ಕಳೆದ ವಾರ ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಜಗಳ ನಡೆದಿದೆ. ಈ ವೇಳೆ ಅಶ್ವಿನಿ ಗೌಡ ರಕ್ಷಿತಾ ಉಡುಗೆ, ಅವರ ವ್ಯಕ್ತಿತ್ವ ಹಾಗೂ ನಡೆ ಕುರಿತು ಮಾತನಾಡುತ್ತಾ ‘ಶಿ ಈಸ್ ಎ ಎಸ್’ ಎಂಬ ಪದವನ್ನು ಬಳಸಿದ್ದರು. ಈ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರೇಕ್ಷಕರಲ್ಲಿ ಚರ್ಚೆ ಹುಟ್ಟಿಸಿದೆ.Titan Minimalist Quartz Analog with Date Black Dial Black Metal Strap Watch for Men - NT1806NM01
ಅಶ್ವಿನಿ ಗೌಡ ಅವರ ಈ ಪದ ಬಳಕೆಯನ್ನು ವೀಕ್ಷಕರಿಗೆ ಅಸಹಜವಾಗಿ ಕಂಡು, ವೀಕೆಂಡ್ ಎಪಿಸೋಡ್‌ನಲ್ಲಿ ಶೋ ನಿರೂಪಕ ಸುದೀಪ್ ಅವರು ಟೀಕಿಸಿದ್ದರು. ಈ ಟೀಕೆಗೆ ತಕ್ಷಣ ಪ್ರತಿಕ್ರಿಯಿಸಿ, ಅಶ್ವಿನಿ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದರು. ರಕ್ಷಿತಾ ಕೂಡ ಕ್ಷಮೆ ಸ್ವೀಕರಿಸಿದ್ದರು.1997ರಿಂದ ಇಂದು: ಭೂಮಿ ತಾಯಿಯಿಂದ ಬಂಗಾರಮ್ಮ ವರೆಗೆ – ಮಂಜು ಭಾಷಿಣಿಯ ಯಶಸ್ಸಿನ ದಾರಿ..!
ಆದರೆ, ಈಗ ಹೈಕೋರ್ಟ್ ವಕೀಲರೊಬ್ಬರು ಈ ಘಟನೆ ಕುರಿತು ಅಶ್ವಿನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಕೀಲ ಪ್ರಶಾಂತ್ ಮೆಹ್ತಾಲ್ ಅವರು ಅಶ್ವಿನಿ ಹಾಗೂ ಶೋ ಸಂಬಂಧಿತ ಕೆಲ ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಅಶ್ವಿನಿ ಗೌಡ ನಟಿಯಾಗಿರುವ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಮೇಲೆ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. ಈ ಹೊಸ ಪ್ರಕರಣದ ಮೂಲಕ ಇನ್ನೊಂದು ವಿಚಾರವೂ ವರ್ತಮಾನದಲ್ಲಿ ಬಂದಿದೆ.