ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ 'ಡ್ರ್ಯಾಗನ್' ಕುರಿತು ಹಲವು ಗೊಂದಲಗಳು ಕೇಳಿಬರುತ್ತಿವೆ. ಜೂನಿಯರ್ ಎನ್‌ಟಿಆರ್ ನಟನೆಯ ಈ ಸಿನಿಮಾದ ಶೂಟಿಂಗ್ ನಿಂತುಹೋಗಿದೆಯೇ? ಜೂನಿಯರ್ ಎನ್‌ಟಿಆರ್ ಶೂಟಿಂಗ್‌ನಲ್ಲಿ ಭಾಗಿಯಾಗದಿರಲು ಕಾರಣವೇನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಅಲೆ ಸೃಷ್ಟಿಸಿದ ಪ್ರಶಾಂತ್ ನೀಲ್, ಮೊದಲ ಚಿತ್ರ 'ಉಗ್ರಂ' ಮೂಲಕ ತಮ್ಮ ನಿರ್ದೇಶನ ಶಕ್ತಿಯನ್ನು ಪ್ರದರ್ಶಿಸಿದ್ದರು. ನಂತರ ಸಾಕಷ್ಟು ಸಮಯ ತೆಗೆದುಕೊಂಡು 'ಕೆಜಿಎಫ್' ಸರಣಿಯ ಮೂಲಕ ದೊಡ್ಡ ಯಶಸ್ಸು ಕಂಡರು.
‘ರಾಕಿಂಗ್ ಸ್ಟಾರ್’ ಯಶ್ ನಟನೆಯ 'ಕೆಜಿಎಫ್' ದೇಶಾದ್ಯಂತ ಮಾತ್ರವಲ್ಲದೆ ಜಾಗತಿಕವಾಗಿಯೂ ಗಮನ ಸೆಳೆಯಿತು. 'ಕೆಜಿಎಫ್ 2' ಮೂಲಕ ನಿರ್ದೇಶಕರು ಎರಡು ವರ್ಷಗಳ ಕಾಲ ಯಾರಿಗೂ ಸಿಗದೆ, ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಒಂದು ತಿರುವು ನೀಡಿದ್ದರು.
ಹೊಂಬಾಳೆ ಫಿಲ್ಮ್ಸ್ ಜೊತೆಗಿನ 'ಕೆಜಿಎಫ್' ಮೊದಲ ಭಾಗ 300 ಕೋಟಿ ರೂ. ಗಳಿಸಿದರೆ, 'ಕೆಜಿಎಫ್ 2' ಬರೋಬ್ಬರಿ 1300 ಕೋಟಿ ರೂ. ಗಳಿಸಿ ಕನ್ನಡ ಚಿತ್ರರಂಗದ ಸಾಮರ್ಥ್ಯವನ್ನು ಪರಭಾಷೆಗಳಿಗೂ ಪರಿಚಯಿಸಿತು. ಪ್ರತಿಯೊಂದು ಪಾತ್ರವನ್ನೂ ನೆನಪಿನಲ್ಲಿಟ್ಟುಕೊಳ್ಳುವಂತಹ ಚಿತ್ರಗಳನ್ನು ನೀಡಿದ ಪ್ರಶಾಂತ್ ನೀಲ್, 'ಕೆಜಿಎಫ್' ಸರಣಿಯ ನಂತರ ಕನ್ನಡ ಚಿತ್ರಗಳನ್ನು ಹೊರತುಪಡಿಸಿ ತೆಲುಗು ಪ್ಯಾನ್ ಇಂಡಿಯಾ ಚಿತ್ರಗಳತ್ತ ಗಮನ ಹರಿಸಿದ್ದಾರೆ.Titan Workwear Quartz Analog Hunter Green Dial Olive Green Leather Strap Watch for Men - NT1802NL02
'ಕೆಜಿಎಫ್ 2' ನಂತರ ಪ್ರಭಾಸ್ ನಟನೆಯ 'ಸಲಾರ್' ಚಿತ್ರಕ್ಕೆ ನೀಲ್ ಆಕ್ಷನ್ ಕಟ್ ಹೇಳಿದರು. ಈ ಚಿತ್ರದಲ್ಲಿ ಸಂಭಾಷಣೆಗಳಿಗಿಂತ ಮೌನ ಮತ್ತು ಕಣ್ಣುಗಳ ಮೂಲಕವೇ ಮಾಸ್ ಅಭಿವ್ಯಕ್ತಿ ನೀಡಬಹುದು ಎಂಬುದನ್ನು ತೋರಿಸಿಕೊಟ್ಟರು. 'ಸಲಾರ್' ಗಲ್ಲಾಪೆಟ್ಟಿಗೆಯಲ್ಲಿ 600 ಕೋಟಿ ರೂ. ಗಳಿಸಿತು. ಟಾಲಿವುಡ್‌ಗೆ ಇದು ಹೊಸ ಕಥೆಯಾಗಿದ್ದರೆ, ಕನ್ನಡಿಗರಿಗೆ 'ಉಗ್ರಂ' ಚಿತ್ರದ ತದ್ರೂಪು ಎನಿಸಿದ್ದು ಸುಳ್ಳಲ್ಲ.
