Skip to main content
ವಿಡಿಯೋ
1/3
weather

ಬೆಂಗಳೂರಲ್ಲಿ ತಂಪೆರೆದ ವಾತಾವರಣ: ಹೆಚ್ಚು ಮಳೆಯಾಗುವುದಾಗಿ ಘೋಷಿಸಿದ ಹವಾಮಾನ ಇಲಾಖೆ!

By Shravanthi R
 ಬೆಂಗಳೂರಲ್ಲಿ ತಂಪೆರೆದ ವಾತಾವರಣ: ಹೆಚ್ಚು ಮಳೆಯಾಗುವುದಾಗಿ ಘೋಷಿಸಿದ ಹವಾಮಾನ ಇಲಾಖೆ!

ಇತ್ತೀಚೆಗೆ, ನಗರ ಸೇರಿದಂತೆ ರಾಜ್ಯದಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದ್ದು, ಹಲವೆಡೆ ಭಾರಿ ಮಳೆಯ ವರದಿಯಾಗಿದೆ. ಇನ್ನೂ ಮುಂದುವರೆದು ಹೆಚ್ಚಿನ ಮಳೆಯಾಗುವ ಮೂನ್ಸೂಚನೆಯನ್ನು ಹವಾಮಾನ ಇಲಾಖೆಯು ತಿಳಿಸಿದೆ ಎನ್ನಲಾಗಿದೆ.

ಇಂದು ಬೆಂಗಳೂರಿನ ನಿವಾಸಿಗಳಿಗೆ ಮಳೆಯು ಚಳಿ ಹಾಗೂ ತಂಪಾದ ವಾತಾವರಣದ ಮೇಲ್ಹೊದಿಗೆಯನ್ನು ನೀಡಿದೆ. ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಮಳೆಯ ಸಿಂಚನವಾಗುತ್ತಿರುವ ಜೊತೆಗೆ ಮೋಡ ಕವಿದ ವಾತಾವರಣವು ಮುಂದುವರೆದಿದೆ.

ಮಳೆ ಮುಂದುವರಿಕೆಯಿಂದಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಸ್ಥಗಿತ ಹಾಗೂ ಸಂಚಾರ ದಟ್ಟಣೆಯು ಉಂಟಾಗಲಿದೆ ಎಂದು ತಿಳಿಸಲಾಗಿದೆ. ಈ ಸಲುವಾಗಿ IMD ಹೆಚ್ಚಿನ ಸ್ಥಳಗಳಲ್ಲಿ ಹಗುರ ಹಾಗೂ ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ ನೀಡಿದೆ. 

ನಗರದಲ್ಲಿ ಕಳೆದ ಕೆಲದಿನಗಳಿಂದ ತುಂತುರು ಮಳೆ ಸೇರಿದಂತೆ ಭಾರಿ ಮಳೆಯಗುತ್ತಲಿದೆ. ಈ ನಿಟ್ಟಿನಲ್ಲಿ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿರುವಂತೆ ಇಂದಿನಿಂದ ಅಕ್ಟೋಬರ್‌ 27ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇರಿದಂತೆ ಬೆಂಗಳೂರಿನಲ್ಲಿ ತೀವ್ರ ಮಳೆಯಾಗಲಿದೆ ಎಂದು ತಿಳಿಸಿದೆ. ಈ ಕಾರಣ, ದಸರಾ,ದೀಪಾವಳಿ ನಿಮಿತ್ತ ನೀಡಲಾಗಿದ್ದ ರಜೆಯ ಜೊತೆಗೆ, ಮಳೆಯ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.  Fastrack Stunners Analog Silver Dial Pink Leather Strap Watch for Girls - NS6152SL08

ರಾಜ್ಯದಲ್ಲಿ ಮಳೆ ವರದಿ -

ಬೆಂಗಳೂರು ಗ್ರಾಮೀಣ, ನಗರ ಭಾಗದ ಜನರಿಗೆ ಮಳೆಯು ತಂಪೆರೆದ ವಾತಾವರದೊಟ್ಟಿಗೆ ರಸ್ತೆ ಸಂಚಾರ ಸಮಸ್ಯೆಗೂ ತಲೆದೂರಿದೆ. ಇದರೊಟ್ಟಿಗೆ, ರಾಜ್ಯದ ತುಮಕೂರು, ಮೈಸೂರು, ಹಾಸನ, ರಾಮನಗರ, ಕೊಲಾರ, ಹಾವೇರಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಗಳಲ್ಲೂ ಮಳೆಯ ಸಾಧ್ಯತೆ ಇದೆ. ಕರಾವಳಿ ಪ್ರದೇಶಗಳಲ್ಲಿನ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ (ಯೆಲೋ ಅಲರ್ಟ್) ಹೊರಡಿಸಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: Arattai ನಂತರ Zoho Pay ಯಿಂದ ಭಾರತದ ಫಿನ್‌ಟೆಕ್‌ಗೆ ಝೋಹೋದ ಕೊಡುಗೆ!