವೆಂದು ನಿರ್ಧರಿಸಿತ್ತು.ಈ ಬಗ್ಗೆ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್‌ ಅವರು ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ. 

ಹಿಂದಿನ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿದ್ದ ಪೆರಿಫೆರಲ್‌ ರಿಂಗ್‌ ರಸ್ತೆಯನ್ನು ʻಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌ʼ ಎಂದು ಮರುನಾಮಕರಣಗೊಳಿಸಿ 117 ಕಿ.ಮೀ ಉದ್ದದ ರಸ್ತೆಗೆ ಅನುಮೋದನೆ ನೀಡಿದೆ. ಈ ಹಿಂದೆ, ಯೋಜನೆಗೆ ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್‌ ಮಾಡಬಾರದು ಎಂದು ಸರ್ಕಾರ ಇದರ ಖಾತ್ರಿಗಾಗಿ ಹುಡ್ಕೋ ಮೂಲಕ 27 ಸಾವಿರ ಕೋಟಿ ಸಾಲ ಪಡೆಯಲಾಗಿದೆ. ಎರಡು ವರ್ಷಗಳಲ್ಲಿ ಯೋಜನೆ ಜಾರಿ ಮಾಡಿ ಪೂರ್ಣಗೊಳಿಸುವುದು ಹಾಗೂ 10 ಸಾವಿರ ಕೋಟಿಯನ್ನು ಉಳಿತಾಯ ಮಾಡಲಿದೆ ಎಂದು ಅಂದಾಜಿಸಾಲಾಗಿದೆ ಎನ್ನಲಾಗಿದೆ. 

ಅಭಿವೃದ್ದಿಗೆ ಹೊಸ ಅಧ್ಯಾಯ ಬರೆಯಲು, ಈ ರಸ್ತೆಯು ದಟ್ಟಣೆಯನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ನೆರವಾಗಲಿದ್ದು, ಈ ಹಿನ್ನಲೆಯಲ್ಲಿ ರೈತರಿಗೆ ಪರಿಹಾರ ನೀಡಲು ಸರ್ಕಾರವು ಮಹತ್ವದ ತೀರ್ಮಾನ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದರು.  Zoop by Titan Basic Analog Watch for Kids-NS26019PP12W/NU26019PP12W

ಬ್ಯುಸಿನೆಸ್‌ ಕಾರಿಡಾರ್‌ಗಾಗಿ ಸರ್ಕಾರವು ನಾಲ್ಕು ರೀತಿಯಲ್ಲಿ ಪರಿಹಾರ ನೀಡಲಿರುವ ಬಗ್ಗೆ ಈ ಹಿಂದೆ ತಿಳಿಸಲಾಗಿತ್ತು. ಪರಿಹಾರಗಳೇನೆಂದರೆ, ನಗದು ಪರಿಹಾರ, ಟಿಡಿಆರ್, ಎಫ್‌ಎಆರ್, ಶೇ 35ರಷ್ಟು ವಾಣಿಜ್ಯ ಅಥವಾ ಶೇ 40ರಷ್ಟು ವಸತಿ ಪ್ರದೇಶದಲ್ಲಿ ಬದಲಿ ಭೂಮಿ ನೀಡಲಾಗುವುದು ಎನ್ನಲಾಗಿದೆ. ಪರಿಹಾರ ನಿರಾಕರಿಸಿದರೆ ನ್ಯಾಯಾಲಯದಲ್ಲಿ ಠೇವಣಿ ಕಟ್ಟಿ ಯೋಜನೆ ಮುಂದುವರಿಕೆ ಎಂದು ತಿಳಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ನವೆಂಬರ್‌ ಕ್ರಾಂತಿ ಫಿಕ್ಸ್..! ಸಂಪುಟ ಅಷ್ಟೇ ಅಲ್ಲದೆ ಸಿಎಂ ಬದಲಾಗೋದು ಪಕ್ಕಾನಾ..?