Skip to main content
ವಿಡಿಯೋ
1/3
technology

Arattai ನಂತರ Zoho Pay ಯಿಂದ ಭಾರತದ ಫಿನ್‌ಟೆಕ್‌ಗೆ ಝೋಹೋದ ಕೊಡುಗೆ!

By Shravanthi R
Arattai ನಂತರ Zoho Pay ಯಿಂದ ಭಾರತದ ಫಿನ್‌ಟೆಕ್‌ಗೆ ಝೋಹೋದ ಕೊಡುಗೆ!

Zoho Pay ಯುಪಿಐ ಅಪ್ಲಿಕೇಶನ್ ಮೂಲಕ ಭಾರತದ ಫಿನ್‌ಟೆಕ್ ಕ್ಷೇತ್ರಕ್ಕೆ ಹೊಸ ಕೊಡುಗೆ ನೀಡುತ್ತಿದೆ. ಇದು ಭದ್ರತೆಯೊಂದಿಗೆ ಹಣ ಕಳುಹಿಸಲು, ಸ್ವೀಕರಿಸಲು ಮತ್ತು ಪಾವತಿಗಳನ್ನು ನಿರ್ವಹಿಸಲು ಸೌಲಭ್ಯ ಒದಗಿಸುತ್ತದೆ. ಪ್ರಸ್ತುತ ಪರೀಕ್ಷಾ ಹಂತದಲ್ಲಿರುವ Zoho Pay, ಶೀಘ್ರದಲ್ಲೇ ಲಾಂಚ್ ಆಗಲು ನಿರೀಕ್ಷೆಯಾಗಿದೆ ಮತ್ತು ಸಣ್ಣ, ಮಧ್ಯಮ ವ್ಯವಹಾರಗಳ ಪಾವತಿ ಪರಿಸರವನ್ನು ಗುರಿಯಾಗಿಸಿಕೊಂಡಿದೆ.

ಸ್ವದೇಶಿ ತಂತ್ರಜ್ಞಾನಕ್ಕೆ ಝೋಹೋ ಕಂಪನಿ ತನ್ನ ಅರಟ್ಟೈ ನಂತರ, ಫೋನ್‌ಪೇ, ಪೇಟಿಎಂ, ಗೂಗಲ್ ಪೇ ಸೆಡ್ಡು ಹೊಡೆಯಲು Zoho Pay ಯನ್ನು ಲಾಂಚ್‌ ಮಾಡಲು ಸಜ್ಜಾಗಿದೆ.  ಫಿನ್‌ಟೆಕ್‌ಗೆ ಕೊಡುಗೆಯಾಗಿ, ಜಾಗತಿಕವಾಗಿ ಸ್ಪರ್ಧಿಸಲು ಜೊಹೊ ಪೇ ಯುಪಿಐ ಅಪ್ಲಿಕೇಶನ್ ಅನ್ನು ಪರಿಚಯಿಸಲಿದೆ ಎನ್ನಲಾಗಿದೆ. ಇದು ಪ್ರಸ್ತುತ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ತಿಳಿಸಿದೆ. 

ಜೊಹೊ ಬಿಲ್ಲಿಂಗ್ ಮತ್ತು ಪಾಯಿಂಟ್‌ ಆಫ್‌ ಸರ್ವಿಸ್‌ (ಪಿಒಎಸ್) ಬಳಸಿಕೊಂಡು ಗ್ರಾಹಕ ಪಾವತಿಗಳು ಮತ್ತು ಸಣ್ಣ ಮತ್ತು ಮಧ್ಯಮ ವ್ಯವಹಾರಗಳ ಪರಿಸರ ವ್ಯವಸ್ಥೆಯನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಬಳಕೆದಾರರಿಗೆ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು, ಸುರಕ್ಷಿತ ಪಾವತಿಗಳನ್ನು ಮಾಡಲು ಪಾವತಿ-ಸಂಗ್ರಹಕಾರಕ ಪರವಾನಗಿ ಮತ್ತು ಹತ್ತು ಲಕ್ಷ ಅರಟ್ಟೈ ಸ್ಥಾಪನೆಗಳನ್ನು ಹೊಂದಿದೆ ಎಂದು ಹೇಳಲಾಗಿದೆ. Zoop Friends from Nature Quartz Analog Pink Dial Pink Plastic Strap Watch for Kids - NT16039PP01

ಕ್ರಮೇಣ ಬಿಡುಗಡೆ ಯೋಜನೆಯನ್ನು ಪರಿಚಯಿಸುವ ಗುರಿ ಹೊಂದಿದ್ದು; ಡಿಜಿಟಲ್‌ ಪೇ ಮಾರ್ಕೆಟ್‌ನ ಇತರೆ ದೈತ್ಯ ಯುಪಿಐ ವ್ಯಾಲೆಟ್‌ಗಳು ಮತ್ತು ಅಪ್ಲಿಕೇಶನ್‌ಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಜೊಹೊ ಪೇ, ಸ್ವತಂತ್ರ ಅಪ್ಲಿಕೇಶನ್ ಆಗಿ ಲಭ್ಯವಿರುತ್ತದೆ ಮತ್ತು ಜೊಹೊದ ಸ್ವದೇಶಿ ಸಂದೇಶ ವೇದಿಕೆಯಾದ ಅರಟ್ಟೈಗೆ ನೇರವಾಗಿ ಎಂಬೆಡ್ ಆಗುತ್ತದೆ ಎನ್ನಲಾಗಿದೆ. ಇದನ್ನೂ ಓದಿ: Zupee Studio ಒಂದು ತಿಂಗಳಲ್ಲಿ 10 million ಡೌನ್‌ಲೋಡ್‌ ದಾಖಲೆ!