'ಸಲಾರ್' ನಂತರ 'ಸಲಾರ್ 2' ಅಥವಾ 'ಕೆಜಿಎಫ್ 3' ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ನೀಲ್ ಜೂನಿಯರ್ ಎನ್‌ಟಿಆರ್ ನಟನೆಯ 'ಡ್ರ್ಯಾಗನ್' ಚಿತ್ರಕ್ಕೆ ಮುಂದಾಗಿದ್ದಾರೆ. ಕುಂದಾಪುರದಲ್ಲಿ ಈ ಚಿತ್ರಕ್ಕಾಗಿ ವಿಶೇಷ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಲಾಗಿತ್ತು.
ಆದರೆ, ಈಗ ಆ ಶಾಟ್‌ಗಳು ಜೂನಿಯರ್ ಎನ್‌ಟಿಆರ್‌ಗೆ ಇಷ್ಟವಾಗಿಲ್ಲ, ನೀಲ್ ಅವರ ಕೆಲಸ ತೃಪ್ತಿ ನೀಡಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕಾರಣದಿಂದಲೇ ಕಥೆ ಬದಲಾಯಿಸಲು ಜೂನಿಯರ್ ಎನ್‌ಟಿಆರ್ ಹೇಳಿದ್ದಾರೆ ಎಂಬ ಚರ್ಚೆಯ ನಡುವೆಯೇ ಚಿತ್ರ ಮತ್ತಷ್ಟು ವಿಳಂಬವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಬಿಗ್‌ಬಾಸ್‌ನಲ್ಲಿ ಸುರಿಯಿತಿ ನಾಣ್ಯಗಳ ಮಳೆ...ಕಿತ್ತಾಟ-ದೋಚಾಟದ ನಡುವೆ ಕ್ಯಾಪ್ಟನ್ಸಿ ಓಟ ಗೆಲ್ಲೋದ್ಯಾರು?
ಆದರೆ, ಅಸಲಿ ಕಾರಣ ಬೇರೆಯೇ ಇದೆ. 'ವಾರ್ 2' ಚಿತ್ರದ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಜೂನಿಯರ್ ಎನ್‌ಟಿಆರ್‌ಗೆ ಬಲ ಭುಜಕ್ಕೆ ಗಾಯವಾಗಿದೆ. 'ಕಾಂತಾರ' ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿಯೂ ಅವರು ಕೈ ಹಿಡಿದುಕೊಂಡು ನೋವು ಅನುಭವಿಸುತ್ತಿದ್ದಂತೆ ಕಾಣುತ್ತಿದ್ದರು. ಕೆಲವು ತಿಂಗಳುಗಳ ವಿಶ್ರಾಂತಿ ಅಗತ್ಯವಿರುವ ಕಾರಣ, ಜೂನಿಯರ್ ಎನ್‌ಟಿಆರ್ ಬದಲಿಗೆ ಇತರ ಪಾತ್ರಗಳ ಶೂಟಿಂಗ್‌ನಲ್ಲಿ ನೀಲ್ ನಿರತರಾಗಿದ್ದಾರೆ.
ಆರ್‌ಆರ್‌ಆರ್' ಚಿತ್ರದ ಮೂಲಕ ಆಸ್ಕರ್ ವೇದಿಕೆಗೆ ಹೋಗಿ ಗ್ಲೋಬಲ್ ಸ್ಟಾರ್ ಆದ ನಂತರ, ಜೂನಿಯರ್ ಎನ್‌ಟಿಆರ್ ಕಥೆಗಳ ಆಯ್ಕೆಯಲ್ಲಿ ಹೆಚ್ಚು ಚೂಸಿಯಾಗಿದ್ದು, ಕಥೆಗಳ ವಿಷಯದಲ್ಲಿ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.