ಉಕ್ರೇನ್‌ನಲ್ಲಿ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವ ಯುದ್ಧದ ಸಂದರ್ಭದಲ್ಲಿ, ಅಮೆರಿಕವು ಉಕ್ರೇನ್‌ಗೆ ಟೊಮಾಹಾಕ್ ಕ್ಷಿಪಣಿಗಳನ್ನು ಪೂರೈಸುವುದರ ವಿರುದ್ಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಭೂಪ್ರದೇಶದ ಮೇಲೆ ದಾಳಿ ಮಾಡಲು ಇಂತಹ ಕ್ಷಿಪಣಿಗಳನ್ನು ಬಳಸಿದರೆ, ಅದರ ಪ್ರತಿಕ್ರಿಯೆ ಗಂಭೀರವಾಗಿರುತ್ತದೆ ಎಂದು ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಪುಟಿನ್ ಅವರ ಪ್ರಕಾರ, ಸಂಘರ್ಷ ಅಥವಾ ಯಾವುದೇ ವಿವಾದಗಳಿಗಿಂತ ಸಂವಾದವು ಯಾವಾಗಲೂ ಉತ್ತಮ. ವಿಶೇಷವಾಗಿ ಯುದ್ಧಕ್ಕಿಂತ ಉತ್ತಮ. ನಾವು ಯಾವಾಗಲೂ ಮಾತುಕತೆಯ ಮುಂದುವರಿಕೆಯನ್ನು ಬೆಂಬಲಿಸುತ್ತೇವೆ, ಆದರೆ ರಷ್ಯಾದ ಸುರಕ್ಷತೆಯ ವಿಷಯ ಬಂದಾಗ ರಾಜಿಯ ಮಾತಿಲ್ಲ ಎಂದು ಅವರು ಪ್ರತಿಪಾದಿಸಿದರು. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z
ಅಮೆರಿಕ ಇತ್ತೀಚೆಗೆ ರಷ್ಯಾದ ತೈಲ ಕಂಪನಿಗಳ ಮೇಲೆ ಹೇರಿದ ನಿರ್ಬಂಧಗಳ ಕುರಿತು ಮಾತನಾಡಿದ ಪುಟಿನ್, ಈ ಕ್ರಮಗಳು ಗಂಭೀರವಾಗಿದ್ದರೂ, ರಷ್ಯಾದ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವಷ್ಟು ಬಲವಾಗಿಲ್ಲ ಎಂದು ಹೇಳಿದರು. ಯುದ್ಧದ ವಿಷಯದಲ್ಲಿ ಪುಟಿನ್ ಪ್ರಾಮಾಣಿಕವಾಗಿಲ್ಲ ಎಂದು ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ನಿರ್ಬಂಧಗಳನ್ನು ಹೇರಲಾಗಿದೆ. ಬಿಕ್ಲು ಶಿವ ಹತ್ಯೆ ಕೇಸ್; ಬೈರತಿ ಬಸವರಾಜ್‌ಗೆ ರಕ್ಷಣೆ ಒದಗಿಸಿರುವ ಆದೇಶ ರದ್ದು ಮಾಡಿ ಎಂದು ಮನವಿ ಸಲ್ಲಿಸಿದ ಸರ್ಕಾರ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳಾದ ರಾಸ್ನೆಫ್ಟ್ ಮತ್ತು ಲುಕ್‌ಆಯಿಲ್ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದ್ದಾರೆ. ಬುಡಾಪೆಸ್ಟ್‌ನಲ್ಲಿ ಟ್ರಂಪ್ ಮತ್ತು ಪುಟಿನ್ ನಡುವೆ ನಡೆಯಬೇಕಿದ್ದ ಶೃಂಗಸಭೆ ರದ್ದಾದ ಒಂದು ದಿನದ ನಂತರ ಅಮೆರಿಕ ಈ ಕ್ರಮವನ್ನು ಪ್ರಕಟಿಸಿತು. ಈ ಕಂಪನಿಗಳು ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸುತ್ತಿವೆ ಎಂದು ಅಮೆರಿಕ ಆರೋಪಿಸಿದೆ.
ನಿರ್ಬಂಧಗಳ ಘೋಷಣೆಯ ನಂತರ ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಯಿತು. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $2.65 ಏರಿಕೆಯಾಗಿ $63.97 ತಲುಪಿತು. ಅಂತೆಯೇ, WTI ಕಚ್ಚಾ ತೈಲದ ಬೆಲೆ $2.14 ಹೆಚ್ಚಳವಾಗಿ $59.38ಕ್ಕೆ ಏರಿತು. ಅಮೆರಿಕದಲ್ಲಿ ಹೆಚ್ಚಿದ ಇಂಧನ ಬೇಡಿಕೆ ಮತ್ತು ಕಚ್ಚಾ ತೈಲ ದಾಸ್ತಾನುಗಳ ಕುಸಿತವೂ ಬೆಲೆ ಏರಿಕೆಗೆ ಕಾರಣವಾಗಿದೆ.