Skip to main content
ವಿಡಿಯೋ
1/3
general

ಭಾರತದ ರಕ್ಷಣಾ ವಲಯಕ್ಕೆ ₹79,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರದಿಂದ ಅಂಕಿತ

By Shravanthi R
ಭಾರತದ ರಕ್ಷಣಾ ವಲಯಕ್ಕೆ ₹79,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರದಿಂದ ಅಂಕಿತ

ದೇಶದ ರಕ್ಷಣಾ ಸಚಿವಾಲಯವು ಭಾರತೀಯ ಸೇನೆಯ ಬಲವರ್ಧನೆಗೆ ಮತ್ತಷ್ಟು ಕೊಡುಗೆಯಾಗಿ, ₹79,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿದೆ.

ಭಾರತದ ಸೇನಾಶಕ್ತಿಗೆ ಮತ್ತಷ್ಟು ಬಲತುಂಬಲು ರಕ್ಷಣಾ ವಲಯದ ₹79,000 ಕೋಟಿ ಮೌಲ್ಯದ ರಕ್ಷಣಾ ಉಪಕರಣಗಳ ಖರೀದಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ ಎಂದು ತಿಳಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿಯು (DAC) ಇದಕ್ಕೆ ಹಸ್ತಮುದ್ರೆ ಹಾಕಿದೆ ಎನ್ನಲಾಗಿದೆ.


ಸ್ವದೇಶಿ ಹಾಗೂ ಸ್ವಾವಲಂಬಿ ದೇಶಿಯ ಸ್ಥಳೀಯ ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಹಿನ್ನಲೆಯಾಗಿ, ಭಾರತೀಯ ಸೇನೆಗೆ ವಸ್ತು ನಿರ್ವಹಣಾ ಕ್ರೇನ್‌ಗಳು ಸೇರಿದಂತೆ ನಾಗ್ ಕ್ಷಿಪಣಿ ವ್ಯವಸ್ಥೆ (ಟ್ರ್ಯಾಕ್ಡ್) Mk-II (NAMIS), ನೆಲ ಆಧಾರಿತ ಮೊಬೈಲ್ ELINT ವ್ಯವಸ್ಥೆ (GBMES), ಮತ್ತು ಹೈ ಮೊಬಿಲಿಟಿ ವಾಹನಗಳು (HMV ಗಳು) ಖರೀದಿಗೆ ಅನುಮೋದನೆ (AON) ನೀಡಲು ನಿರ್ಧರಿಸಲಾಗಿದೆ. 

ಭಾರತೀಯ ನೌಕಾಪಡೆಗೆ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್ಸ್ (LPD ಗಳು), 30 mm ನೇವಲ್ ಸರ್ಫೇಸ್ ಗನ್‌ಗಳು (NSG ಗಳು), ಅಡ್ವಾನ್ಸ್ಡ್ ಲೈಟ್ ವೇಟ್ ಟಾರ್ಪಿಡೊಗಳು (ALWT ಗಳು), ಎಲೆಕ್ಟ್ರೋ-ಆಪ್ಟಿಕಲ್ ಇನ್ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕ್ ಸಿಸ್ಟಮ್‌ಗಳು ಮತ್ತು 76 mm ಸೂಪರ್ ರಾಪಿಡ್ ಗನ್ ಮೌಂಟ್‌ಗಾಗಿ ಸ್ಮಾರ್ಟ್ ಮದ್ದುಗುಂಡುಗಳ ಖರೀದಿಯನ್ನು ಅನುಮೋದಿಸಲಾಗಿದೆ ಎಂದು ಮಾಹಿತಿ ದೊರೆತಿದೆ. Amazon Brand - Supples Study Table for Kids | Suitable for 3-12 Years | Kids Study Table with Height Adjustable Table & Chair, Book Storage & Pen Holder | Pink | Candy Print

ಈ ಎಲ್ಲಾ ಸುಧಾರಿತ ಉಪಕರಣಗಳ ಸಾಮರ್ಥ್ಯ ಹಾಗೂ ಬಲವರ್ಧನೆಯಿಂದ ವಾಯುಪಡೆ ಹಾಗೂ ನೌಕಾಪಡೆಗಳ ಕಾರ್ಯಾಚರಣೆಗಳನ್ನು ಉದ್ದೀಪಿಸಲು ಹಾಗೂ ಉನ್ನತೀಕರಿಸಲು ಶ್ರಮಿಸಲಾಗಿದೆ ಎನ್ನಲಾಗಿದೆ. ಈ ಮೂಲಕ DRDO ಶಾಂತಿಪಾಲನಾ ಕಾರ್ಯಾಚರಣೆಗಳು, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದಲ್ಲಿ ಸಹಾಯ ಸೇರಿದಂತೆ, ದೀರ್ಘ-ಶ್ರೇಣಿಯ ಗುರಿ ತೊಡಗಿಸಿಕೊಳ್ಳುವಿಕೆಗಾಗಿ CLRTS, DS ಮತ್ತು ಇತರ ಪ್ರಸ್ತಾಪಗಳನ್ನು ಅನುಮೋದಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಷ್ಯಾದ ಜೊತೆಗೆ ಮಿಲಿಟರಿ ಸಂಪರ್ಕ - 45 ಕಂಪನಿಗಳು ಸೇರಿ ಭಾರತದ 3 ಕಂಪನಿಗಳಿಗೆ ಯುರೋಪಿಯನ್‌ ಒಕ್ಕೂಟದಿಂದ ನಿರ್ಬಂಧ!