Skip to main content
ವಿಡಿಯೋ
1/3
technology

Zupee Studio ಒಂದು ತಿಂಗಳಲ್ಲಿ 10 million ಡೌನ್‌ಲೋಡ್‌ ದಾಖಲೆ!

By Shravanthi R
Zupee Studio ಒಂದು ತಿಂಗಳಲ್ಲಿ 10 million ಡೌನ್‌ಲೋಡ್‌ ದಾಖಲೆ!

Zupee Studio ಕೇವಲ ಒಂದು ತಿಂಗಳಲ್ಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 10 ಮಿಲಿಯನ್‌ ಡೌನ್‌ಲೋಡ್‌ ದಾಖಲಿಸಿದೆ. ಮೂಲತಃ ಆನ್‌ಲೈನ್‌ ಗೇಮಿಂಗ್‌ ಪ್ಲ್ಯಾಟ್‌ಫಾರ್ಮ್‌ ಆಗಿದ್ದ Zupee, ಈಗ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದೆ. ಇದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕಿರುರೂಪದ ಡಿಜಿಟಲ್‌ ಮನರಂಜನೆ ಕ್ಷೇತ್ರದ ಅಪ್ಲಿಕೇಶನ್‌ ಎನಿಸಿದೆ.

ಮನರಂಜನಾ ಕ್ಷೇತ್ರಕ್ಕೆ ದಾಪುಗಾಲಿಟ್ಟಿರುವ ಭಾರತದ ಶಾರ್ಟ್‌ ಫಾರ್ಮ್ಯಾಟ್‌ ಕಂಟೆಂಟ್‌ ಫ್ಲ್ಯಾಟ್‌ಫಾರ್ಮ್‌ Zupee Studio. ಈಗಾಗಲೇ, ಪರಿಚಿತವಾದ ಒಂದು ತಿಂಗಳಲ್ಲೇ, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 10 million ಡೌನ್‌ಲೋಡ್‌ ದಾಖಲೆ ಪಡೆದಿದೆ ಎನ್ನಲಾಗಿದೆ.

ಆನ್‌ಲೈನ್‌ ಗೇಮಿಂಗ್‌ ಫ್ಲ್ಯಾಟ್‌ಫಾರ್ಮ್‌ ಮೂಲವಾಗಿಯೂ, ಈ ಅಪ್ಲಿಕೇಶನ್‌ನಲ್ಲಿ ಆಕ್ಷನ್‌, ಥ್ರಿಲ್ಲರ್‌, ಪ್ರಣಯ ಹಾಗೂ ಹಾಸ್ಯ ಸೇರಿದಂತೆ ಹೆಚ್ಚಿನ ವಿಷಯಗಳ 1 ರಿಂದ 3 ನಿಮಿಷಗಳ ಉತ್ತಮ ಗುಣಮಟ್ಟದ ಮೈಕ್ರೋಡ್ರಾಮಾಗಳ ಮೂಲಕ ಸಂತೋಷವನ್ನು ನೀಡುವ ಕಂಟೆಂಟ್‌ ಇರುವ Diverse Library ಹೊಂದಿದೆ ಎನ್ನಲಾಗಿದೆ. 

ಕಳೆದ ತಿಂಗಳು, ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025 (Promotion and Regulation of Online Gaming Bill, 2025) ಇದರಡಿಯಲ್ಲಿ ಇ-ಸ್ಪೋರ್ಟ್ಸ್ ಮತ್ತು ಇತರ ಆನ್‌ಲೈನ್ ಆಟಗಳನ್ನು ಪ್ರಚಾರ ಮಾಡುವಾಗ ಎಲ್ಲಾ ರೀತಿಯ ಆನ್‌ಲೈನ್ ಹಣದ ಆಟಗಳ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದಾದ ಬಳಿಕ Zupee Studio ಮನರಂಜನಾ ಕ್ಷೇತ್ರಕ್ಕೆ ಲಗ್ಗೆಯಿಟ್ಟಿದೆ ಎನ್ನಲಾಗಿದೆ. IIK COLLECTION Analogue Women's Watch (Dial Colored Strap)

Zupee Studio ಮತ್ತು JioCinema ಪರಸ್ಪರ ಸಂಬಂಧಿಸಿದ್ದು, ಇದರ ವಿತರಣೆ ಮತ್ತು ಬಳಕೆದಾರರ ತೊಡಗಿಸಿಕೊಳ್ಳುವಿಕೆಯನ್ನು ಗುರಿಯಾಗಿಟ್ಟುಕೊಂಡು ಅವರ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಹೊಂದಿವೆ ಎನ್ನಲಾಗಿದೆ. ಈ ಕುರಿತಾಗಿ ಕಂಪನಿಯ ಮುಖ್ಯ ವಕ್ತಾರರಾಗಿರುವ ಗೋವಿಂದ್‌ ಮಿತ್ತಲ್‌ ಅವರು ಮಾತನಾಡಿ, ವೇಗವಾಗಿ 10 million ಡೌನ್‌ಲೋಡ್‌ ದಾಟುತ್ತಿರುವುದು ಭಾರತೀಯ ಮನರಂಜನೆ ಬೆಳವಣಿಗೆಯ ಮೈಲಿಗಲ್ಲಾಗಿದೆ ಹಾಗೂ ಡಿಜಿಟಲ್‌ ವಿಷಯ ಬಳಕೆಯನ್ನು ಮೌಲ್ಯೀಕರಿಸುವ ದೃಷ್ಟಿಕೋನವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ದೀಪಾವಳಿ ತಂದ ಶುಭಸೂಚನೆ - ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಭಾರೀ ಇಳಿಕೆ!