ಬಿಗ್‌ಬಾಸ್ ಮನೆಯಲ್ಲಿ ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ಆರಂಭಗೊಂಡಿದ್ದು, ಮೊದಲ ಕ್ಯಾಪ್ಟನ್ ಆಯ್ಕೆಗಾಗಿ ಬುಧವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಹೊಸ ಸವಾಲು ನೀಡಿದೆ.
ಮನೆಯ ಸದಸ್ಯರನ್ನು ಮೂರು ತಂಡಗಳಾಗಿ ವಿಂಗಡಿಸಲಾಗಿದ್ದು, ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅವಕಾಶ ವಂಚಿತರಾದ ಕಾಕ್ರೋಚ್ ಸುಧಿ ಮತ್ತು ಅಶ್ವಿನಿ ಉಸ್ತುವಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿಗ್‌ಬಾಸ್ ನೀಡಿದ "ನಕಲಿ ನಾಣ್ಯಗಳ ಆಟ"ದಲ್ಲಿ, ಸ್ಪರ್ಧಿಗಳು ಸಾಧ್ಯವಾದಷ್ಟು ಹೆಚ್ಚು ನಾಣ್ಯಗಳನ್ನು ಸಂಗ್ರಹಿಸುವುದು ನಿಯಮವಾಗಿದೆ. ಪರಸ್ಪರ ಸ್ಪರ್ಧಿಗಳಿಂದ ನಾಣ್ಯಗಳನ್ನು ಕಿತ್ತುಕೊಳ್ಳಲು ಸಹ ಅನುಮತಿ ನೀಡಲಾಗಿತ್ತು.
ಇದರ ಪರಿಣಾಮವಾಗಿ, ರಘು ಮತ್ತು ಗಿಲ್ಲಿಯಂತಹ ಬಲಾಢ್ಯ ಸ್ಪರ್ಧಿಗಳು ನಾಣ್ಯಗಳನ್ನು ಬಾಚಿಕೊಳ್ಳಲು ಇತರರನ್ನು ತಳ್ಳಿದರು. ಆದರೂ, ಗಿಲ್ಲಿ, ಧ್ರುವಂತ್, ಮತ್ತು ಅವಿನಾಶ್ ಸೇರಿದಂತೆ ಹಲವರು ಸಾಕಷ್ಟು ನಾಣ್ಯಗಳನ್ನು ಸಂಗ್ರಹಿಸಿದರು.Titan Workwear Quartz Analog Hunter Green Dial Olive Green Leather Strap Watch for Men - NT1802NL02
ಆದರೆ, ಗಿಲ್ಲಿ ತಮಾಷೆ ಮಾಡುತ್ತಾ ತಮ್ಮ ಬಳಿಯಿದ್ದ ನಾಣ್ಯಗಳನ್ನು ರಘುಗೆ ತೋರಿಸಿದರು. ನಂತರ ರಘು ತಂಡದವರು ಗಿಲ್ಲಿಯನ್ನು ಬಲವಂತವಾಗಿ ಹಿಡಿದು ಅವರಲ್ಲಿದ್ದ ಎಲ್ಲಾ ನಾಣ್ಯಗಳನ್ನು ದೋಚಿದರು.
ಇದರಿಂದಾಗಿ ನಾಣ್ಯಗಳ ಸಂಗ್ರಹದ ಆಟವು ಪರಸ್ಪರ ಕಿತ್ತಾಟ ಮತ್ತು ದೋಚಿಕೊಳ್ಳುವ ಆಟವಾಗಿ ಮಾರ್ಪಟ್ಟಿತು. ಸ್ಪರ್ಧಿಗಳು ಗುಂಪುಗುಂಪಾಗಿ ಇತರ ಗುಂಪುಗಳ ಮೇಲೆ ದಾಳಿ ಮಾಡಿದರು.
ರಘು ತಮ್ಮ ದೈತ್ಯ ದೇಹವನ್ನು ಬಳಸಿಕೊಂಡು ಹಲವರ ನಾಣ್ಯಗಳನ್ನು ದೋಚಿದರು. ಈ ಸಂದರ್ಭದಲ್ಲಿ ರಿಷಾ, ರಘು ವಿರುದ್ಧ ಕೂಗಾಡಿದರು.ಕಿರುತೆರೆಗೆ ಕಾಲಿಟ್ಟ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್...ಯಾವ ಧಾರಾವಾಹಿಯಲ್ಲಿ ನಟಿಸ್ತಿದ್ದಾರೆ ಗೊತ್ತಾ?
ಈ ದೋಚುವಿಕೆಯಿಂದ ಪಾರಾಗಲು ಸ್ಪರ್ಧಿಗಳು ನಾಣ್ಯಗಳನ್ನು ಗುಟ್ಟಾಗಿ ಅಡಗಿಸಿಡಲು ಪ್ರಯತ್ನಿಸಿದರು. ಹಲವರು ನಾಣ್ಯಗಳನ್ನು ವಿವಿಧ ಸ್ಥಳಗಳಲ್ಲಿ ಬಚ್ಚಿಟ್ಟರು. ಆದರೆ, ನಂತರ ಸ್ಪರ್ಧಿಗಳು ಕಳ್ಳರಾಗಿ ಬದಲಾದರು.
ರಶಿಕಾ ಇಟ್ಟಿದ್ದ ನಾಣ್ಯಗಳನ್ನು ಚಂದ್ರಪ್ರಭ ಕದ್ದರು. ಧನುಷ್ ಮಲಗಿದ್ದಾಗ ಅವರ ಜೇಬಿನಲ್ಲಿದ್ದ ನಾಣ್ಯಗಳನ್ನು ರಕ್ಷಿತಾ ಕದ್ದು ತಮ್ಮ ಖಾತೆಗೆ ಸೇರಿಸಿಕೊಂಡರು.
ಕೆಲವು ಸ್ಪರ್ಧಿಗಳು ತಮ್ಮ ನಾಣ್ಯಗಳನ್ನು ಕಾಪಾಡಿಕೊಳ್ಳುವ ಭರದಲ್ಲಿ ಊಟವನ್ನೂ ತ್ಯಾಗ ಮಾಡಿದರು. ನಾಣ್ಯಗಳ ಆಟ ಇನ್ನೂ ಮುಂದುವರೆದಿದ್ದು, ಯಾರು ಹೆಚ್ಚು ನಾಣ್ಯಗಳನ್ನು ಸಂಪಾದಿಸಿದ್ದಾರೆ ಎಂಬುದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.