ಆಸ್ಟ್ರೇಲಿಯಾ; ಸಾಕಷ್ಟು ಬೆಳವಣಿಗೆಗಳ ನಂತರ ಭಾರತದ ಏಕದಿನ ತಂಡದ ನಾಯಕನ ಬದಲಾವಣೆ ಆಗಿತ್ತು, ಆದರೂ ಅಂದುಕೊಂಡಂತೆ ಗೆಲುವು ಭಾರತ ಕ್ರಿಕೆಟ್ ತಂಡಕ್ಕೆ ಲಭಿಸಿಲ್ಲ. ಹೀಗಾಗಿ ಶುಭಮನ್ ನೇತೃತ್ವದ ಮೊದಲ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು ಸರಣಿ ಸೋಲನ್ನುಅನುಭವಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ನೆನ್ನೆ ನಡೆದ ಎರಡನೇ ಪಂದ್ಯದಲ್ಲಿ ಸೋಲುಂಡು ಸರಣಿಯನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿದೆ.TRASE Block Heels Sandals For Women, Dusky Stylish & Comfortable Footwear
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಇಬ್ಬರು ಹಿರಿಯ ಆಟಗಾರರಾಗಿದ್ದು ಇಬ್ಬರ ಬ್ಯಾಟ್ನಿಂದಲೂ ಸಹ ರನ್ ಮಳೆ ಹರಿಯಲಿಲ್ಲ, ಹೀಗಿದ್ದಾಗ ಆಸ್ಟ್ರೇಲಿಯಾ ಪಿಚ್‌ನಲ್ಲಿ ಬೇರೆ ಇನ್ಯಾವುದೇ ಬ್ಯಾಟರ್ ದೀರ್ಘಕಾಲಿಕ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಇದ್ದ ಕಾರಣದಿಂದ ಭಾರತ ಆಸಿಸ್‌ಗೆ ಶರಣಾಯ್ತು.ಇದನ್ನು ಓದಿ; ಮೆಲ್ಬೋರ್ನ್ ಪವಾಡ: ಪಾಕ್ ವಿರುದ್ಧ ವಿರಾಟ್ ರ ಅಮೋಘ 82* ರನ್ ಆಟಕ್ಕೆ 3 ವರ್ಷ; ನೆನಪಿದೆಯಾ 'ಶತಮಾನದ ಶಾಟ್'!
ನೆನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು, ಹೀಗಾಗಿ ಭಾರತ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆಯಿತು. ಈ ಕಾರಣದಿಂದ ಭಾರತ ನಿಗದಿತ 50 ಓವರ್ಗಳಲ್ಲಿ 264/9 ರನ್ಗಳನ್ನು ಗಳಿಸಿತು. ನಂತರ ಚೇಸಿಂಗ್‌ಗೆ ಇಳಿದ ಆಸ್ಟ್ರೇಲಿಯಾ 46.2 ಓವರ್ ಗಳಲ್ಲಿ 265/8 ರನ್ಗಳನ್ನು ಗಳಿಸಿ ಗುರಿ ಮುಟ್ಟಿತು.
ಆದರೆ ಎರಡನೇ ಪಂದ್ಯದಲ್ಲಿ ಉತ್ತಮ ಲಯ ಕಂಡುಕೊಂಡ ರೋಹಿತ್ 73 ರನ್ ಗಳಿಸಿದರು ಆದರೆ ನಾಯಕ ಗಿಲ್ ಮತ್ತೆ ತಮ್ಮ ಕಳಪೆ ಪ್ರದರ್ಶನದಿಂದ 9 ರನ್ ಗಳಿಸಿ ಔಟಾದರು. ಕೊಹ್ಲಿ ಕೂಡ ಸೊನ್ನೆಗೆ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ 61 ರನ್ ಗಳಿಸಿದರೆ, ಅಕ್ಷರ ಪಟೇಲ್ 44 ರನ್ ಗಳಿಸಿದರು. ನಂತರ ಬಂದ ಬ್ಯಾಟ್ಸ್‌ಮನ್ಗಳು ಯಾವುದೇ ಕೊಡುಗೆಯನ್ನು ನೀಡದೆ ನಿರ್ಗಮಿಸಿದರು.
ಹೀಗಾಗಿ ಅಂತಹ ಸವಾಲಿನ ಮೊತ್ತವನ್ನು ಕಲೆಹಾಕುವಲ್ಲಿ ಭಾರತ ವಿಫಲವಾಯಿತು.
ಹೀಗಾಗಿ ಮೂರನೇ ಪಂದ್ಯದಲ್ಲಿ ಭಾರತವು ಗೆದ್ದು ಮಾನ ಉಳಿಸಿಕೊಳ್ಳಬೇಕಿದೆ, ಇಲ್ಲವಾದರೆ ಕ್ಲೀನ್ ಸ್ವೀಪ್ಗೆ ಅಥವಾ ವೈಟ್ ವಾಶ್ ಆಗುವ ಸಾಧ್ಯತೆ ಇದೆ. ಹೀಗಾಗಿ ಗಿಲ್ ನೇತೃತ್ವದಲ್ಲಿ ಭಾರತ ಹೀನಾಯ ಸೋಲು ಕಂಡಿದ್ದು ಗಿಲ್‌ಗೆ ಈ ಪಾಠ ಮರೆಯದ ಪಾಠವಾಗಿದೆ.