ಕಳೆದ ಎರಡು ವರ್ಷಗಳಲ್ಲಿ, ಮೊದಲಬಾರಿಗೆ 26,000 ಗಡಿದಾಟುವ ಮೂಲಕ Nifty50 ದಾಖಲೆಯನ್ನು ಬರೆದಿದೆ ಎನ್ನಲಾಗಿದೆ. ಜೊತೆಗೆ, ಬಿಎಸ್‌ಇ ಸೆನ್ಸೆಕ್ಸ್ ಕೂಡ 800 ಅಂಕ ಏರಿಕೆ ಕಂಡಿದೆ. ಭಾರತ ಮತ್ತು ಅಮೆರಿಕಾದ ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಕ್ಕೆ ಅಣಿಯಾಗುತ್ತಿರುವಂತೆಯೇ ಈ ಚೇತೋಹಾರಿ ವಹಿವಾಟಿನ ಬೆಳವಣಿಗೆಯಾಗಿದೆ ಎನ್ನಲಾಗಿದೆ. ಆರ್ಥಿಕ ತಜ್ಞರು ಅಂದಾಜಿಸುವ ಪ್ರಕಾರ, ಅಮೆರಿಕ-ಭಾರತ ವ್ಯಾಪಾರ ಒಪ್ಪಂದದ ನಿರೀಕ್ಷೆಗಳು ಈ ಹಣಕಾಸು ವಿನಿಮಯ ಸಂವೇದಿಗೆ ಕಾರಣವಾಗುವುದೆಂದು ತಿಳಿಸಲಾಗಿದೆ.
ಬೆಳಿಗ್ಗೆ ಸುಮಾರು 10.15 ರ ಸುಮಾರಿನಲ್ಲಿ ವಹಿವಾಟು ಆರಂಭವಾಗುತ್ತಲೇ, ನಿಫ್ಟಿ 127.95 ಅಂಕ ಏರಿಕೆ ಕಂಡಿತು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ನಿಫ್ಟಿ 26,057.20 ಅಂಕಗಳಿಗೆ ಏರಿಕೆಯಾಗಿತ್ತು. ಈ ದಾಖಲೆ ಹಿಂದಿಕ್ಕಿ ಇದೀಗ ನೂತನ ಗರಿಷ್ಠ ಮಟ್ಟ ತಲುಪಿದೆ. ಬಿಎಸ್‌ಇ ಸೆನ್ಸೆಕ್ಸ್ ಕೂಡ 800 ಅಂಕಗಳಷ್ಟು ಜಿಗಿದು 85,223.85ಕ್ಕೆ ತಲುಪಿ ಸಾರ್ವಕಾಲಿಕ ದಾಖಲೆಯ ಮಟ್ಟ ನಿರ್ಮಿಸಿದೆ ಎನ್ನಲಾಗಿದೆ. Fastrack Women Silicone Trendies Analog Pink Dial Watch-68015Pp03/Np68015Pp03, Band Color-Pink
ಇದರಿಂದಾಗಿ ಷೇರು ಖರೀದಿದಾರರು ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರನ್ನು ಹುರಿದುಂಬಿಸಿದ್ದು, ಷೇರುಪೇಟೆ ಸೂಚ್ಯಂಕಗಳು ದೀಪಾವಳಿ ಮರುದಿನವೇ ಭರ್ಜರಿ ಏರಿಕೆ ಕಂಡಿದೆ. ಭಾರತ ಹಾಗೂ ಅಮೆರಿಕಾದ ಒಪ್ಪಂದದ ಭರವಸೆಯಿಂದ ರೂಪಾಯಿ ಮೌಲ್ಯ ಚೇತರಿಕೆ ಮಾರುಕಟ್ಟೆ ಸೇರಿದಂತೆ ಇನ್ನಿತರೆ ನಿರೀಕ್ಷೆಗಳು ನಾಗಾಲೋಟಕ್ಕೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ತಂಪೆರೆದ ವಾತಾವರಣ: ಹೆಚ್ಚು ಮಳೆಯಾಗುವುದಾಗಿ ಘೋಷಿಸಿದ ಹವಾಮಾನ ಇಲಾಖೆ!