ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan scheme) ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 20 ಕಂತುಗಳ ಹಣವನ್ನು ಬಿಡುಗಡೆ ಮಾಡಲಾಗಿದೆ. ಈಗ 9 ಕೋಟಿಗೂ ಅಧಿಕ ಫಲಾನುಭವಿ ರೈತರು 21ನೇ ಕಂತಿನ ಬಿಡುಗಡೆಗಾಗಿ ಕಾದು ನೋಡುತ್ತಿದ್ದಾರೆ. 20ನೇ ಕಂತು ಆಗಸ್ಟ್ನಲ್ಲಿ ಬಿಡುಗಡೆ ಆಗಿತ್ತು.
ಪಿಎಂ ಕಿಸಾನ್ ಯೋಜನೆಯ ಲಾಭವೇನು?
ಪಿಎಂ ಕಿಸಾನ್ ಯೋಜನೆಯನ್ನು ರೈತರ ಕೃಷಿ ಕಾರ್ಯಗಳಿಗೆ ನೆರವಾಗಲೆಂದು ರೂಪಿಸಲಾಗಿದೆ. ವ್ಯವಸಾಯಕ್ಕೆ ಅನುಕೂಲವಾಗಲೆಂದು ಸರ್ಕಾರವು ಪ್ರತೀ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2,000 ರೂ.ಗಳ ಸಹಾಯಧನವನ್ನು ನೇರವಾಗಿ ಅವರ ಖಾತೆಗಳಿಗೆ ನೀಡುತ್ತದೆ. ಬಿಕ್ಲು ಶಿವ ಹತ್ಯೆ ಕೇಸ್; ಬೈರತಿ ಬಸವರಾಜ್‌ಗೆ ರಕ್ಷಣೆ ಒದಗಿಸಿರುವ ಆದೇಶ ರದ್ದು ಮಾಡಿ ಎಂದು ಮನವಿ ಸಲ್ಲಿಸಿದ ಸರ್ಕಾರ
ವರ್ಷಕ್ಕೆ ಒಟ್ಟು 6,000 ರೂ. ಹಣವು ರೈತರಿಗೆ ಸಿಗುತ್ತದೆ. ಕಂತಿನ ಹಣವು ಸಾಮಾನ್ಯವಾಗಿ ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್, ಮತ್ತು ಡಿಸೆಂಬರ್-ಮಾರ್ಚ್ ಈ ಅವಧಿಗಳಲ್ಲಿ ಬಿಡುಗಡೆ ಆಗುತ್ತದೆ.
21ನೇ ಕಂತಿನ ಬಿಡುಗಡೆ ಯಾವಾಗ?
ಕಳೆದ ಬಾರಿಯ ಪಿಎಂ ಕಿಸಾನ್ ಕಂತಿನ ಹಣ (20ನೇ ಕಂತು) ತಡವಾಗಿ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಈ ಬಾರಿ 21ನೇ ಕಂತಿನ ಹಣವು ಈ ತಿಂಗಳ (ಅಕ್ಟೋಬರ್) ಒಳಗೇ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಅಕ್ಟೋಬರ್ನಲ್ಲಿ ಬಿಡುಗಡೆ ಆಗದಿದ್ದರೂ, ಮುಂದಿನ ತಿಂಗಳಾದ ನವೆಂಬರ್ನಲ್ಲಿ 21ನೇ ಕಂತು ಬಿಡುಗಡೆಯಾಗುವುದು ನಿಶ್ಚಿತವಾಗಿದೆ. ಈ ಬಾರಿ 10 ಕೋಟಿ ರೈತರಿಗೆ ಪಿಎಂ ಕಿಸಾನ್ ಹಣ ಸಿಗುವ ನಿರೀಕ್ಷೆ ಇದೆ. https://dv7jujfts4bjf.cloudfront.net/Untitled design - 2025-10-24T080142.136.png_2025-10-24T02:32:24.619Z
ಯೋಜನೆಗೆ ಯಾರು ಅರ್ಹರು?
ಯೋಜನೆಯಲ್ಲಿ ನೊಂದಾಯಿಸಿಕೊಳ್ಳಲು ರೈತರ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು.
ಅನರ್ಹರು: ಐಟಿಆರ್ (ITR) ಸಲ್ಲಿಸುತ್ತಿರುವವರು, ವೈದ್ಯರು, ಎಂಜಿನಿಯರ್ಗಳು ಇತ್ಯಾದಿ ವೃತ್ತಿಪರರು, ಸರ್ಕಾರಿ ಉದ್ಯೋಗಿಗಳು, ಪಿಂಚಣಿದಾರರು ಮತ್ತು ಜನಪ್ರತಿನಿಧಿಗಳಂತಹವರು ಕೃಷಿ ಭೂಮಿ ಹೊಂದಿದ್ದರೂ ಸಹ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.