Skip to main content
ವಿಡಿಯೋ
1/2
politics

ಬಿಕ್ಲು ಶಿವ ಹತ್ಯೆ ಕೇಸ್‌; ಬೈರತಿ ಬಸವರಾಜ್‌ಗೆ ರಕ್ಷಣೆ ಒದಗಿಸಿರುವ ಆದೇಶ ರದ್ದು ಮಾಡಿ ಎಂದು ಮನವಿ ಸಲ್ಲಿಸಿದ ಸರ್ಕಾರ

By Vinutha U
ಬಿಕ್ಲು ಶಿವ ಹತ್ಯೆ ಕೇಸ್‌; ಬೈರತಿ ಬಸವರಾಜ್‌ಗೆ ರಕ್ಷಣೆ ಒದಗಿಸಿರುವ ಆದೇಶ ರದ್ದು ಮಾಡಿ ಎಂದು ಮನವಿ ಸಲ್ಲಿಸಿದ ಸರ್ಕಾರ

ಶಾಸಕರ ಪರ ಹಿರಿಯ ವಕೀಲ ಸಂದೇಶ್ ಚೌಟ್ ಅವರು ತೀವ್ರ ವಾದ ಮಂಡಿಸಿದರು. “ಹೈಕೋರ್ಟ್ ಈಗಾಗಲೇ ಬಸವರಾಜ್ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಪೊಲೀಸರು ಎರಡು ಬಾರಿ ಸಮನ್ಸ್‌ಗಳನ್ನು ನೀಡಿದ್ದು, ಅದರಂತೆ ಅವರು ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ.

ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಅವರನ್ನು ಬಂಧಿಸದಂತೆ ನೀಡಿರುವ ಮಧ್ಯಂತರ ರಕ್ಷಣಾ ಆದೇಶವನ್ನು ರದ್ದುಗೊಳಿಸುವಂತೆ ಅಪರಾಧ ತನಿಖಾ ದಳ (ಸಿಐಡಿ) ಪೊಲೀಸರು ಗುರುವಾರ ಕರ್ನಾಟಕ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದಾರೆ.

ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಅವರು, ಕೋಕಾ ಕಾಯ್ದೆಯ ಸೆಕ್ಷನ್ಗಳು 3 ಮತ್ತು 4ಗಳನ್ನು ಹೇರಲು ಸಿಐಡಿ ಉಪಾಧಿಕಾರಿಗಳಿಗೆ ಅನುಮತಿ ನೀಡಿರುವ ಸಿಐಡಿ ಮಹಾನಿರ್ದೇಶಕರ ಆಗಸ್ಟ್ 12 ಆದೇಶವನ್ನು ರದ್ದುಗೊಳಿಸುವಂತೆ ಸಲ್ಲಿಸಿರುವ ಅರ್ಜಿಯ ಮೇಲೆ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z

ರಾಜ್ಯದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು ಸರ್ಕಾರದ ಪರವಾಗಿ, “ಬೈರತಿ ಬಸವರಾಜ್ ಅವರಿಗೆ ನೀಡಿರುವ ಮಧ್ಯಂತರ ರಕ್ಷಣಾ ಆದೇಶವನ್ನು ತೆರವುಗೊಳಿಸಬೇಕುಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಶಾಸಕರ ಪರ ಹಿರಿಯ ವಕೀಲ ಸಂದೇಶ್ ಚೌಟ್ ಅವರು ತೀವ್ರ ವಾದ ಮಂಡಿಸಿದರು. “ಹೈಕೋರ್ಟ್ ಈಗಾಗಲೇ ಬಸವರಾಜ್ ಅವರನ್ನು ಬಂಧಿಸದಂತೆ ತನಿಖಾಧಿಕಾರಿಗಳಿಗೆ ನಿರ್ದೇಶಿಸಿ ಮಧ್ಯಂತರ ಆದೇಶ ಹೊರಡಿಸಿದೆ. ಪೊಲೀಸರು ಎರಡು ಬಾರಿ ಸಮನ್ಸ್ಗಳನ್ನು ನೀಡಿದ್ದು, ಅದರಂತೆ ಅವರು ವಿಚಾರಣೆಗೆ ಹಾಜರಾಗಿ ಅಗತ್ಯ ಸಹಕಾರ ನೀಡಿದ್ದಾರೆ.

ಹೀಗಿದ್ದರೂ ಸಿಐಡಿ ಪೊಲೀಸರುತನಿಖೆಗೆ ಸಹಕರಿಸುತ್ತಿಲ್ಲ, ಬಂಧಿಸಿ ವಿಚಾರಣೆಗೆ ಒಳಪಡಿಸಬೇಕುಎಂದು ವಾದಿಸುವುದು ಸರಿಯಲ್ಲಎಂದು ಅವರು ಪೀಠಕ್ಕೆ ವಿವರಿಸಿದರು.“ಸಿಐಡಿ ಪೊಲೀಸರ ತನಿಖೆಗೆ ಸಹಕರಿಸಲು ಅರ್ಜಿದಾರರು ಸದಾ ಸಿದ್ಧರಿದ್ದಾರೆ. ಯಾವ ಸಮಯಕ್ಕೆ ಹಾಜರಾಗಬೇಕು ಎಂದು ತಿಳಿಸಿದರೆ, ಅದರಂತೆ ಅರ್ಜಿದಾರರು ನಡೆದುಕೊಳ್ಳುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗಿನ ಯಾವುದೇ ಸಮಯಕ್ಕೂ ಹಾಜರಾಗಲು ಸಿದ್ಧರಿದ್ದೇವೆ. ಮೆರವಣಿಗೆ ಪೈಪೋಟಿ: ಚಿತ್ತಾಪುರದಲ್ಲಿ ನವೆಂಬರ್ 2ರಂದು RSS, ಭೀಮ್ ಆರ್ಮಿ ಮತ್ತು ದಲಿತ ಸಂಘಟನೆಗಳ ಪಥಸಂಚಲನ

ಜೊತೆಗೆ, ಕೋಕಾ ಕಾಯ್ದೆಯ ಸೆಕ್ಷನ್ಗಳನ್ನು ಹೇರಿರುವುದು ಕಾನೂನುಬಾಹಿರವಾಗಿದೆಎಂದು ಸಂದೇಶ್ ಚೌಟ್ ತಿಳಿಸಿದರು.ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿತು. ಮಧ್ಯರೀತಿಯಲ್ಲಿ ಬಸವರಾಜ್ ಅವರ ಬಂಧನದ ಸಾಧ್ಯತೆ ತಡೆಯಲ್ಪಟ್ಟಿದ್ದು, ಪ್ರಕರಣದಲ್ಲಿ ಹೊಸ ಬೆಳವಣಿಗೆಗಳಿಗೆ ಎಲ್ಲರ ಎಚ್ಚರಿಕೆಯಿದೆ.